ಬದ್ಮಾಶ್ ಗೆ ಸೆನ್ಸಾರ್ ಗ್ರೀನ್ ಸಿಗ್ನಲ್.. ತೆರೆ ಮೇಲೆ ಸಿಪಾಯಿ ಆಟ ಶುರು.. ಇವು ಈ ಶುಕ್ರವಾರದ ಚಿತ್ರಪಟಗಳು

ಡಿಜಿಟಲ್ ಕನ್ನಡ ಟೀಮ್:

ನಾಯಕ ನಟ ಧನಂಜಯ್ ಅವರ ಮುಂದಿನ ಚಿತ್ರ ‘ಬದ್ಮಾಶ್’ ಗೆ ಸೆನ್ಸಾರ್ ಮಂಡಳಿ ಅಸ್ತು ಎಂದಿದೆ. ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿ ಕಶ್ಯಪ್ ನಿರ್ಮಾಣದ ಈ ಚಿತ್ರಕ್ಕೆ ಆಕಾಶ್ ಶ್ರೀವತ್ಸ ಕಥೆ ಇದ್ದು, ಅವರೇ ನಿರ್ದೇಶನ ಮಾಡುತ್ತಿದ್ದಾರೆ. ತಾರಾಗಣದಲ್ಲಿ ಧನಂಜಯ್ ಅವರಿಗೆ ನಾಯಕಿಯಾಗಿ ಸಂಚಿತಾ ಶೆಟ್ಟಿ ಸಾಥ್ ನೀಡುತ್ತಿದ್ದು ಉಳಿದಂತೆ ಅಚ್ಯುತ ಕುಮಾರ್, ಜಹಂಗೀರ್, ರಮೇಶ್ ಭಟ್, ಬಿ.ಸುರೇಶ್, ಪ್ರಕಾಶ್ ಬೆಳವಾಡಿ, ಬಿರಾದಾರ್ ಸೇರಿದಂತೆ ಅನೇಕ ನಟರು ಇದ್ದಾರೆ.

ಈ ಚಿತ್ರದಲ್ಲಿ ಧನಂಜಯ್ ಹಾಗೂ ಸಂಚಿತಾ ಶೆಟ್ಟಿ ಅವರ ಲುಕ್ ಹೇಗಿದೆ ಅಂತಾ ಈ ಚಿತ್ರಗಳಲ್ಲಿ ನೋಡಬಹುದು…

IMG_5479

_DSC8168

ಇನ್ನು ಲೂಸಿಯಾ ಖ್ಯಾತಿಯ ಶೃತಿ ಹರಿಹರನ್ ಅವರು ಅಭಿನಯಿಸಿರುವ ಸಿಪಾಯಿ ಚಿತ್ರ ಈ ವಾರ ತೆರೆ ಕಂಡಿದೆ. ಆರೆಂಜ್ ಪಿಕ್ಸಲ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ರಜತ್ ಮಯಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸಿದ್ಧಾರ್ಥ್ ಮಹೇಶ್ ನಾಯಕರಾಗಿ ಅಭಿನಯಿಸಿದ್ದು, ತಾರಾಬಳಗದಲ್ಲಿ ಸಂಚಾರಿ ವಿಜಯ್, ಅತ್ಯುತ ಕುಮಾರ್, ಗೌರೀಶ್ ಅಕ್ಕಿ, ಕೃಷ್ಣ ಹೆಬ್ಬಾಳೆ ಸೇರಿದಂತೆ ಮುಂತಾದವರಿದ್ದಾರೆ. ಈ ಚಿತ್ರದ ಕೆಲವು ಫೋಟೊಗಳು ಹೀಗಿವೆ…

LI6A0619

siddarth mahesh - shruthi hariharan

siddarth mahesh

Leave a Reply