ಡಿಜಿಟಲ್ ಕನ್ನಡ ಟೀಮ್:
ಮುಂದಿನ ದಿನಗಳಲ್ಲಿ ಕನ್ನಡ ಸಿನಿ ರಸಿಕರ ಮುಂದೆ ಸಾಲು ಸಾಲು ಬಹುನಿರೀಕ್ಷಿತ ಚಿತ್ರಗಳುಬರುತ್ತಿವೆ. ಪುನೀತ್ ರಾಜ್ ಕುಮಾರ್ ಅವರ ದೊಡ್ಮನೆ ಹುಡುಗ, ಉಪೇಂದ್ರ ಹಾಗೂ ಸುದೀಪ್ ಅಭಿನಯದ ಮುಕುಂದ ಮುರಾರಿ, ಪ್ರಕಾಶ್ ರೈ ಅವರ ಇದೊಳ್ಳೆ ರಾಮಾಯಣ, ಧನಂಜಯ್ ಅವರ ಬದ್ಮಾಶ್ ಹೀಗೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿರೋ ಚಿತ್ರಗಳು ಮುಂದಿನ ದಿನಗಳಲ್ಲಿ ತೆರೆ ಮೇಲೆ ಬರಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ತಿವೆ. ಚಿತ್ರ ತೆರೆ ಮೇಲೆ ಪ್ರದರ್ಶನವಾಗುವವರೆಗೂ ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳು ಈ ಸಿನಿಮಾಗಳ ಚಿತ್ರಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದು…
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರೆಬಲ್ ಸ್ಟಾರ್ ಅಂಬರೀಷ್ ಅವರನ್ನೊಳಗೊಂಡ ಸೂರಿ ನಿರ್ದೇಶನದ ‘ದೊಡ್ಮನೆ ಹುಡುಗ’ ಈಗ ಕನ್ನಡ ಸಿನಿ ರಸಿಕರ ಹಾಟ್ ಫೇವರಿಟ್. ಸದ್ಯದಲ್ಲೇ ತೆರೆ ಮೇಲೆ ಆಗಮಿಸಲು ಸಿದ್ಧವಾಗಿರೋ ಈ ದೊಡ್ಮನೆ ಹುಡುಗನ ಫೋಟೋಗಳು ಹೀಗಿವೆ ನೋಡಿ…
ಇನ್ನು ಇದೇ ಮೊದಲ ಬಾರಿಗೆ ಅಬಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ‘ಮುಕುಂದಾ ಮುರಾರಿ’ ಚಿತ್ರದಲ್ಲಿ ಈ ಇಬ್ಬರ ಕಾಂಬಿನೇಷನ್ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ಸುದೀಪ್ ಕೃಷ್ಣನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಚಿತ್ರಗಳು ನಿಮಗಾಗಿ…
ಪ್ರಕಾಶ್ ರೈ ಈಗ ಮತ್ತೊಮ್ಮೆ ವಿಭಿನ್ನ ರೀತಿಯ ಸಿನಿಮಾಕ್ಕೆ ಕೈಹಾಕಿದ್ದಾರೆ. ಅದು ‘ಇದೊಳ್ಳೆ ರಾಮಾಯಣ’ ಎಂಬ ಚಿತ್ರದ ಮೂಲಕ. ಖ್ಯಾತ ನಟಿ ಪ್ರಿಯಾಮಣಿ ಹಾಗೂ ಸ್ವತಃ ಪ್ರಕಾಶ್ ರೈ ಅಭಿನಯಿಸಿರುವ ಈ ಚಿತ್ರದ ಸ್ಟೀಲ್ ಗಳು ಹೀಗಿವೆ….
ಇನ್ನು ಸೆನ್ಸಾರ್ ಮಂಡಳಿಯಿಂದ ಓಕೆ ಎನಿಸಿಕೊಂಡು ಭರ್ಜರಿ ಪ್ರಚಾರ ನಡೆಸುತ್ತಿರುವ ‘ಬದ್ಮಾಶ್’ ಚಿತ್ರ ಸಹ ತೆರೆಗೆ ಬರಲು ಅಂತಿಮ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಚಿತ್ರದ ಹಾಡಿನ ಚಿತ್ರಿಕರಣದ ವೇಳೆ ನಾಯಕ ಧನಂಜಯ್ ಹಾಗೂ ನಾಯಕಿ ಸಂಚಿತಾ ಶೆಟ್ಟಿ ಕಾಣಿಸಿಕೊಂಡ ಪರಿ ಹೀಗಿದೆ….
ಇನ್ನು ‘ಮರಿ ಟೈಗರ್’ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷರ ಮುಂದೆ ಪರೀಕ್ಷೆಗೆ ಸಿದ್ಧವಾಗುತ್ತಿದ್ದಾರೆ, ವಿನೋದ್ ಪ್ರಭಾಕರ್. ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಇತ್ತೀಚೆಗೆ ಯಲಹಂಕ ರೈಲ್ವೇ ನಿಲ್ದಾಣದ ಬಳಿ ನಡೆದಿದ್ದು, ಅದರು ಫೋಟೋಗಳು ಇಲ್ಲಿವೆ…