ಇಸ್ರೋ ಜಿಸ್ಯಾಟ್-18 ಯಶಸ್ವಿ ಉಡ್ಡಯನ, ನೀವು ತಿಳಿದಿರಬೇಕಾದ ಸಂಗತಿಗಳು

(ಚಿತ್ರಕೃಪೆ- ಇಸ್ರೊ)

ಡಿಜಿಟಲ್ ಕನ್ನಡ ಟೀಮ್:

ಫ್ರಾನ್ಸ್ ನೆಲೆಯಿಂದ ಭಾರತದ ದೂರಸಂಪರ್ಕ ಉಪಗ್ರಹ ಜಿಸ್ಯಾಟ್-18 ಅನ್ನು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.

ಇಸ್ರೊದ ಈ ಉಪಗ್ರಹ ದೇಶದ ದೂರಸಂಪರ್ಕ ಸೇವೆಯನ್ನು ಬಲಪಡಿಸಲಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತ ಹಳೆಯದಾಗಿರುವ ಉಪಗ್ರಹಗಳ ಕೊರತೆಯನ್ನಿದು ತುಂಬಲಿದೆ. ಈಗಾಗಲೇ ಭಾರತದ 14 ಉಪಗ್ರಹಗಳು ದೂರಸಂಪರ್ಕ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿವೆ.

3404 ಕೆಜಿಯ ಉಪಗ್ರಹವು ಸಾಮಾನ್ಯ ಸಿ ಬ್ಯಾಂಡ್, ಮೇಲ್ಮಟ್ಟದ ವಿಸ್ತೃತ ಸಿ ಬ್ಯಾಂಡ್ ಹಾಗೂ ಕು-ಬ್ಯಾಂಡ್ ತರಂಗಾಂತರದಲ್ಲಿ ಸೇವೆಗಳಿಗೆ ಸಹಕರಿಸುತ್ತದೆ.

ಜಿಸ್ಯಾಟ್-18 ಹೊಂದಿರುವ ಆಯುಷ್ಯ 15 ವರ್ಷಗಳು.  ಇದೀಗ ಯಶಸ್ವಿ ಉಡ್ಡಯನವಾಗಿದೆ, ಆದರೆ ಇದನ್ನು ಮೇಲುಸ್ತರಕ್ಕೇರಿಸಿ ಕಕ್ಷೆಯಲ್ಲಿಡುವ ಹಾಗೂ ನಂತರದ ನಿಯಂತ್ರಣ ಕಾರ್ಯಗಳನ್ನೆಲ್ಲ  ಹಾಸನದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ ವಿಭಾಗ ಮಾಡಲಿದೆ.

ಟಿವಿ, ದೂರಸಂಪರ್ಕ, ವಿಸ್ಯಾಟ್ ಹಾಗೂ ಡಿಜಿಟಲ್ ಸ್ಯಾಟಲೈಟ್ ಸುದ್ದಿ ಸಂಗ್ರಹ ಇವಕ್ಕೆಲ್ಲ ಮುಂಬರುವ ದಿನಗಳಲ್ಲಿ ಈ ಉಪಗ್ರಹ ಸಹಕರಿಸಲಿದೆ ಎಂದು ಇಸ್ರೊ ಹೇಳಿದೆ. ಜಿಸ್ಯಾಟ್17 ಮತ್ತು ಜಿಸ್ಯಾಟ್ 11 ಎಂಬ ಇನ್ನೆರಡು ಉಪಗ್ರಹಗಳನ್ನೂ ಇಸ್ರೊ ತಯಾರಿಸುತ್ತಿದ್ದು ಮುಂದಿನ ವರ್ಷ ಅವೆರಡೂ ಉಡ್ಡಯನವಾಗಲಿವೆ.  ಈ ಪೈಕಿ ಜಿಸ್ಯಾಟ್ 17, ಆಯಸ್ಸು ಮುಗಿದಿರುವ ಹಳೆಯ ಉಪಗ್ರಹಗಳಿಗೆ ಪರ್ಯಾಯ. ಆದರೆ ಜಿಸ್ಯಾಟ್ 11 ನಾಲ್ಕನೇ ತಲೆಮಾರಿನ ಉಪಗ್ರಹವಾಗಿದ್ದು ಮಹಾತ್ವಾಕಾಂಕ್ಷಿ ಯೋಜನೆಯಾಗಿದೆ.

ಇಂದಿನ ಜಿಸ್ಯಾಟ್-18ರ ಜತೆಯಲ್ಲೇ ಕ್ಯಾಲಿಫೋರ್ನಿಯಾದ ಸ್ಕೈ ಮಸ್ಟರ್ -2 ಸಹ ಪ್ರಯಾಣಿಸಿದ್ದು, ಇದೂ ಆಸ್ಟ್ರೇಲಿಯ ಗ್ರಾಮೀಣ ಭಾಗದ ಡಿಜಿಟಲ್ ಕಂದರವನ್ನು ತುಂಬುವ ಉದ್ದೇಶ ಇಟ್ಟುಕೊಂಡಿದೆ.

Leave a Reply