ಗಾಂಧಿನಗರದಲ್ಲಿ ಜಾನ್ ಜಾನಿ ಜನಾರ್ಧನ್ ಹವಾ, ನ.18ಕ್ಕೆ ಬರ್ತಿದ್ದಾನೆ ಬದ್ಮಾಶ್, ಈ ವಾರದ ಕನ್ನಡ ಸಿನಿಮಾ ಚಿತ್ರಪಟಗಳು

ಡಿಜಿಟಲ್ ಕನ್ನಡ ಟೀಮ್:

ಎಂ.ಆರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪದ್ಮನಾಭ್, ಶಶಿಕಿರಣ್ ಮತ್ತು ಗಿರೀಶ್ ಅವರ ನಿರ್ಮಾಣ ಹಾಗೂ ಗುರುದೇಶಪಾಂಡೆ ನಿರ್ದೇಶನದ ‘ಜಾನ್ ಜಾನಿ ಜನಾರ್ಧನ್’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಲೂಸ್ ಮಾದ ಯೋಗಿ, ಕೃಷ್ಣನ್ ಲವ್ ಸ್ಟೋರಿ ಖ್ಯಾತಿಯ ಅಜಯ್ ರಾವ್ ಮತ್ತು ಮದರಂಗಿ ಖ್ಯಾತಿಯ ಕೃಷ್ಣ ಅಭಿನಯದ ಈ ಚಿತ್ರ ಸಾಕಷ್ಟು ಪ್ರಚಾರದೊಂದಿಗೆ ಸದ್ದು ಮಾಡುತ್ತಿದ್ದು, ಚಿತ್ರದಲ್ಲಿ ಈ ಮೂವರು ನಾಯಕರ ಸ್ಟೈಲಿಶ್ ಲುಕ್ ಇಲ್ಲಿದೆ ನೋಡಿ…

film

_MGL1185-min

_MG_3612-min

ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ನಟ ಧನಂಜಯ್ ಅಭಿನಯದ ‘ಬದ್ಮಾಶ್’ ಚಿತ್ರ ಇದೆ ನವೆಂಬರ್ 18ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ಧನಂಜಯ್ ಅವರ ಮಾಸ್ ಲುಕ್ ಹೀಗಿದೆ…

IMG_9127-min

IMG_8688-min

ಖ್ಯಾತ ನಟ ಮತ್ತು ನಿರ್ದೇಶಕ ರಮೇಶ್ ಅರವಿಂದ್ ಅವರ ನಿರ್ದೇಶನದಲ್ಲಿ ಮೂಡಿ ಬರುವ ಸುರಸುಂದರಾಂಗ ಜಾಣ ಚಿತ್ರದ ಚಿತ್ರೀಕರಣ ಮುಂದುವರಿದಿದ್ದು, ನಾಯಕ ಮತ್ತು ನಾಯಕಿಯಾಗಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಾನ್ವಿ ಶ್ರೀವಾಸ್ತ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಇವರಿಬ್ಬರ ಜೋಡಿ ಸಖತ್ ಆಗಿದ್ದು ಇವರ ಫೋಟೊ ಇಲ್ಲಿದೆ…

5-min

23-min

Leave a Reply