ಡಿಜಿಟಲ್ ಕನ್ನಡ ಟೀಮ್:
‘ಇಂದು ಪಂಡಿತ್ ಜವಹಾರ್ ಲಾಲ್ ನೆಹರು ಅವರ ಜನ್ಮದಿನ. ದೇಶದ ಮೊದಲ ಪ್ರಧಾನಿ ನೆಹರು ಅವರು ರಾಷ್ಟ್ರದ ಉದ್ಧಾರಕ್ಕಾಗಿ ಹಲವು ಯೋಜನೆಗಳನ್ನು ಕೈಗೊಂಡಿದ್ದರು. ಆದರೆ, ಅವರ ಪಕ್ಷ ಕಾಂಗ್ರೆಸ್ ಅದನ್ನು ಪೂರ್ಣಗೊಳಿಸಲಿಲ್ಲ. ನಾನೀಗ ಆ ಕೆಲಸ ಮಾಡುತ್ತಿದ್ದೇನೆ…’
ಇದು ಉತ್ತರ ಪ್ರದೇಶ ಘಾಜೀಪುರದಲ್ಲಿ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಮೋದಿ ಅವರು ನೆಹರು ಅವರನ್ನು ಸ್ಮರಿಸುತ್ತಲೇ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಪರಿ.
ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೋಡಿದ್ದ ಅವರು ಕಾಂಗ್ರೆಸ್ ನಾಯಕರನ್ನು ಹಿಗ್ಗಾಮುಗ್ಗ ಜಾಡಿಸಿ ಜನರಿಂದ ಜೈಕಾರ ಗಿಟ್ಟಿಸಿಕೊಂಡರು. ಬೇಕಂತಲೇ ನೆಹರು ಜನ್ಮದಿನವನ್ನು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಳ್ಳಲು ಬಳಸಿಕೊಳ್ಳುತ್ತಿರುವುದಾಗಿ ಹೇಳಿದ ಮೋದಿ ಅವರು ತುರ್ತು ಪರಿಸ್ಥಿತಿ, 25 ಪೈಸೆ ರದ್ದು, ಮತ್ತಿತರ ಕ್ರಮಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರಗಳನ್ನು ಜಾಡಿಸಿದರು.
‘ಬಡತನ ನಿರ್ಮೂಲನೆ, ರಾಷ್ಟ್ರ ಪ್ರಗತಿ ಹಿನ್ನೆಲೆಯಲ್ಲಿ ನೆಹರು ಪಟೇಲ್ ಸಮಿತಿ ರಚಿಸಿದ್ದರು. ಈ ಸಮಿತಿ ಹಲವಾರು ಶಿಫಾರಸ್ಸುಗಳನ್ನು ನೆಹರು ಸರ್ಕಾರಕ್ಕೆ ಸಲ್ಲಿಸಿತ್ತು. ಅಲ್ಲಿಂದ ಇಲ್ಲಿಯವರೆಗೂ ಬಂದ ಯಾವುದೇ ಕಾಂಗ್ರೆಸ್ ಸರ್ಕಾರಗಳು ಪಟೇಲ್ ಸಮಿತಿ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಲು ವಿಫಲವಾಗಿವೆ. ನಾನೀಗ ಆ ಕಾರ್ಯ ಪೂರ್ಣಗೊಳಿಸಲು ಬಂದಿದ್ದೇನೆ. ಆದರೆ ನನ್ನ ಕೆಲಸವನ್ನು ನೆಹರು ಅವರ ಪಕ್ಷದವರೇ ವಿರೋಧಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಿಸಿದರು.
‘ನಮ್ಮ ಸರ್ಕಾರ ಕಪ್ಪುಹಣ ನಿಯಂತ್ರಣ ನಿರ್ಧಾರ ಕೈಗೊಂಡ ನಂತರ ಕಾಂಗ್ರೆಸ್ ನಾಯಕರು ಜನರ ಸಮಸ್ಯೆ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ ಇದೇ ಕಾಂಗ್ರೆಸ್ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೆ ತಂದು ದೇಶವನ್ನೇ ಜೈಲಿನಂತೆ ಮಾಡಿತ್ತು. ಆಗ ಎಲ್ಲಿ ಹೋಗಿತ್ತು ಈ ಕಾಳಜಿ? ಕಾಂಗ್ರೆಸ್ ಎಂದಾದರು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಿದೆಯೇ? ನಾಲ್ಕಾಣೆ ರದ್ದು ಮಾಡಿದ್ದರಲ್ಲೇ ಕಾಂಗ್ರೆಸ್ ಸಾಮರ್ಥ್ಯ ಏನೆಂಬುದು ಗೊತ್ತಾಗುತ್ತದೆ. ಅವರಿಗೆ ಚಿಲ್ಲರೆ 25 ಪೈಸೆಗಿಂತ ಮಿಗಿಲಾಗಿ ಯೋಚಿಸಲು ಬರುವುದೇ ಇಲ್ಲ. ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ಲೇವಡಿ ಮಾಡಿದರು.
‘ಭಯೋತ್ಪಾದಕರು, ನಕ್ಸಲರಿಗೆ ಹಣ ಪೂರೈಸುತ್ತಿರುವವರು ಯಾರು? ಗಡಿ ಮೂಲಕ ನಕಲಿ ನೋಟುಗಳನ್ನು ದೇಶದ ಒಳಗೆ ನುಸುಳುವಂತೆ ತರುತ್ತಿರುವವರು ಯಾರು? ಇಂತಹ ದೇಶ ದ್ರೋಹಿ ಚಟುವಟಿಕೆಗಳನ್ನು ನೋಡಿಕೊಂಡು ಸುಮ್ಮನಿರಬೇಕೆ? ಈ ನಕಲಿ ನೋಟುಗಳ ಅಧ್ಯಾಯಕ್ಕೆ ಅಂತ್ಯವಾಡಬೇರದೆ? ರಾಷ್ಟ್ರ ಸಂಪತ್ತನ್ನು ತಮ್ಮ ಹಾಸಿಗೆಯ ಅಡಿಯಲ್ಲಿ ಇಟ್ಟುಕೊಂಡಿರುವುದನ್ನು ಸಹಿಸಿಕೊಳ್ಳಬೇಕೆ? ಈವರೆಗೂ ಯಾರಾದರು ಗಂಗಾ ನದಿಯಲ್ಲಿ ನೋಟುಗಳನ್ನು ತೇಲಿಬಿಡುತ್ತಿದ್ದರೇ? ಕಪ್ಪುಹಣ ಹೊಂದಿರುವ ನಿಮ್ಮಂತಹವರ ಪಾಪವನ್ನು ಗಂಗೆ ಸಹ ತೊಳೆಯುವುದಿಲ್ಲ. ನಮ್ಮ ಸರ್ಕಾರದ ನಿರ್ಧಾರದಿಂದ ಇಂತಹ ಚಿತ್ರಣ ಗೋಚರಿಸುತ್ತಿವೆ. ಈ ನಿರ್ಧಾರದಿಂತ ಪ್ರಾಮಾಣಿಕರಿಗೆ ಕೊಂಚ ತೊಂದರೆಯಾಗಿರುವುದು ನಿಜ. ಆದರೆ, ಹೆಚ್ಚು ಕಾಲ ಇರುವುದಿಲ್ಲ. ಇದೀಗ ಬಡವರು ನೆಮ್ಮದಿಯಿಂದ ಮಲಗುತ್ತಿದ್ದರೆ ಶ್ರೀಮಂತರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ.’ ಎಂದು ತರಾಟೆಗೆ ತೆಗೆದುಕೊಂಡರು.
‘ತಾಯಂದಿರು ತಮ್ಮ ಹೆಣ್ಣು ಮಕ್ಕಳ ಮದುವೆಗೆ ಕೂಡಿಟ್ಟ ಹಣವನ್ನು ಪ್ರಧಾನಿ ಕಿತ್ತುಕೊಳ್ಳುತ್ತಿದ್ದಾರೆ ಎಂಬ ವದಂತಿ ಹಬ್ಬಿಸಲಾಗುತ್ತಿದೆ. ಆದರೆ ತಾಯಿಯಂದಿರೆ ಹಾಗೂ ಸಹೋದರಿಯರೇ, ನಾನು ನಿಮ್ಮ ಸಹೋದರ. ಈ ನಿಮ್ಮ ಸಹೋದರ ಬದುಕಿರುವವರೆಗೂ ನಿಮ್ಮ ಹಣದ ಮೇಲೆ ಯಾವುದೇ ಅಧಿಕಾರಿ ಕಣ್ಣಿಡಲು ಬಿಡುವುದಿಲ್ಲ. ನಿಮ್ಮ ಪರಿಶ್ರಮದ ಒಂದೊಂದು ಪೈಸೆಯೂ ವ್ಯರ್ಥವಾಗದಂತೆ ನಾನು ಕಾಪಾಡುತ್ತೇನೆ ಯಾವುದೇ ಅಧಿಕಾರಿಯಿಂದ ನಿಮಗೆ ತೊಂದರೆ ಆಗುವುದಿಲ್ಲ.’ ಎಂದು ಅಭಯ ಕೊಟ್ಟರು.
ಹೀಗೆ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ಇಂಚಿಚಾಂಗಿ ಹುರಿದು ಮುಕ್ಕಿದರು. ಮೋದಿ ಭಾಷಣ ಕೇವಲ ಕಾಂಗ್ರೆಸ್ ಮೇಲಿನ ದಾಳಿಗಷ್ಟೇ ಸೀಮಿತವಾಗಲಿಲ್ಲ. ಉತ್ತರ ಪ್ರದೇಶ ಅಭಿವೃದ್ಧಿಗೆ ತಮ್ಮ ಸರ್ಕಾರದ ನಿರ್ಧಾರಗಳನ್ನು ಅವರು ಎಳೆ ಎಳೆಯಾಗಿ ತೆರೆದಿಟ್ಟರು. ಇದನ್ನು ಜನ ಹರ್ಷೋದ್ಗಾರದಿಂದಲೇ ಸ್ವೀಕರಿಸಿದರು.
Great job, we r with modi ji
Modiji is the First Prime Minister who is dedicated his life to the development of our Country.
I am very proud about our PM.
Modiji ka ek ek nirdar se mera bharath brastachar se
Mukt hojayega.deen or dlith aam admine shayad araam
Se jeevan payega.Modiji jesa PM milna hamsaka
Poorvjanmuka punya hai.thanks modiji
Super pm ?