ಜಯಲಲಿತಾ ಬದುಕನ್ನು ಬಿಂಬಿಸುವ ಏಳು ಚಿತ್ರಗಳು

ಡಿಜಿಟಲ್ ಕನ್ನಡ ಟೀಮ್:

ಜಯಲಲಿತಾ ಅವರ ಪಾರ್ಥಿವ ಶರೀರ ದರ್ಶನಕ್ಕೆ ಚೆನ್ನೈಗೆ ಮಾನವ ಸಾಗರವೇ ಹರಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಸಹ ದೆಹಲಿಯಿಂದ ಆಗಮಿಸಿ ಅಂತಿಮ ನಮನ ಸಲ್ಲಿಸಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳ ನೇತಾರರಿಂದಲೂ ಸಂತಾಪಗಳು ಹರಿದುಬರುತ್ತಿವೆ.

ಹೀಗೆ ದೇಶವು ಜಯಲಲಿತಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರಬೇಕಾದರೆ ಆ ವ್ಯಕ್ತಿತ್ವವನ್ನು ಹಿಡಿದಿಡುವ ನುಡಿ ನಮನಕ್ಕಿಂತ ಕೆಲವು ಚಿತ್ರಗಳೇ ಜಯಾ ಬದುಕಿನ ಬಿಂಬವನ್ನು ಸಶಕ್ತವಾಗಿ ಹಿಡಿದಿಡುತ್ತವೆ. ವಿವಿಧ ಮೂಲಗಳಿಂದಾಯ್ದ ಅಂಥ ಏಳು ಚಿತ್ರಗಳು ಇಲ್ಲಿವೆ.

jaya7

ಸಿನಿಮಾ ಜಯಲಲಿತಾಗೆ ಇಷ್ಟವೆಂದೇನೂ ಆಗಿರದೇ ಒತ್ತಾಯಕ್ಕೆ ಬಣ್ಣ ಹಚ್ಚಿದ್ದಂತೆ. ಅದು ರಾಜಕೀಯಕ್ಕೂ ಸೇತುವೆಯಾಗಿ ಹಲವು ಏರಿಳಿತ, ಜಯಘೋಷಗಳಿಂದ ತುಂಬಿದ್ದ ಬದುಕು ಈಗ ನೋಡಿದರೆ ಸಿನಿಮಾದಂತೆಯೇ ಇದೆ..

 

jaya6

ತಮಿಳು-ತೆಲುಗು ವಲಯಗಳಲ್ಲಿ ಸಿನಿಮಾ ತಾರೆಗಳೆಂದರೆ ಆರಾಧನೆಗೆ ಒಳಗಾಗುವವರು. ಅಂಥದೇ ಆರಾಧನೆಯನ್ನು ರಾಜಕೀಯದಲ್ಲೂ ಜಯಾ ಪಡೆದರು. ಪಕ್ಷ ಸದಸ್ಯರಂತೂ ನಡು ಬಾಗಿಸಿ ಕೈಮುಗಿಯುವ ಪರಿಯೇ ರಾಜಕೀಯ ದಂತಕತೆ.

jaya4

ಪಕ್ಷ ಸದಸ್ಯರ ಮಾತು ಹಾಗಿರಲಿ. ತಮಿಳು ಜನರ ಕಲ್ಪನೆಯನ್ನೂ ಅಷ್ಟೇ ಮಟ್ಟದಲ್ಲಿ ಆಕರ್ಷಿಸಿದ್ದರಲ್ಲಿ ಜಯಾ ಯಶಸ್ಸಿದೆ. ಬಾಸಿಂಗದ ಮೇಲೂ ಕೂರುವಂತಾದ ಅಮ್ಮ ರಾಜಕಾರಣಿಯಂತಲ್ಲದೇ ಸಾಮ್ರಾಜ್ಞಿಯಂತೆ ಕಾಣುತ್ತಿದ್ದದ್ದು ಇದಕ್ಕೆ…

jaya

1996ರಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಜೈಲು…

 

jaya3

1998ರ ಎನ್ಡಿಎ ದಿನಗಳು..

jaya1

ಇಬ್ಬರು ಗಟ್ಟಿಗಿತ್ತಿಯರು…1984ರಲ್ಲಿ ರಾಜ್ಯಸಭೆ ಸದಸ್ಯೆಯಾಗಿ ಜಯಾ ಮಾಡಿದ್ದ ಭಾಷಣ ಇಂದಿರಾರಿಗೆ ಮೆಚ್ಚುಗೆಯಾಗಿತ್ತಂತೆ..

jaya2

ಸಂಗಾತಿ, ಗುರು ಎಂಜಿಆರ್ ಇಲ್ಲವಾದ ಕ್ಷಣ.. ಎಂಜಿಆರ್ ಕುಟುಂಬದ ತೀವ್ರ ವಿರೋಧದ ನಡುವೆಯೂ ಪಾರ್ಥಿವ ಶರೀರದ ಪಕ್ಕದಿಂದ ಜಯಾರನ್ನು ದೂರವಿರಿಸಲಾಗಿರಲಿಲ್ಲ.

Leave a Reply