ಜಯಲಲಿತಾ ತೀರಿಕೊಂಡಿದ್ದಷ್ಟೇ ಸುದ್ದಿಯಲ್ಲ, ಈ ಸದ್ದಿನ ನಡುವೆ ಅರಳಿರುವ ಸಾಧನಾಗಾಥೆಯೊಂದು ಗೊತ್ತೆ?

Solar panels are pictured at the Gujarat solar park at Charanka village of Patan district, some 250 kms from Ahmedabad on April 14, 2012. Western India's Gujarat state Chief Minister, Narendra Modi is scheduled to inaugurate the Charanka Solar Park, which has more than 200 MW of installed solar power capacity, on April 19. AFP PHOTO / Sam PANTHAKY (Photo credit should read SAM PANTHAKY/AFP/Getty Images)

ಡಿಜಿಟಲ್ ಕನ್ನಡ ಟೀಮ್:

ನಮ್ಮ ನೆರೆಯ ರಾಜ್ಯ ತಮಿಳುನಾಡು ಈಗ ಅಮ್ಮಾ ಎಂದೇ ಖ್ಯಾತಿಯಾಗಿದ್ದ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಕಳೆದುಕೊಂಡ ಸೂತಕದ ವಾತಾವರಣದಲ್ಲಿದೆ. ಇಂತಹ ವಾತಾವರಣದ ನಡುವೆಯೂ ನಾವೆಲ್ಲರು ಹೆಮ್ಮೆಪಡುವಂತಹ ಮಹತ್ವದ ಬೆಳವಣಿಗೆಯೊಂದು ಇತ್ತೀಚೆಗೆ ತಮಿಳುನಾಡಿನಲ್ಲಿ ಆಗಿದೆ. ಅದೇನೆಂದರೆ ವಿಶ್ವದಲ್ಲೇ ಅತಿದೊಡ್ಡ ಸೌರಶಕ್ತಿ ಉತ್ಪನ್ನ ಕೇಂದ್ರ ನಮ್ಮ ಹಿತ್ತಲಲ್ಲೇ ಉದ್ಘಾಟನೆಯಾಗಿದೆ.

ಹೌದು, ತಮಿಳುನಾಡಿನ ಮಧುರೈನಿಂದ 90 ಕಿ.ಮೀ ದೂರದಲ್ಲಿರುವ ಕಮುತಿ ಪ್ರದೇಶದಲ್ಲಿ ಈಗ ವಿಶ್ವದ ಅತ್ಯಂತ ದೊಡ್ಡ ಸೌರಶಕ್ತಿ ಉತ್ಪಾದನಾ ಕೇಂದ್ರ ಸ್ಥಾಪನೆಯಾಗಿದೆ. ಕಳೆದ ನವೆಂಬರ್ 30ರಂದು ಲೋಕಾರ್ಪಣೆಯಾದ ಕೇಂದ್ರವನ್ನು ಅದಾನಿ ಪವರ್ ಸಂಸ್ಥೆ ನಿರ್ಮಿಸಿದ್ದು, 648 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ.

1270 ಎಕರೆ ಪ್ರದೇಶದಲ್ಲಿ ಈ ಸೌರಶಕ್ತಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಈ ಕೇಂದ್ರಕ್ಕೆ 30 ಸಾವಿರ ಟನ್ ಕಬ್ಬಿಣ, 25 ಲಕ್ಷ ಸೋಲಾರ್ ಮಾದರಿಗಳನ್ನು ಅಳವಡಿಸಲಾಗಿದೆ. ಈ ಸೋಲಾರ್ ಮಾದರಿಗಳ ಜೋಡಣೆ ವ್ಯಾಪ್ತಿ 27 ಸಾವಿರ ಮೀಟರ್ ನಷ್ಟಿದೆ. ಈ ಕೇಂದ್ರದಲ್ಲಿ 576 ಇನ್ವೆಂಟರ್ ಗಳು, 154 ಟ್ರಾನ್ಸ್ ಮೀಟರ್ ಹಾಗೂ 7500 ಕಿ.ಮೀ ಉದ್ದರ ಕೇಬಲ್ ಗಳನ್ನು ಬಳಸಲಾಗಿದೆ. ಪ್ರತಿ ನಿತ್ಯ 11 ಮೆಗಾ ವ್ಯಾಟ್ ಸಾಮರ್ಥ್ಯದ ಮಾದರಿಯನ್ನು ಅಳವಡಿಸಲಾಗಿದ್ದು, ಈ ಕೇಂದ್ರ ಹಾಗೂ ಸೋಲಾರ್ ಮಾದರಿಗಳ ನಿರ್ವಹಣೆಗೆ 8500 ಜನರ ಪರಿಶ್ರಮವಿದೆ.

ಈ ಕೇಂದ್ರ ಕ್ಯಾಲಿಫೋರ್ನಿಯಾದಲ್ಲಿರುವ ತೊಪಾಜ್ ಸೋಲಾರ್ ಫಾರ್ಮ್ (550 ಮೆಗಾ ವ್ಯಾಟ್ಸ್) ಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದ್ದು, ಇದರಿಂದ ಶುದ್ಧ ಹಾಗೂ ಹಸಿರು ಶಕ್ತಿ ಉತ್ಪಾದನೆಯಾಗಲಿದ್ದು, ಭಾರತದ ಪಾಲಿಗೆ ಇದೊಂದು ಮಹತ್ವದ ಹೆಜ್ಜೆಯೇ ಸರಿ.

ಅಳಿವಿನ ಅಂಚಿನಲ್ಲಿರುವ ತೈಲ ಶಕ್ತಿಗೆ ಪರ್ಯಾಯವಾಗಿ ನಾವು ಮತ್ತೊಂದು ಶಕ್ತಿಯನ್ನು ಕಂಡುಕೊಳ್ಳಬೇಕಾದ ಅಗತ್ಯ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸೌರ ಶಕ್ತಿ ನಿಜಕ್ಕೂ ನಮ್ಮ ಮುಂದಿರುವ ಅತ್ಯುತ್ತಮ ಆಯ್ಕೆ. ಕಳೆದ ವರ್ಷ ಪ್ಯಾರಿಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಸೋಲಾರ್ ಅಲಿಯಾನ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಸೌರಶಕ್ತಿ ಹಾಗೂ ಅದರ ಮಹತ್ವವನ್ನು ಬಣ್ಣಿಸಿದ್ದು ಹೀಗೆ… ‘ಸೂರ್ಯ ಇಡೀ ಜಗತ್ತಿನಲ್ಲಿರುವ ಎಲ್ಲಾ ಶಕ್ತಿಗಳಿಗೂ ಮೂಲ. ಹೀಗಾಗಿಇಡೀ ವಿಶ್ವವೇ ಸೌರಶಕ್ತಿಯನ್ನು ಅವಲಂಬಿಸಬೇಕಾದ ಅಗತ್ಯವಿದೆ. ಸೌರಶಕ್ತಿಯೇ ನಮ್ಮ ಭವಿಷ್ಯ.’

ಭಾರತದ ಹಲವು ಪ್ರದೇಶಗಳು ವರ್ಷದ 365 ದಿನಗಳ ಪೈಕಿ 300 ದಿನಗಳ ಕಾಲ ಸೂರ್ಯನ ಶಕ್ತಿಯನ್ನು ಪಡೆಯುವ ಅವಕಾಶ ಹೊಂದಿವೆ. ಈ ಅವಕಾಶವನ್ನು ಬಳಸಿಕೊಳ್ಳುವತ್ತ ಭಾರತ ಈಗ ನಿಧಾನವಾಗಿ ಗಮನಹರಿಸಲು ಆರಂಭಿಸಿದೆ.

2010ರಲ್ಲಿ ಜವಹಾರ್ ಲಾಲ್ ನೆಹರು ನ್ಯಾಷನಲ್ ಸೋಲಾರ್ ಮಿಷನ್ ಮೂಲಕ 17.8 ಮೆಗಾ ವ್ಯಾಟ್ ಸೌರಶಕ್ತಿ ಉತ್ಪಾದನೆ ಮೂಲಕ ಭಾರತ ಈ ಶಕ್ತಿಯನ್ನು ಉತ್ಪಾದಿಸುವತ್ತ ಗಮನ ಹರಿಸಿತು. ನಂತರ 2013ರ ವೇಳೆಗೆ ಇದರ ಸಾಮರ್ಥ್ಯ 506.9 ಮೆಗಾ ವ್ಯಾಟಿಗೆ ಏರಿಕೆಯಾಯಿತು. ಎರಡು ವರ್ಷದ ಹಿಂದೆ ಹತ್ತು ಪಟ್ಟು ಹೆಚ್ಚಿನ ಸೌರ ವಿದ್ಯುತ್ ಉತ್ಪಾದನೆ ಗುರಿ ಹೊಂದಿದ ಕೇಂದ್ರ ಸರ್ಕಾರ ಆ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡುತ್ತಿದೆ. ದೇಶದಲ್ಲಿ ಸೌರಶಕ್ತಿ ಮೂಲಕ ಈ ವರ್ಷ ಅಕ್ಟೋಬರ್ ವರೆಗೂ 8727.62 ಮೆಗಾ ವ್ಯಾಟ್ ವಿದ್ಯುತ್ ಶಕ್ತಿ ಉತ್ಪಾದನೆಯಾಗಿದ್ದು, ಮುಂದಿನ ವರ್ಷ ಮಾರ್ಚ್ ವೇಳೆಗೆ 10,500 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ.

ಒಟ್ಟಿನಲ್ಲಿ ಭಾರತ ಸೌರ ವಿದ್ಯುತ್ ಶಕ್ತಿಯನ್ನು ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವತ್ತ ದಾಪುಗಾಲು ಹಾಕುತ್ತಿದ್ದು, ಈ ಪ್ರಯತ್ನಕ್ಕೆ ಕಮುತಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಸೋಲಾರ್ ಶಕ್ತಿ ಕೇಂದ್ರ ನಿಜಕ್ಕೂ ಮಹತ್ವದ ಪಾತ್ರ ನಿರ್ವಹಿಸಲಿದೆ.

Leave a Reply