ಕಲ್ಲು ತೂರಿಕೊಂಡಿದ್ದ ಕಾಶ್ಮೀರದ ಬೀದಿಗಳಲ್ಲೀಗ ಹಿಮಸ್ಪರ್ಶದ ಸ್ತಬ್ಧತೆ

 

ಡಿಜಿಟಲ್ ಕನ್ನಡ ಟೀಮ್:

ಕೆಲ ತಿಂಗಳಿಂದ ಹಿಂಸಾಗ್ರಸ್ತವಾಗಿ ಹೊತ್ತಿ ಉರಿಯುತ್ತಿರುವ ಸುದ್ದಿಯಿಂದಲೇ ಅಗ್ನಿಮುಖ ತೋರಿಕೊಂಡಿದ್ದ ಕಾಶ್ಮೀರದಲ್ಲಿ ಈ ಚಳಿಗಾಲದಲ್ಲಿ ಎಲ್ಲವೂ ಶಾಂತ…

ಮೊದಲಿಗೆ ನೋಟು ಅಮಾನ್ಯ ನೀತಿಯು ಅಲ್ಲಿನ ಪ್ರತ್ಯೇಕತಾವಾದಿಗಳ ಸಂಪನ್ಮೂಲ ಶಕ್ತಿಯನ್ನೇ ಅಡ್ಡಡ್ಡ ಮಲಗಿಸಿ, ಹಿಂಸಾಚಾರ ಪ್ರಾಯೋಜಕತ್ವವನ್ನು ನಿಲ್ಲಿಸಿಬಿಟ್ಟಿತು. ಕಲ್ಲು ತೂರುತ್ತಿದ್ದವರೆಲ್ಲ ಸುಮ್ಮಗಾದರು, ಶಾಲೆಗಳೆಲ್ಲ ತೆರೆದುಕೊಂಡವು.

ಇದೀಗ ಕಾಶ್ಮೀರವನ್ನು ಇನ್ನಷ್ಟು ಸ್ತಬ್ಧವಾಗಿಸಿರುವುದು ಪ್ರಕೃತಿ. ಕಾಶ್ಮೀರ ಕಣಿವೆಯನ್ನು ಇನ್ನಿಲ್ಲದಂತೆ ಹಿಮ ತಬ್ಬಿದೆ. ಎಲ್ಲವೂ ಶಾಂತ-ಸ್ತಬ್ಧವಾಗಿ ಕುಳಿತಿದೆ. ಮೈನಸ್ 5.1 ಡಿಗ್ರಿ ಸೆಲ್ಶಿಯಸ್ ನಲ್ಲಿ ಮುಖ ಹುದುಗಿಸಿರುವ ಶ್ರೀನಗರ, ಮೈನಸ್ 2.5 ಡಿಗ್ರಿ ಸೆಲ್ಶಿಯಸ್ ಹೊದ್ದಿರುವ ಕುಪ್ವಾರಾ, ಮೈನಸ್ 4.6 ಡಿಗ್ರಿ ಸೆಲ್ಶಿಯಸ್ ನ ಗುಲ್ಮಾರ್ಗ್… ಕಾಶ್ಮೀರ ಕಣಿವೆಯನ್ನು ನಿಜಾರ್ಥದಲ್ಲಿ ತಣ್ಣಗಾಗಿಸಿಬಿಟ್ಟಿದೆ ನಿಸರ್ಗ. ತಿಂಗಳ ಹಿಂದೆ ಹೊತ್ತಿ ಉರಿಯುತ್ತ ಭಯಾನಕತೆಯ ಬಿಂಬವಾಗಿದ್ದ ಕಾಶ್ಮೀರದ ಮನೋಹರ ಚಿತ್ರಗಳಿವೋ, ಇಲ್ಲಿ ಕತೆ ಹೇಳುತ್ತ ಕುಳಿತಿವೆ…

kashmir

kashmir3

kashmir5

kashmir1

kashmir4

Leave a Reply