ಈಶಾನ್ಯ ಭಾರತದಲ್ಲಿ ರಸ್ತೆ ಕ್ರಾಂತಿಯಾಗುತ್ತಿದೆ ಎನ್ನುವಷ್ಟರಲ್ಲಿ ಅಸ್ಸಾಮಿಗೆ ಕಿವಿ ಹಿಂಡಿದೆ ವಿಶ್ವಬ್ಯಾಂಕ್

ಡಿಜಿಟಲ್ ಕನ್ನಡ ಟೀಮ್:

ಅಸ್ಸಾಂನಲ್ಲಿ ರಸ್ತೆ ಸಂಪರ್ಕಕ್ಕಾಗಿ ಹಣ ಬಿಡುಗಡೆ ಮಾಡಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ಸಾಗದ ಪರಿಣಾಮ ವಿಶ್ವ ಬ್ಯಾಂಕ್ ಅಸ್ಸಾಂ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಅದೇನಂದರೆ, ಕಾಮಗಾರಿ ಮುಕ್ತಾಯಕ್ಕೆ 2018ರ ಮಾರ್ಚ್ ಅಂತ್ಯಕ್ಕೆ ಅಂತಿಮ ಗಡವು ಇದ್ದು, ಮುಂದಿನ ವರ್ಷ ಮಾರ್ಚ್ ವೇಳೆಗೆ ಕಾಮಗಾರಿ ಪ್ರಗತಿ ತೀವ್ರಗೊಳ್ಳದಿದ್ದರೆ ಈಗ ನೀಡಲಾಗುವ ಆರ್ಥಿಕ ಸಹಾಯಕ್ಕೆ ಕತ್ತರಿ ಹಾಕಲಾಗುವುದು ಎಂದು.

2012ರಲ್ಲಿ ಅಸ್ಸಾಂನಲ್ಲಿ ರಸ್ತೆ ಅಭಿವೃದ್ಧಿ ಹಾಗೂ ರಸ್ತೆ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಯೋಜನೆಯ ಆರಂಭದಲ್ಲಿ 300 ಕಿ.ಮೀ ರಸ್ತೆ ಅಗಲೀಕರಣ ಹಾಗೂ 200 ಕಿ.ಮೀ ರಸ್ತೆ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿತ್ತು. ನಂತರ ರಸ್ತೆ ಅಭಿವೃದ್ಧಿಯ ಗುರಿ 752 ಕಿ.ಮೀಗೆ ಹೆಚ್ಚಾಯಿತು. ಈ ಯೋಜನೆಗೆ 400 ಮಿಲಿಯನ್ ಅಮೆರಿಕನ್ ಡಾಲರ್ (₹ 2724 ಕೋಟಿ) ಮೊತ್ತ ವೆಚ್ಚ ತಗುಲಲಿದ್ದು, ವಿಶ್ವ ಬ್ಯಾಂಕ್ 320 ಮಿಲಿಯನ್ ಅಮೆರಿಕನ್ ಡಾಲರ್ (₹ 2179 ಕೋಟಿ) ಮೊತ್ತವನ್ನು ನೀಡಲು ನಿರ್ಧರಿಸಿತ್ತು,

ಈ ಯೋಜನೆಯ ನಾಲ್ಕನೇ ಮೂರರಷ್ಟು ಕಾಲಾವಧಿ ಮುಕ್ತಾಯವಾಗಿದ್ದರು ಯೋಜನೆ ಪ್ರಗತಿ ತೀರಾ ಕಡಿಮೆ ಮಟ್ಟದಲ್ಲಿದೆ. ರಸ್ತೆ ಅಗಲೀಕರಣದಲ್ಲಿ ಶೇ.5 ರಷ್ಟು ಮಾತ್ರ ಪೂರ್ಣಗೊಂಡಿದ್ದು, ಈವರೆಗೂ ಕೇವಲ 17 ಕಿ.ಮೀ ಮಾತ್ರ ರಸ್ತೆ ಅಗಲೀಕರಣ ಮಾಡಲಾಗಿದೆ. ಇನ್ನು 752 ಕಿ.ಮೀ ರಸ್ತೆ ಅಭಿವೃದ್ಧಿಯಲ್ಲಿ ಈವರೆಗೂ 206 ಕಿ.ಮೀ ಪೂರ್ಣಗೊಳಿಸಲಾಗಿದೆ. ಈ ವರೆಗೂ ವಿಶ್ವ ಬ್ಯಾಂಕಿನಿಂದ ಬಿಡುಗಡೆಯಾದ ಹಣದ ಪೈಕಿ ಶೇ.18ರಷ್ಟು ಮಾತ್ರ ಕೆಲಸಕ್ಕೆ ಖರ್ಚಾಗಿದೆ.

ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ವಿಶ್ವ ಬ್ಯಾಂಕ್ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಬ್ಯಾಂಕ್ ಮುಂದೆ ಎರಡು ಆಯ್ಕೆಗಳಿವೆ… ಅವುಗಳೆಂದರೆ ಮೊದಲನೆಯದಾಗಿ ಯೋಜನೆಗಾಗಿ ಬೀಡುಗಡೆ ಮಾಡಲು ನಿರ್ಧರಿಸಿರುವ ಹಣದಲ್ಲಿ ಸ್ವಲ್ಪ ಪ್ರಮಾಣಕ್ಕೆ ಕತ್ತರಿ ಹಾಕುವುದು (ಅದರೊಂದಿಗೆ ₹ 2179 ಕೋಟಿ ಪೈಕಿ ₹ 476 ಕೋಟಿ ಕಡಿತ). ಎರಡನೆಯದು ಈ ಕಾಮಗಾರಿಯ ಕಾಲಾವಧಿಯನ್ನು ಕನಿಷ್ಠ 2 ವರ್ಷಕ್ಕೆ ವಿಸ್ತರಿಸುವುದು. ಈ ಬಗ್ಗೆ ಅಸ್ಸಾಂ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಮುಂದಿನ ಮಾರ್ಚ್ ತಿಂಗಳಾಂತ್ಯದ ಒಳಗೆ ಕಾಮಗಾರಿ ವೇಗವಾಗಿ ಸಾಗಿ ಪ್ರಗತಿ ಕಾಣಬೇಕು ಇಲ್ಲದಿದ್ದರೆ ಈಗ ನೀಡಲು ನಿರ್ಧರಿಸಲಾಗಿಕುವ ಹಣದಲ್ಲಿ ಕಡಿತ ಮಾಡುವುದಾಗಿ ತಿಳಿಸಿದೆ.

Leave a Reply