ಮೊಬೈಲ್ ಫೋನ್ ವಾಲೆಟ್ ಎಷ್ಟು ಸುರಕ್ಷಿತ? ಚೀನಿ ಹೂಡಿಕೆಯ ಪೆಟಿಎಂ ಏಕಸ್ವಾಮ್ಯದಿಂದ ಇದೆಯೇ ಆತಂಕ?

mobile-wallet

authors-rangaswamyಮೊಬೈಲ್ ಆಪ್ ಗಳು ಎಷ್ಟು ಸುರಕ್ಷಿತ? ಡಿಜಿಟಲ್ ಹಣ ಎಂದರೆ ಪೆಟಿಎಂ ಎನ್ನುವಂತೆ ಆಗುತ್ತಿದೆಯೇ? ರಾತ್ರೋರಾತ್ರಿ ಈ ಮೊಬೈಲ್ ಆಪ್ ಕಂಪನಿಗಳು ಮುಚ್ಚಿ ಹೋದರೆ ನಮ್ಮ ಹಣಕ್ಕೆ ಯಾರು ಜವಾಬ್ದಾರಿ?  ಎಂದು ಪ್ರಶ್ನಿಸಿದವರು ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಉದ್ಘೋಷಕಿಯಾಗಿರುವ ಸುಮತಿಯವರು.

ಮೊಬೈಲ್ ವಾಲೆಟ್ ಅಥವಾ ಆಪ್ ಗಳು ಸಣ್ಣ ಪ್ರಮಾಣದ ಖರೀದಿಗಿ ಬಳಸಲು ಬಹಳ ಯೋಗ್ಯವಾದವು. ಚಿಲ್ಲರೆ ಕೊರತೆಯಂತ ಸಮಸ್ಯೆಯಿಂದ ಹಿಡಿದು ಹತ್ತಾರು ಸಮಸ್ಯೆಗಳು ಇದರಿಂದ ದೂರವಾಗುತ್ತವೆ. ಇವುಗಳನ್ನು ಬಳಸುವುದು ಬಹು ಸುಲಭ. ಹೆಚ್ಚಿನ ಮೌಲ್ಯದ ವಸ್ತುಗಳನ್ನ ಖರೀದಿಮಾಡುವುದಕ್ಕೆ ಬ್ಯಾಂಕ್ನ ಮೂಲಕ ಹಣ ವರ್ಗಾವಣೆ ಮಾಡುವುದು ಬಹಳ ಸುರಕ್ಷಿತ ವಿಧಾನ. ಪೆಟಿಎಂ ಮೂಲಕ ಹಣ ಸಂದಾಯ ಮಾಡುವಾಗ ಸ್ವಲ್ಪ ಅಜಾಗರೂಕತೆಯಾದರೆ ಹಣ ತಲುಪಬೇಕಾದ ವ್ಯಕ್ತಿಗೆ ತಲುಪದೇ ಇನ್ನ್ಯಾರಿಗೋ ತಲುಪುತ್ತದೆ. ಹೀಗೆ ತಪ್ಪಾಗಿ ವರ್ಗಾವಣೆಯಾದ ಹಣದ ಮರುಪಾವತಿಗೆ ಗ್ರಾಹಕರು ಬಹಳಷ್ಟು ಹೆಣಗಬೇಕು. ಹೆಚ್ಚಿನ ಮೌಲ್ಯದ ವಸ್ತು ಖರೀದಿಗೆ ಪೆಟಿಎಂ ಬಳಸಿ ನಂತರ ಆ ವಸ್ತುವನ್ನು ಬೇಡ ಎಂದು ನಿರಾಕರಿಸಿದರೆ  ಹಣದ ಮರುಪಾವತಿ (ರೀಫಂಡ್ ) ನಿಮ್ಮ ಪೆಟಿಎಂ ಖಾತೆಗೆ ಹಾಕಲಾಗುತ್ತದೆ, ನಿಮ್ಮ ಬ್ಯಾಂಕ್ ಖಾತೆಗಲ್ಲ. ಅಂದರೆ ನಿಮಗೆ ಇಷ್ಟವಿರಲಿ ಬಿಡಲಿ ಆ ಹಣ ಮುಗಿಯುವವರೆಗೆ ನೀವು ಪೆಟಿಎಂ ಬಳಸಲೇಬೇಕಾದ ಅನಿವಾರ್ಯತೆಗೆ ಸಿಲುಕುತ್ತೀರಿ. ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ ಎಂದರೆ ಅದಕ್ಕೆ ವರ್ಗಾವಣೆ ವೆಚ್ಚ ಕಡಿಯಲಾಗುತ್ತದೆ. ಪೆಟಿಎಂ ಗ್ರಾಹಕರನ್ನ ಸೆಳೆಯಲು ಸಾಕಷ್ಟು ಉಡುಗೊರೆಗಳ ಆಮಿಷ ನೀಡುತ್ತದೆ, ಸಮಯ ಸಿಕ್ಕಾಗ ಸುಲಿಯುತ್ತದೆ ಕೂಡ.

hana classಒಂದು ಕಾಲದಲ್ಲಿ ವಾಷಿಂಗ್ ಪೌಡರ್ ಎಂದರೆ ನಿರ್ಮಾ ಎಂದು ಹೇಳುತ್ತಿದ್ದೆವು! ಹಾಗೆಯೇ  ಡಿಜಿಟಲ್ ಮನಿ ಎಂದರೆ ಪೆಟಿಎಂ ಎನ್ನುವಂತೆ ಆಗುತ್ತದೆಯೇ ? ಇದಕ್ಕೆ ಉತ್ತರ- ಖಂಡಿತ ಇಲ್ಲ. ಪೆಟಿಎಂ ನಲ್ಲಿ ಚೀನಾದ ಆಲಿಬಾಬ 49 ಪ್ರತಿಶತ ಪಾಲುದಾರ. ಸದ್ಯದ ಸನ್ನಿವೇಶದಲ್ಲಿ ಪೆಟಿಎಂ ಅತಿ ಹೆಚ್ಚು ಡೌನ್ಲೋಡ್ ಆದ ಹೆಚ್ಚು ಗ್ರಾಹಕರನ್ನ ಪಡೆದ ಮೊಬೈಲ್ ವಾಲೆಟ್ ಅನ್ನುವುದರಲ್ಲಿ ಸಂದೇಹವಿಲ್ಲ. ಇಲ್ಲಿ ಗಮನಿಸಬೆಕಾದ ಮುಖ್ಯ ಅಂಶ ನಮ್ಮ ಮಾರುಕಟ್ಟೆಯ ವಹಿವಾಟಿನ ಎರಡು ಪ್ರತಿಶತವಷ್ಟೇ ಈ ರೀತಿಯ ವ್ಯವಹಾರಕ್ಕೆ ದಕ್ಕಿರುವುದು! ಅಂದರೆ ಬರೋಬ್ಬರಿ 98 ಪ್ರತಿಶತ ಮಾರುಕಟ್ಟೆಯಿನ್ನೂ ಯಾರಿಗೂ ಸಿಕ್ಕಿಲ್ಲ. ಅದು ಯಾರ ಪಾಲಾದರು ಆಗಬಹುದು.  ಭಾರತೀಯ ಸ್ಟೇಟ್ ಬ್ಯಾಂಕ್ ‘ಬಡ್ಡಿ ‘ (buddy ) ಎನ್ನುವ ವಾಲೆಟ್ ಮಾರುಕಟ್ಟೆಗೆ ಬಿಟ್ಟಿದೆ. ಸಿಟಿ ಬ್ಯಾಂಕ್ ನ ಮಾಸ್ಟರ್ ಪಾಸ್ , ಐ ಸಿ ಐ ಸಿ ಐ  ಬ್ಯಾಂಕ್ ನ ಪಾಕೆಟರ್ಸ್ , ಹೆಚ್ಡಿಎಫ್ ಸಿ ಬ್ಯಾಂಕ್ ನ ಚಿಲ್ಲರ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಪಿಎನ್ ಬಿ ಕಿಟ್ಟಿ ಹೀಗೆ ಬ್ಯಾಂಕ್ಗಳು ತಮ್ಮದೇ ಅದ ಮೊಬೈಲ್ ವಾಲೆಟ್ಗಳನ್ನ ಹೊರತಂದಿವೆ.  ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಎನ್ನುವುದು ಭಾರತ ಸರಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ರೂಪಿಸಿರುವ ಒಂದು ವ್ಯವಸ್ಥೆ. ಇದನ್ನು ಬಳಸಿ  ಇಮೇಲ್ ಕಳುಹಿಸಿದಷ್ಟೇ ಸುಲಭವಾಗಿ ಇತರರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು, ನಮ್ಮ ಖಾತೆಗೆ ಇತರರಿಂದ ಹಣ ಪಡೆದುಕೊಳ್ಳಬಹುದು. ಬಹುತೇಕ ಬ್ಯಾಂಕುಗಳು ತಮ್ಮ ಗ್ರಾಹಕರಿಗಾಗಿ ಇಂತಹ ಆಪ್‌ಗಳನ್ನು ರೂಪಿಸಿವೆ. ಮೇಲೆ ಹೇಳಿದ್ದು ಕೆಲವು ಉದಾಹರಣೆಯಷ್ಟೇ . ಹೀಗಾಗಿ ಗ್ರಾಹಕರಿಗೆ ಸುರಕ್ಷತೆಯ ದೃಷ್ಟಿಯಿಂದ ಮತ್ತು ತೊಂದರೆ ಆದಾಗ ಸರಿ ಪಡಿಸುವ, ಹಣದ ಮರುಪಾವತಿ ವೇಳೆ ಗಮನಿಸಿದರೆ ಇವು ಪೆಟಿಎಂ ಗಿಂತ ಹೆಚ್ಚು ಸುರಕ್ಷಿತ .

ಪೆಟಿಎಂ ಇರಲಿ ಮತ್ತ್ಯಾವುದೇ ಮೊಬೈಲ್ ವಾಲೆಟ್ ಇರಲಿ ಅದು ‘ ಪೇಮೆಂಟ್ ಬ್ಯಾಂಕ್ ‘  ನಡೆಸಲು ಅನುಮತಿ ಪತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಪಡೆದಿರಬೇಕು . ಕಳೆದ ವಾರವಷ್ಟೇ ಪೆಟಿಎಂ ಗೆ ಈ ರೀತಿಯ ಒಂದು ಅನುಮತಿ ಸಿಕ್ಕಿದೆ . ಪೂರ್ಣ ಪ್ರಮಾಣದಲ್ಲಿ ತನ್ನ ಸೇವೆ ಶುರು ಮಾಡಲು ಇನ್ನೆರೆಡು ತಿಂಗಳು ಬೇಕಾಗಬಹುದು. ರಾತ್ರೋರಾತ್ರಿ ಈ ಮೊಬೈಲ್ ಆಪ್ ಕಂಪನಿಗಳು ಮುಚ್ಚಿ ಹೋದರೆ ನಮ್ಮ ಹಣಕ್ಕೆ ಯಾರು ಜವಾಬ್ದಾರಿ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿತೆಂದು ಭಾವಿಸುವೆ . ಅಷ್ಟು ಸುಲಭದಲ್ಲಿ ತಮ್ಮ ಅಂಗಡಿ ಮುಚ್ಚಿ ಓಡಿ ಹೋಗಲು ಸಾಧ್ಯವಿಲ್ಲ.

(ಹಣಕ್ಲಾಸು ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತದೆ. ಹಣಕಾಸು ಜಗತ್ತಿನಲ್ಲಿ ಇದೇಕೆ ಹೀಗೆ ಎಂಬ ಕೌತುಕದ ಯಾವುದೇ ಪ್ರಶ್ನೆಗಳನ್ನು ಓದುಗರೂ ಕೇಳಬಹುದು. ಎಲ್ಲ ಸಂದೇಹಗಳನ್ನೂ ನೀವು ಲೇಖಕ ರಂಗಸ್ವಾಮಿಯವರಿಗೆ ನೇರವಾಗಿ ಕೇಳಿಬಿಡಿ.. ಮಿಂಚಂಚೆ- muraram@yahoo.com)

2 Comments on 'ಮೊಬೈಲ್ ಫೋನ್ ವಾಲೆಟ್ ಎಷ್ಟು ಸುರಕ್ಷಿತ? ಚೀನಿ ಹೂಡಿಕೆಯ ಪೆಟಿಎಂ ಏಕಸ್ವಾಮ್ಯದಿಂದ ಇದೆಯೇ ಆತಂಕ?'

Subbu said : Guest Report this comment a month ago

paytm ವಾಲೆಟ್ ನಲ್ಲಿ ಅಲಿಬಾಬಾ ೪೯% ಹೂಡಿಕೆ ಮಾಡಿದೆ ಎನ್ನುವುದು ಭಾಗಷ ತಪ್ಪು ಮಾಹಿತಿ. paytm ನಲ್ಲಿ ೨ ಬೇರೆ ಬೇರೆ ಭಾಗ ಇದೆ , ಮೊದಲನೆಯದ್ದು one೯೭ comunications ಎಂಬ ಮೂಲ ಸಂಸ್ಥೆ. ಅದರಲ್ಲಿ ಅಲಿಬಾಬಾ ಮತ್ತು ಸಹ ಸಂಸ್ಥೆ , ಟಾಟಾ ,ವಿಜಯ್ ಶೇಖರ್ ಶರ್ಮಾ ಅವರ ಹೂಡಿಕೆಯ ಈ-ಕಾಮರ್ಸ್ ಸಂಸ್ಥೆ (ಇಲ್ಲಿ ೪೯% ಹೂಡಿಕೆ ಅಲಿಬಾಬಾ ಅಂಗ ಸಂಸ್ಥೆ ಗಳದ್ದು ), ಇನ್ನೊಂದು ಪೇಮೆಂಟ್ ಬ್ಯಾಂಕ್ . paytm ವಾಲೆಟ್ paytm payment bank limited ಅಡಿಯಲ್ಲಿ ಬರುತ್ತದೆ , ಇದರಲ್ಲಿ ೫೧% ಹೂಡಿಕೆ ಮಾಡಿದವರು ವಿಜಯ್ ಶೇಖರ್ ಶರ್ಮಾ ಅವರು. ೩೯% ಹೂಡಿಕೆ one೯೭ ಸಂಸ್ಥೆಯಿಂದಾಗಿದೆ , ಇನ್ನುಳಿದ ೧೦% ಶರ್ಮ ಅವರಿಂದ ಆಗಿದೆ. ಹೀಗಿದ್ದಾಗ ೧೮ ರಿಂದ ೨೦% ನಷ್ಟು ಪರೋಕ್ಷ ಹೂಡಿಕೆ ಆಗುತ್ತದೆ ಅಷ್ಟೇ .

Sumathi said : Guest Report this comment a month ago

thanku sir. thanku digital kannada

Leave a Reply

Your email address will not be published. Required fields are marked

X

Enjoying what you are reading?

Do you Want to Subscribe Us?