ಅರ್ನಾಬ್ ಗೋಸ್ವಾಮಿ ಅವರ ‘ರಿಪಬ್ಲಿಕ್’ ವಾಹಿನಿಗೆ ಹಣ ಹೂಡಿರೋರು ಯಾರು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಟೈಮ್ಸ್ ನೌ ಸುದ್ದಿ ಸಂಸ್ಥೆಯನ್ನು ತೊರೆದು ಅಚ್ಚರಿ ಮೂಡಿಸಿದ್ದ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರ ಮುಂದಿನ ನಡೆ ಏನು ಎಂಬುದು ಸಾಕಷ್ಟು ಕುತೂಹಲ ಮೂಡಿಸಿತ್ತು. ಕೆಲದಿನಗಳ ಹಿಂದೆ ಅವರು ‘ರಿಪಬ್ಲಿಕ್’ ಎಂಬ ಹೊಸ ವಾಹಿನಿ ಮೂಲಕ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಂದಿತ್ತು. ಈ ವಿಷಯ ಹೊರ ಬೀಳುತ್ತಿದ್ದಂತೆ ಇದಕ್ಕೆ ಹಣ ಹೂಡುತ್ತಿರುವವರು ಯಾರು ಎಂಬ ಚರ್ಚೆಯೂ ವ್ಯಾಪಕವಾಗಿ ನಡೆದಿತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ!

ದ ಇಂಡಿಯನ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ ರಿಪಬ್ಲಿಕ್ ವಾಹಿನಿಯು ಎಆರ್ ಜಿ ಔಟ್ಲೈಯರ್ ಮಿಡಿಯಾ ಪ್ರೈ.ಲಿ. ಒಡೆತನದ್ದಾಗಿದ್ದು, ಈ ಕಂಪನಿಗೆ ಗೋಸ್ವಾಮಿ ಅವರೇ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದಾರೆ. ಈ ರಿಪಬ್ಲಿಕ್ ವಾಹಿನಿ ಹಿಂದೆ ಅರ್ನಾಬ್ ಗೋಸ್ವಾಮಿ ಜತೆಗೆ ಇತರರು ಹಣ ಹೂಡಿಕೆ ಮಾಡಿದ್ದು, ಆ ಪೈಕಿ ಉದ್ಯಮಿ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಏಷ್ಯಾನೆಟ್ ನ್ಯೂಸ್ ಆನ್ ಲೈನ್ ಪ್ರೈ.ಲಿ. ಪಾಲು ದೊಡ್ಡದಾಗಿದೆ. ಇವರ ಜತೆಗೆ ಎಸ್ಎಆರ್ ಜಿ ಮಿಡಿಯಾ ಹೋಲ್ಡಿಂಗ್ ಪ್ರೈ.ಲಿ. ಈ ವಾಹಿನಿಯ ಹಿಂದೆ ಕೈ ಜೋಡಿಸಿವೆ.

ಎಸ್ಎಆರ್ ಜಿ ಕಂಪನಿಯಲ್ಲಿ ಗೋಸ್ವಾಮಿ ಹಾಗೂ ಅವರ ಪತ್ನಿ ಸಂಯಬ್ರತಾ ರಾಯ್ ಗೋಸ್ವಾಮಿ ಹೆಚ್ಚಿನ ಪಾಲು ಹೊಂದಿದ್ದಾರೆ. ಕಳೆದ ವರ್ಷ ನ.24ರ ವರೆಗಿನ ಮಾಹಿತಿ ಪ್ರಕಾರ ಎಸ್ಎಆರ್ ಜಿ ಕಂಪನಿಯು ಎಆರ್ ಜಿ ಔಟ್ಲೈಯರ್ ಕಂಪನಿಗೆ ₹ 24 ಕೋಟಿ ಹಣ ಹೂಡಿಕೆ ಮಾಡಿದೆ. ರಾಜೀವ್ ಚಂದ್ರಶೇಖರ್ ಅವರ ಒಡೆತನದ ವಿವಿಧ ಕಂಪನಿಗಳು ಒಟ್ಟು ₹ 30 ಕೋಟಿ ಹೂಡಿಕೆ ಮಾಡಿವೆ. ಮೋಹನ್ ದಾಸ್ ಪೈ ಅವರು ₹ 7.5 ಕೋಟಿ, ಮುಂಬೈನಲ್ಲಿ ಏಷ್ಯನ್ ಹಾರ್ಟ್ ಇನ್ಸ್ ಟಿಟ್ಯೂಟ್ ಹೊಂದಿರುವ ರಮಾಕಾಂತ್ ಪಾಂಡ ₹ 5 ಕೋಟಿ, ಹೇಮೆಂದ್ರ ಕೊಠಾರಿ ₹ 2.5 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದಾರೆ.

1 COMMENT

  1. Very usefull newses are publishing in different manner…keep it up media is a fourth organ of government and you proved that

Leave a Reply