ಚಿತ್ರಸಂತೆ ತಪ್ಪಿಸಿಕೊಂಡ್ರಾ? ಪರವಾಗಿಲ್ಲ ಇಲ್ಲಿ ನೋಡಿ…

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರಿನ ಚಿತ್ರಕಲಾ ಪರಿಷತ್ ವತಿಯಿಂದ ಭಾನುವಾರ ಆಯೋಜಿಸಲಾದ ಚಿತ್ರಸಂತೆ ಕಾರ್ಯಕ್ರಮ ವರ್ಣರಂಜಿತವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಕಲಾವಿದರ ಕುಂಚದಲ್ಲಿ ಅರಳಿದ ಚಿತ್ರಗಳು ನೋಡುಗರ ಕಣ್ಮನ ಸೆಳೆಯಿತು. ಎಲ್ಲ ವಯೋಮಾನದ ಕಲಾ ರಸಿಕರು ಈ ಚಿತ್ರ ಸಂತೆಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರ ಚಮತ್ಕಾರವನ್ನು ಆನಂದಿಸಿದರು.

ಕೆಲವರು ತಮಗಿಷ್ಟವಾದ ಕಲಾಕೃತಿಗಳನ್ನು ಖರೀದಿಸಿದರೆ, ಮತ್ತೆ ಕೆಲವರು ತಮ್ಮ ಮೊಬೈಲ್ ಗಳಲ್ಲೇ ಸೆರೆ ಹಿಡಿದುಕೊಂಡರು. ಇನ್ನು ಕೆಲವರು ಕಲಾವಿದರ ಕೈಯಿಂದ ತಮ್ಮ ಚಿತ್ರವನ್ನೇ ಬರೆಸಿಕೊಂಡರು. ಈ ಚಿತ್ರ ಸಂತೆಯಲ್ಲಿ ವಿಭಿನ್ನ ವೇಷ ಭೂಷಣ ತೊಟ್ಟ ಕಲಾವಿದರು ಹೊಸ ಕಳೆ ತುಂಬಿದರು. ಈ ಚಿತ್ರ ಸಂತೆಗೆ ನೀವು ಹೋಗಲು ಸಾಧ್ಯವಾಗದಿದ್ದರೆ ಚಿಂತೆ ಬೇಡ. ಈ ಚಿತ್ರಸಂತೆಯನ್ನು ಈ ಚಿತ್ರಗಳ ಮೂಲಕ ನಿಮ್ಮ ಮುಂದೆ ಇಡುತ್ತಿದ್ದೇವೆ.

chitra-santhe-7-min

chitra-2-min

chitra-santhe-1-min

chitra-santhe-4-min

chitra-santhe-6-min

chitra-santhe-5-min

chitra-santhe-2-min

Leave a Reply