ನೋಟು ಅಮಾನ್ಯದಿಂದ ಆರ್ಥಿಕ ಬೆಳವಣಿಗೆ ಶೇಕಡಾ 7.6 ರಿಂದ 6.6ಕ್ಕೆ ಕುಸಿತ- ಐಎಂಎಫ್

ಡಿಜಿಟಲ್ ಕನ್ನಡ ಟೀಮ್:

ನೋಟು ಅಮಾನ್ಯದ ನಿರ್ಧಾರದಿಂದ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ನಿರೀಕ್ಷೆಯಂತೆ ಕುಸಿತ ಕಂಡಿದೆ. 2016-17ನೇ ಸಾಲಿನ ಆರ್ಥಿಕ ಬೆಳವಣಿಗೆಯ ಮುನ್ನೋಟ ಹಾಗೂ ಅಂದಾಜು ಮಂಡಿಸಿರುವ ಇಂಟರ್ ನ್ಯಾಷನಲ್ ಮಾನೆಟರಿ ಫಂಡ್ (ಐಎಂಎಫ್) ಭಾರತದ ಆರ್ಥಿಕ ಬೆಳವಣಿಗೆ ಶೇ.7.6 ರಿಂದ 6.6ಕ್ಕೆ ಇಳಿಕೆ ಮಾಡಿದೆ.

ಕೇಂದ್ರ ಸರ್ಕಾರ ₹ 500 ಮತ್ತು ₹ 1000 ಹಳೆಯ ನೋಟುಗಳನ್ನು ನಿಷೇಧಿಸಿದ ಪರಿಣಾಮ ನಗದು ಬಿಕ್ಕಟ್ಟು ಪರಿಸ್ಥಿತಿ ಎದುರಾದ ಪರಿಣಾಮ ಐಎಂಎಫ್ ಭಾರತದ ಬೆಳವಣಿಗೆ ದರ ಶೇ.6.6 ರಷ್ಟು ಆಗಲಿದೆ ಎಂದು ಅಂದಾಜಿಸಿದೆ. ಈ ಸಾಲಿನ ಆರಂಭದಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆ ದರ ಕಳೆದ ಸಾಲಿನಂತೆ ಶೇ.7.6 ರಷ್ಟೇ ಮುಂದುವರಿಯಲಿದೆ ಎಂದು ಅಂದಾಜು ಮಾಡಿತ್ತು. ನಂತರ ಈ ಅಂದಾಜನ್ನು ಶೇ.7.2ಕ್ಕೆ ಇಳಿಸಲಾಗಿತ್ತು. ಈಗ ಹೊಸದಾಗಿ ಬಿಡುಗಡೆ ಮಂಡಿಸಿರುವ ಅಂದಾಜಿನಲ್ಲಿ ಶೇ.6.6 ರಷ್ಟು ನಿಗದಿ ಮಾಡಿದೆ.

ಇದರ ಜತೆಗೆ ಮುಂದಿನ ವರ್ಷದ ವೇಳೆಗೆ ಅಂದರೆ 2018ರ ವೇಳೆಗೆ ಭಾರತದ ಆರ್ಥಿಕತೆ ಮತ್ತೆ ಸುಧಾರಿಸಿಕೊಳ್ಳಲಿದ್ದು, ಆರ್ಥಿಕ ಬೆಳವಣಿಗೆ ದರ ಶೇ.7.7ಕ್ಕೆ ಜಿಗಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ. ಇನ್ನು ಚೀನಾದ ಆರ್ಥಿಕ ಬೆಳವಣಿಗೆ ದರ ಶೇ.6.5 ರಷ್ಟಿದೆ ಎಂದು ಅಂದಾಜು ಮಾಡಲಾಗಿದೆ.

Leave a Reply