ಕಾಶ್ಮೀರಿ ಪ್ರತ್ಯೇಕತಾವಾದಿಗಳು ದಂಗಾಲ್ ಹುಡುಗಿಯ ಕನಸನ್ನು ಕೊಲ್ಲಲು ಹೊರಟಿರುವಾಗ ಪ್ರಸ್ತುತವೆನಿಸುತ್ತಿರುವ ಆಕೆಯ ಕಿರುಚಿತ್ರ


ಡಿಜಿಟಲ್ ಕನ್ನಡ ಟೀಮ್:

‘ತಾನು ಯಾರಿಗೂ ಮಾದರಿಯಲ್ಲ, ನನ್ನನ್ನು ಸ್ಫೂರ್ತಿಯಾಗಿ ಪರಿಗಣಿಸಬೇಡಿ…’ ಎಂದು ದಂಗಾಲ್ ಚಿತ್ರದಲ್ಲಿ ಅಭಿನಯಿಸಿದ ಕಾಶ್ಮೀರದ ಯುವತಿ ಜೈರಾ ವಾಸಿಂ ಅವರ ಈ ನೋವಿನ ಮಾತಿನ ಹಿಂದೆ ಪ್ರತ್ಯೇಕತಾವಾದಿಗಳ ಒತ್ತಡವಿರುವುದು ಬಟಾಬಯಲಾಗಿದೆ.

ಜೈರಾಳಂತದ ಕಾಶ್ಮೀರದ ಯುವಕ ಯುವತಿಯರು ಕ್ರಿಯಾಶೀಲತೆಗೆ ತಮ್ಮನ್ನು ತಾವು ತೊಡಗಿಸಿಕೊಂಡು ಬಿಟ್ಟರೆ, ಮುಂದಿನ ದಿನಗಳಲ್ಲಿ ಭಾರತದ ವಿರುದ್ಧ ಎತ್ತಿಕಟ್ಟಿ ಕಲ್ಲು ತೂರಾಟ ಯಾರಿಂದ ಮಾಡಿಸುವುದು? ಎಂಬುದು ಪ್ರತ್ಯೆಕವಾದಿಗಳ ಆತಂಕ. ಹೀಗಾಗಿ ಕಾಶ್ಮೀರದ ಯುವಕರು ಸೃಜನಶೀಲ ಕಲೆ ಮತ್ತಿತರ ಚಟುವಟಿಕೆಗಳಿಗೆ ತುಡಿಯದಂತೆ ನೋಡಿಕೊಂಡು  ತಮ್ಮ ಆಟದ ವಸ್ತುಗಳಂತೆ ಬಳಸಿಕೊಳ್ಳುವುದು ಅವರ ಉದ್ದೇಶ.

ಇಂತಹ ಪರಿಸ್ಥಿತಿಯಲ್ಲಿ ಜೈರಾಳಂತಹ ಕಾಶ್ಮೀರಿ ಯುವ ಜೀವಗಳಿಗೆ ನಾವೆಲ್ಲರೂ ಬೆಂಬಲ ವ್ಯಕ್ತಪಡಿಸಬೇಕಾದ ಅಗತ್ಯವಿದೆ. ಕಾರಣ, ಕಾಶ್ಮೀರಿ ಯುವಕರು ಇಂತಹ ಕ್ರಿಯಾತ್ಮಕ ಕಲೆಗಳಲ್ಲಿ ತೊಡಗಿಕೊಂಡಾಗ ಅವರನ್ನು ಪ್ರೋತ್ಸಾಹಿಸಿದರೆ, ಅವರು ಭಾರತದೊಂದಿಗೆ ಹೆಚ್ಚು ಬಾಂಧವ್ಯ ಬೆಳೆಸಿಕೊಳ್ಳುತ್ತಾರೆ. ಕಾಶ್ಮೀರದ ಯುವಕರಲ್ಲಿ ಪ್ರತ್ಯೇಕತಾವಾದಿಗಳು ಭಾರತದ ವಿರುದ್ಧ ದ್ವೇಷದ ಬೀಜ ಬಿತ್ತುವ ಸಂದರ್ಭದಲ್ಲಿ ಜೈರಾಳಂತಹ ಪ್ರತಿಭೆಗಳಿಗೆ ನಮ್ಮ ಬೆಂಬಲ ಸೂಚಿಸಬೇಕಾದ ಅನಿವಾರ್ಯತೆ ಇದೆ. ಆಗ ಜೈರಾಳಿಂದ ಸ್ಫೂರ್ತಿಗೊಂಡು ಮತ್ತಷ್ಟು ಕಾಶ್ಮೀರಿ ಯುವಕರು ಭಾರತದೊಂದಿಗೆ ಗುರುತಿಸಿಕೊಳ್ಳಲು ಮುಂದಾಗುತ್ತಾರೆ. ಹೀಗೆ ಮಾನಸಿಕ ವಿಕಾಸ, ಕ್ರಿಯಾಶೀಲತೆ, ಕಲೆಯತ್ತ ಯುವಕರು ಮುಂದಾದರೆ ಕಲ್ಲು, ಬಂದೂಕುಗಳನ್ನು ಹಿಡಿದುಕೊಳ್ಳುವ ಪರಿಸ್ಥಿತಿ ಅವರಿಗೂ ಎದುರಾಗುವುದಿಲ್ಲ. ಇದರಿಂದ ಮುಂದಿನ ತಲೆಮಾರಿನ ಯುವಕರು ಭಾರತದ ಜತೆ ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಲು ನೆರವಾಗುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಇದೇ ಜೈರಾ ಅಭಿನಯದ ಜಾಹೀರಾತು ಕಿರುಚಿತ್ರ ಸಾಕಷ್ಟು ಪ್ರಸ್ತುತತೆಯನ್ನು ಪಡೆದುಕೊಳ್ಳುತ್ತಿದೆ. ಈ ಕಿರುಚಿತ್ರದಲ್ಲಿ ಜೈರಾ 12ನೇ ತರಗತಿಯ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದು, ಭವಿಷ್ಯದಲ್ಲಿ ಫ್ಯಾಶನ್ ಡಿಸೈನರ್ ಆಗುವ ಕನಸನ್ನು ಹೊಂದಿರುತ್ತಾಳೆ. ಆಕೆಯ ಕ್ರಿಯಾಶೀಲತೆಗೆ ಶಾಲೆ, ಸ್ನೇಹಿತರು ಬೆರಗಾಗಿದ್ದರೆ, ಮತ್ತೊಂದೆಡೆ ಆಕೆಯ ಪೋಷಕರು ಮಾತ್ರ ಆಕೆಯನ್ನು ಡಾಕ್ಟರ್ ಅಥವಾ ಇಂಜಿನಿಯರ್ ಆಗಿ ನೋಡಲು ಇಚ್ಛಿಸುತ್ತಾರೆ. ಪೋಷಕರ ಒತ್ತಡದಿಂದ ತನ್ನ ಕನಸು ಕಮರುವ ಹೊತ್ತಿನಲ್ಲಿ ಬಾಲಿವುಡ್ ನಟಿ ಕಂಗನಾ ರಾವತ್ ಆಕೆಯ ಸಾಮರ್ಥ್ಯವನ್ನು ಪೋಷಕರಿಗೆ ವಿವರಿಸಿ, ಆಕೆಯ ಇಚ್ಛೆಯಂತೆ ಬೆಳೆಯಲು ಅವಕಾಶ ನೀಡುವಂತೆ ಮನವರಿಕೆ ಮಾಡುತ್ತಾರೆ.

ಜೈರಾ ವಾಸಿಂ ಅಭಿನಯದ ಆ ಜಾಹೀರಾತು ಕಿರುಚಿತ್ರ ಇಲ್ಲಿದೆ…

Leave a Reply