ಜಮ್ಮು-ಕಾಶ್ಮೀರ ಹಿಮಪಾತದಲ್ಲಿ 14 ಯೋಧರ ಬಲಿದಾನ

 

ಡಿಜಿಟಲ್ ಕನ್ನಡ ಟೀಮ್:

ಇತ್ತ ಗಣರಾಜ್ಯೋತ್ಸವ ಸಂದರ್ಭದಲ್ಲಿ ತಮ್ಮ ಶೌರ್ಯಕ್ಕೆ ನಮ್ಮ ವೀರ ಸೈನಿಕರನೇಕರು ಪ್ರಶಸ್ತಿ ಪಡೆಯುತ್ತಿರುವಾಗಲೇ ಅತ್ತ ಜಮ್ಮು-ಕಾಶ್ಮೀರದಲ್ಲಿ ಗಡಿ ಕಾಯುತ್ತಿದ್ದ ಅನೇಕ ಯೋಧರು ಹಿಮಪಾತದಡಿ ಸಿಲುಕಿ ಪ್ರಾಣತ್ಯಾಗ ಮಾಡಿದ್ದಾರೆ.

ಗುರೆಜ್ ವಿಭಾಗದಲ್ಲಿ ಆಗಿರುವ ಹಿಮಪಾತದಲ್ಲಿ ಈವರೆಗೆ 14 ಯೋಧರು ಮೃತರಾಗಿರುವುದಾಗಿ ಶುಕ್ರವಾರಕ್ಕೆ ಲಭ್ಯವಾಗುತ್ತಿರುವ ಮಾಹಿತಿ. ಹಲವರನ್ನು ರಕ್ಷಿಸಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಬುಧವಾರ ಸಂಜೆ ಶುರುವಾದ ಹಿಮಪಾತದಲ್ಲಿ ಹಲವು ಯೋಧರು ಅವಶೇಷಗಳ ಅಡಿ ಸಿಲುಕಿಕೊಂಡರು. ಗುರುವಾರದ ಹೊತ್ತಿಗೆ 10 ಯೋಧರ ಕಳೆಬರ ಸಿಕ್ಕಿತು. ಏಳು ಯೋಧರನ್ನು ರಕ್ಷಿಸುವುದಕ್ಕೂ ರಕ್ಷಣಾ ಪಡೆ ಸಫಲವಾಯಿತು. ಶುಕ್ರವಾರ ಇನ್ನೂ ನಾಲ್ಕು ಹುತಾತ್ಮ ದೇಹಗಳು ಸಿಕ್ಕಿವೆ.

ಜಮ್ಮು-ಕಾಶ್ಮೀರದ ಈ ಭಾಗವನ್ನು ಅತ್ಯಂತ ಅಪಾಯಕಾರಿ ಎಂದೂ ಘೋಷಿಸಲಾಗಿದೆ. ನಾಗರಿಕರೊಬ್ಬರು ಸಹ ಹಿಮಪಾತಕ್ಕೆ ಸಿಲುಕಿ ಮೃತರಾಗಿದ್ದಾರೆ.

Leave a Reply