ನೈಜೀರಿಯಾ ಇಸ್ಲಾಂ ಧರ್ಮ ಪ್ರಚಾರಕ ಮೊಹಮದ್ ಬೆಲ್ಲೊ ಅಬುಬಕರ್ ನಿಧನ, ಗಂಡನನ್ನು ಕಳೆದುಕೊಂಡವರು 130 ಹೆಂಗಸರು!

ಡಿಜಿಟಲ್ ಕನ್ನಡ ಟೀಮ್:

ಬರೋಬ್ಬರಿ 130 ಮಹಿಳೆಯರನ್ನು ಮದುವೆಯಾಗಿ ಸುದ್ದಿ ಮಾಡಿದ್ದ, ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಮೊಹಮದ್ ಬೆಲ್ಲೊ ಅಬುಬಕರ್ ವಿಧಿವಶರಾಗಿದ್ದಾರೆ. ಸುದೀರ್ಘವಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಅಬುಬಕರ್ (93) ಅವರು ಶನಿವಾರ ವಿಧಿವಶರಾಗಿದ್ದಾರೆ ಎಂದು ಅವರ ಸಹಾಯಕ ಮುತೈರು ಸಲಾವುದ್ದೀನ್ ಬೆಲ್ಲೊ ಮಾಹಿತಿ ನೀಡಿದ್ದಾರೆ.

ನೈಜೀರಿಯಾದ ಇಸ್ಲಾಂ ಧರ್ಮ ಪ್ರಚಾರಕರಾಗಿದ್ದ ಅಬುಬಕರ್ ಪವಿತ್ರ ಗ್ರಂಥ ಕುರಾನ್ ಅನ್ನು ಅನೇಕ ಬಾರಿ ತಪ್ಪಾಗಿ ಅರ್ಥೈಸಿ ಸಾಕಷ್ಟು ವಿವಾದವನ್ನು ಸೃಷ್ಟಿಸಿದ್ದರು. ‘ಒಬ್ಬ ವ್ಯಕ್ತಿ ಎಷ್ಟು ಮಹಿಳೆಯರಿಗೆ ಬಾಳುಕೊಡಲು ಶಕ್ತನಾಗಿರುತ್ತಾನೊ ಅಷ್ಟು ಮಹಿಳೆಯರನ್ನು ಮದುವೆಯಾಗಬಹುದು’ ಎಂದು ಕುರಾನ್ ಹೇಳುತ್ತದೆ ಎಂದು ಪ್ರತಿಪಾದಿಸಿ ವಿವಾದಕ್ಕೆ ಗುರಿಯಾಗಿದ್ದರು. ತಮ್ಮ ಈ ವಾದವನ್ನು ಕೇವಲ ಬೋಧನೆ ಮಾತ್ರ ಸೀಮಿತವಾಗಿಸದೇ ತಾವೇ 130 ಮಹಿಳೆಯರನ್ನು ಮದುವೆಯಾಗಿದ್ದರು.

ಸಾಲು ಸಾಲು ಮದುವೆಯಾಗುತ್ತಿದ್ದ ಅಬುಬಕರ್ ಇತರೆ ಮುಸ್ಲಿಂ ಧರ್ಮ ಗುರುಗಳ ವಿರೋಧಕ್ಕೂ ಗುರಿಯಾಗಿದ್ದರು. 2008ರಲ್ಲಿ ಅಬುಬಕರ್ ಮದುವೆಯಾಗಿದ್ದ 86 ಪತ್ನಿಯರ ಪೈಕಿ 82 ಪತ್ನಿಯರಿಗೆ 48 ಗಂಟೆಗಳಲ್ಲಿ ವಿಚ್ಛೇದನ ನೀಡಬೇಕು ಎಂದು ಇತರೆ ಇಸ್ಲಾಂ ಧರ್ಮ ಗುರುಗಳ ಆಗ್ರಹಿಸಿದ್ದರು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಅಬುಬಕರ್ ಅವರು 130 ಮಹಿಳೆಯರನ್ನು ಮದುವೆಯಾಗಿದ್ದರು. ಇವರಿಗೆ ಈಗಾಗಲೇ 203 ಮಕ್ಕಳಿದ್ದು, 130 ಪತ್ನಿಯರ ಪೈಕಿ ಕೆಲವರು ಗರ್ಭಿಣಿಯರು ಎಂದು ಕೂಡ ಹೇಳಲಾಗುತ್ತಿದೆ.

Leave a Reply