ಬಜೆಟ್ ಬಗ್ಗೆ ಗಂಭೀರ ಚರ್ಚೆ ಆಯ್ತು… ಈಗ ಟ್ವಿಟರ್ ಹಾಸ್ಯವೇನೆಂದು ನೋಡೋಣ

ಡಿಜಿಟಲ್ ಕನ್ನಡ ಟೀಮ್:

ನಿನ್ನೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2017ರ ಕೇಂದ್ರ ಬಜೆಟ್ ಮಂಡನೆ ಮಾಡಿದರು. ಈ ಬಗ್ಗೆ ಟಿವಿ, ಪತ್ರಿಕೆ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಗಂಭೀರ ಚರ್ಚೆಯಾಗುತ್ತಿರೋದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಈಗ ಟ್ವಿಟರ್ ನಲ್ಲಿ ಬಜೆಟ್ ಕುರಿತ ಕೆಲವು ಹಾಸ್ಯಮಯ ಚರ್ಚೆಗಳನ್ನೊಮ್ಮೆ ನೋಡೋಣ.

ಯಾವುದೇ ವಿದ್ಯಮಾನ ನಡೆದರೂ ಟ್ವಿಟರ್ ನಲ್ಲಿ ಅದರ ಮೇಲೆ ಹಾಸ್ಯ ಮಾಡುವವರು ಇದ್ದೇ ಇದ್ದಾರೆ. ಇವರು ಈ ಬಾರಿಯ ಬಜೆಟ್ ಅನ್ನು ಹೇಗೆಲ್ಲಾ ಹಾಸ್ಯದ ದೃಷ್ಟಿಕೋನದಲ್ಲಿ ನೋಡಿದ್ದಾರೆ ಎಂಬುದು ಈ ಟ್ವಿಟರ್ ಗಳ ಮೂಲಕ ಗೊತ್ತಾಗುತ್ತದೆ.

ಚಿಕ ಪಿಕ ರಿಕ: ಡಬ್ಲ್ಲೂಡಬ್ಲ್ಯೂಇನಲ್ಲಿ ಅಂಡರ್ ಟೇಕರ್ ಬಿದ್ದು ಮೇಲಕ್ಕೇಳುವ ರೀತಿಯಲ್ಲಿ, ವರ್ಷಪೂರ್ತಿ ಮಲಗಿದ್ದ ಅರುಣ್ ಜೇಟ್ಲಿ ಇಂದು ಎದ್ದು ನಿಂತಿದ್ದಾರೆ…

ಇಸ್ಟರಿ ಆಫ್ ಇಂಡಿಯಾ: ಬಹು ನಿರೀಕ್ಷಿತ ‘ಅಚ್ಛೇ ದಿನ’ ಎಂಬ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗಳಿಕೆ ಮಾಡಿದ ಆದಾಯವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಲು ಸಿದ್ಧರಾಗಿದ್ದಾರೆ.

ರಮೇಶ್ ಶ್ರೀವತ್ಸ: ವರ್ಷಪೂರ್ತಿ ಮೋದಿ ಸರ್ಕಾರದ ಕಾರ್ಯಕ್ರಮಗಳನ್ನು ಘೋಷಿಸಿಬಿಟ್ಟಿದ್ದಾರೆ. ಹೀಗಾಗಿ ಅರುಣ್ ಜೇಟ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಕೇವಲ ಎದ್ದು ನಿಂತು ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೋರಲಿದ್ದಾರೆ.

ಸೊರಬ್ ಪಂತ್: ಇದು ಬದಲಾವಣೆಯ ಬಜೆಟ್… ಇದು ತೆರಿಗೆಯನ್ನು ಚುನಾವಣಾ ಪ್ರಚಾರವಾಗಿ ಬದಲಿಸಿದೆ, ಪ್ರತಿಯೊಬ್ಬರನ್ನು ಆರ್ಥಿಕ ತಜ್ಞರನ್ನಾಗಿ ಬದಲಿಸಿದೆ, ಸಿಎಗಳನ್ನು ದೇವರನ್ನಾಗಿ ಬದಲಿಸಿದೆ.

ರೋಹನ್: ಸಾವಿರ… ಲಕ್ಷ ಕೋಟಿಗಳನ್ನು ಚಿಲ್ಲರೆ ರೀತಿಯಲ್ಲಿ ಘೋಷಿಸುವಾಗ… ಈ ಹಣ ಎಲ್ಲಿಂದ ಬಂದಿದೆ ಎಂಬುದೇ ನನ್ನ ಪ್ರಶ್ನೆ?

ದ ವೈರಲ್ ಫೀವರ್: ಅರುಣ್ ಜೇಟ್ಲಿ ಅವರು ಇನ್ನು ಮುಂದೆ ಶಿರಿಶ್ ಕುಂದೆರ್, ಸಾಜಿದ್ ಖಾನ್ ಮತ್ತು ರಾಮ್ ಗೋಪಾಲ್ ವರ್ಮಾ ಸಿನಿಮಾ ಮಾಡದಿರಲು ₹ 1000 ಕೋಟಿ ಮೀಸಲಿಡುವ ನಿರೀಕ್ಷೆ ಇದೆ.

ಪ್ರೇಮ್ ಪಣಿಕ್ಕರ್: ಮನ್ರೆಗಾವನ್ನು ಯುಪಿಎ ಸರ್ಕಾರದ ವೈಫಲ್ಯದ ಸ್ಮಾರಕ ಎಂದು ಕರೆದಿದ್ದವರೇ ಆ ಸ್ಮಾರಕದ ಅಭಿವೃದ್ಧಿಗೆ ಈಗ ಹೆಚ್ಚು ಹಣ ಎತ್ತಿಟ್ಟಿದ್ದಾರೆ.

ಟ್ರೆಂಡೂಲ್ಕರ್: ಬಜೆಟ್ ತಲೆಬುಡ ಅರ್ಥವಾಗದಿದ್ದಾಗ… ಅರ್ಥಶಾಸ್ತ್ರ ತರಗತಿಯಲ್ಲಿ ಹೆಚ್ಚು ಗಮನ ಹರಿಸಿ ಪಾಠ ಕೇಳಬೇಕಿತ್ತು ಅನ್ನಿಸುತ್ತಿದೆ…

ಮಿಥುನ್ ಎಚ್ಎಂಪಿ: ರಾಜಕೀಯ ಪಕ್ಷಗಳು 2 ಸಾವಿರಕ್ಕೂ ಹೆಚ್ಚು ದೇಣಿಗೆಯನ್ನು ನಗದು ರೂಪದಲ್ಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ… ದಯವಿಟ್ಟು ಎಲ್ಲರೂ ಪೇಟಿಎಂ ಮೂಲಕವೇ ಕಳುಹಿಸಿ.

ವೈರಲ್ ಫೀವರ್: ತೆರಿಗೆ ವಿನಾಯಿತಿ ಸಿಕ್ಕ ಸುದ್ದಿ ಕೇಳಿ ಮಂದಹಾಸ ಬೀರುವ ನಾವು, ಮಾಡಲು ಕೆಲಸವೇ ಇಲ್ಲ ಎಂಬುದು ಅರಿವಾದಾಗ ಮತ್ತೆ ಸುಮ್ಮನಾಗುತ್ತೀವಿ.

ಡೊರ್ಕು: ತೆರಿಗೆ ವಿನಾಯಿತಿಯಿಂದ ಇನ್ನು ಮುಂದೆ ಪ್ರತಿ ತಿಂಗಳು 1 ಸಾವಿರ ಹೆಚ್ಚು ಖರ್ಚು ಮಾಡಬಹುದು.

Leave a Reply