ಲೂಸಿಯಾ ಪವನ್ ಕುಮಾರ್ ಮೆಚ್ಚಿದ ನಿರ್ದೇಶಕನಾರು? ಕನ್ನಡದಲ್ಲಿ ಡಿಜಿಟಲ್ ಕತೆ ಹೇಳೋಕೊಂದು ಕೆಇಬಿ

ಡಿಜಿಟಲ್ ಕನ್ನಡ ಟೀಮ್:

ದ ವೈರಲ್ ಫಿವರ್, ಎಐಬಿ, ವೈ ಫಿಲ್ಮ್ಸ್, ಅರ್ರೆ… ಇವೆಲ್ಲ ಯೂಟ್ಯೂಬ್ ಇಂಟರ್ನೆಟ್ ಗೆ, ಹೊಸ ಜಮಾನಾದ ಮನೋರಂಜನಾ ತುಡಿತಗಳಿಗೆ ಸರಿಯಾಗಿ ದೃಶ್ಯ ಸರಕುಗಳನ್ನು ಒದಗಿಸುತ್ತಿರುವ ಅಂತರ್ಜಾಲ ತಾಣಗಳು. ಬ್ರಾಂಡ್ ಪ್ರಮೋಷನ್ ಅನ್ನು ಕತೆಯ ಜತೆ ಸಮೀಕರಿಸಿ ಹಣಕಾಸಿನ ಮಾದರಿಯೊಂದನ್ನು ಕಂಡುಕೊಳ್ಳುವುದರಲ್ಲಿ ಹಲವರು ಸಫಲರಾಗಿದ್ದಾರೆ. ಇಂಗ್ಲಿಷ್- ಹಿಂದಿಯಲ್ಲಿ ಇಂಥ ತಾಣಗಳ ನೋಡುವಿಕೆ ಹೆಚ್ಚಿರುವುದರಿಂದ ಹೆಸರುವಾಸಿಯೂ ಆಗಿವೆ.

ಕನ್ನಡದಲ್ಲೂ ಇಂಥ ಹಲವು ಪ್ರಯತ್ನಗಳಿವೆಯಾದರೂ, ಅಂತರ್ಜಾಲ ವಿಸ್ತಾರ ಮತ್ತು ಡೇಟಾ ಪ್ಯಾಕ್ ಚಿಂತೆ ಇತ್ಯಾದಿ ಕಾರಣಗಳಿಂದ ಅಬ್ಬಾ ಎಂದು ಹುಬ್ಬೇರಿಸುವ ಮಟ್ಟಿಗೆ ಸಂಚಲನಗಳಾಗಿಲ್ಲ.

ಕೆಇಬಿ ಅರ್ಥಾತ್ ಕರ್ನಾಟಕ ಎಂಟರ್ ಟೈನ್ಮೆಂಟ್ ಬೋರ್ಡ್ ಅನ್ನೋದು ಈ ನಿಟ್ಟಿನಲ್ಲಿ ಭರವಸೆ ಮೂಡಿಸಿರುವ ಚಾನೆಲ್. ತಮಾಷೆಯ, ಅದೇ ಸಮಯಕ್ಕೆ ಇವತ್ತಿನ ಟ್ರೆಂಡ್ ಗಳಿಗೆ ಕನ್ನಡಿಯಾಗುವ ವಿಷಯಗಳನ್ನು ವೆಬ್ ಸಿರೀಸ್ ನಲ್ಲಿ ನಿರೂಪಿಸುತ್ತ ಹೊರಟಿದೆ ಕೆಇಬಿ. ಸಾಮಾಜಿಕ ತಾಣಗಳ ಗೀಳು ಹತ್ತಿಸಿಕೊಂಡವರ ಬದುಕಿನ ವಿಡಂಬನೆ ಬಿಂಬಿಸುವ ಎರಡು ಕಂತುಗಳು ಮನೋರಂಜನೆಯ ಸಿಹಿ ಊಟ ಬಡಿಸಿವೆ. ಮುಂದಿನ ಮಾರ್ಗದತ್ತ ಕಾತರವಾಗುವಂತೆಯೂ ಮಾಡಿವೆ.

ಇದೀಗ ಬಿಸಿ ಬಿಸಿಯಾಗಿ ಬಿಡುಗಡೆ ಆಗಿರುವ ಎರಡನೇ ಕಂತಿನಲ್ಲಿ ಲೂಸಿಯಾ- ಯೂಟರ್ನ್ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಪಾತ್ರವಹಿಸಿದ್ದಾರೆ. ತಮ್ಮನ್ನು ತಾವು ಗೇಲಿಗೆ ಒಡ್ಡಿಕೊಂಡು ಮನರಂಜನೆ ಬಡಿಸಿದ್ದಾರೆ.

ಸೃಜನಶೀಲ ಮನಸ್ಸುಗಳ ಕೆಇಬಿ ಎಂಬ ಯತ್ನಕ್ಕೆ ನಾವೊಂದು ಮೆಚ್ಚುಗೆ ಸಲ್ಲಿಸದಿದ್ದರೆ ಹೇಗೆ?

Leave a Reply