ಶಶಿಕಲಾ ಬಂಧನವಾದ್ರೆ ಶಾಸಕರಿಗೆಲ್ಲ ಬಿಡುಗಡೆ!- ತಮಿಳುನಾಡನ್ನು ಟ್ವಿಟ್ಟರ್ ಹಿಡಿದಿಟ್ಟಿರುವುದು ಹೇಗೆ?

(ಚಿತ್ರ ಕೃಪೆ: ಟ್ವಿಟರ್)

ಡಿಜಿಟಲ್ ಕನ್ನಡ ಟೀಮ್:

ಅಕ್ರಮ ಸಂಪತ್ತು ಪ್ರಕರಣದ ಕುರಿತಾಗಿ ಶಶಿಕಲಾ ಅಪರಾಧಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಲೇ ತಮಿಳುನಾಡಿನ ರಾಜಕೀಯ ವಿದ್ಯಾಮಾನಗಳು ಮತ್ತಷ್ಟು ರೋಚಕತೆ ಪಡೆದುಕೊಂಡಿವೆ. ಇದೇ ಸಂದರ್ಭದಲ್ಲಿ ಈ ತೀರ್ಪಿನ ಕುರಿತು ಸಾಕಷ್ಟು ಚರ್ಚೆಯಾಗುತ್ತಿದ್ದು, ಟ್ವಿಟರ್ ನಲ್ಲೂ ಈ ಕುರಿತ ಚರ್ಚೆ ಜೋರಾಗಿಯೇ ನಡೆದಿದೆ. ಈ ತೀರ್ಪಿನ ಕುರಿತು ಬಂದಿರುವ ಹಲವಾರು ಟ್ವೀಟ್ ಗಳ ಪೈಕಿ ಗಮನಸೆಳೆದಿರುವ ಟ್ವೀಟ್ ಗಳು ಹೀಗಿವೆ…

ಸಂಜಯ್ ವರ್ಮಾ: ಸುಪ್ರೀಂ ಕೋರ್ಟಿನ ನಿರ್ಧಾರದ ನಂತರ- ಜಯಾ ಆಪ್ತ ಪನ್ನೀರ್ ಸೆಲ್ವಂ ವರ್ಸಸ್ ಶಶಿಕಲಾ ಆಪ್ತ ಪಳನಿಸ್ವಾಮಿ ನಡುವೆ ಸಮರ ಆರಂಭ. ಪರೋಕ್ಷವಾಗಿ ಇದು ಅಮ್ಮಾ ವರ್ಸಸ್ ಶಶಿಕಲಾ ಹೋರಾಟ.

ಪರೇಶ್ ರಾವಲ್ ಫ್ಯಾನ್: ಬೇರೆಯವರನ್ನು ಕೂಡಿ ಹಾಕಿದಾಗ ಆಗುವ ನೋವು ಏನೆಂಬುದನ್ನು ಶಶಿಕಲಾ ಈಗ ಅರಿಯಲಿದ್ದಾರೆ.

ರಮೇಶ್ ಶ್ರೀವತ್ಸ: ಅದೃಷ್ಟ ಹೆಂಗೆಲ್ಲ ಬದಲಾಗುತ್ತೆ ನೋಡಿ. ಈಗ ಶಶಿಕಲಾ ಬಂಧಿ. ರೆಸಾರ್ಟಿನಲ್ಲಿ ಬಂಧಿತರಾಗಿದ್ದ ಶಾಸಕರೆಲ್ಲ ಫ್ರೀ..

ರಾಮ್ ಗೋಪಾಲ್ ವರ್ಮಾ: ಸುಪ್ರೀಂ ಕೋರ್ಟಿನ ತೀರ್ಪು ಹಾಗೂ ತನ್ನ ಪರಮಾಪ್ತೆ ಶಶಿಕಲಾ ಅವರ ಭವಿಷ್ಯವನ್ನು ಕಂಡು ಇನ್ನು ಮುಂದೆ ಜಯಲಲಿತಾ ಸಮಾದಿಯಲ್ಲಿ ಶಾಂತವಾಗಿರುವುದಿಲ್ಲ.

ಪರೇಶ್ ರಾವಲ್ ಫ್ಯಾನ್: ಶಶಿಕಲಾ ವಿರುದ್ಧ ತೀರ್ಪು ನೀಡಿದ ನಂತರ, ಮಾನ್ಯ ಸುಪ್ರೀಂ ಕೋರ್ಟ್ ರಾಮಚಂದ್ರ ಗುಹಾ ಅವರನ್ನು ತಮಿಳುನಾಡಿನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಿದೆ ಎಂದು ಭಾವಿಸಿದ್ದೆ.

ರವಿಶಂಕರ್ ಪ್ರಸಾದ್: ಸುಪ್ರೀಂ ಕೋರ್ಟಿನ ತೀರ್ಪಿನ ನಂತರ, ಜನರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸ್ಥಿರ ಸರ್ಕಾರ ತರಲು ರಾಜ್ಯಪಾಲರು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆ ಇದೆ.

ಸಂಧ್ಯಾ ಶ್ರೀಧರ್: ರಾಜಕಾರಣಿಗಳು ಮೊದಲು ತಮಗೆ ಮತ ಹಾಕಿದ ಮತದಾರನಿಗೆ ನಿಷ್ಠೆಯಿಂದ ಇರಬೇಕೇ ಹೊರತು ರೆಸಾರ್ಟ್ ನಲ್ಲಿ ಕೂತು ಬೇರೊಬ್ಬರಿಗೆ ನಿಷ್ಠೆ ತೋರಬಾರದು ಎಂಬುದನ್ನು ಯಾರಾದರೂ ನೆನಪಿಸಬೇಕು.

ಜಾನ್ ಡುನ್ಹಾ: ನಿಜ ಜೀವನದಲ್ಲಿ ಪನ್ನೀರ್ ಸೆಲ್ವಂ ನಿಜವಾದ ಕಬಾಲಿ ಡಾ…

ಕಾರ್ತಿಕೇಯನ್ ಎಸ್: ಪ್ರತಿವರ್ಷ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬ ಜನವರಿ 14ರಂದು ಬರುತಿತ್ತು. ಆದರೆ ಈ ಬಾರಿ ಅದು ಫೆ.14ರಂದು ಬರುತ್ತಿತ್ತು.

ಕೆ…ಇಸ್ ಎನಫ್: ರೆಫ್ರೀಜರೇಟರ್ ನಿಂದ ಪನ್ನೀರ್ ಕಚೇರಿಗೆ ಆಗಮಿಸಿದೆ…

ತಿರುಚಿತ್ರಂಬಲಂ: ತಮಿಳುನಾಡನ್ನು ರಕ್ಷಿಸಿದ ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಧನ್ಯವಾದಗಳು…

ಲೋಕೇಶ್ ರಾವ್: ಈ ತೀರ್ಪಿನಿಂದ ತಮಿಳುನಾಡನ್ನು ಮಾಫಿಯಾದಿಂದ ರಕ್ಷಿಸಿದಂತಾಗಿದೆ.

ಅರ್ಚನಾ ಗೋವಿಂದಚಾರಿ: ಪ್ರೇಮಿಗಳ ದಿನಾಚಾರಣೆಗೆ ಸುಪ್ರೀಂ ಕೋರ್ಟ್ ತಮಿಳುನಾಡಿನ ಜನತೆಗೆ ಕೊಟ್ಟ ಉಡುಗೊರೆ ಈ ತೀರ್ಪು…

ಮಿ.ಸ್ಯಾಂಟ: ಈ ಬಾರಿಯ ಪ್ರೇಮಿಗಳ ದಿನವನ್ನು ಶಶಿಕಲಾ ಎಂದಿಗೂ ಮರೆಯುವುದಿಲ್ಲ.

ಗುಲ್ಫಾಂಗ್ಲೋರಸ್: 2 ಬಾರಿ ನಿರಪರಾಧಿಯಾದ ಸಲ್ಮಾನ್ ಖಾನ್ ಒಂದೆಡೆಯಾದರೆ, ಅಮ್ಮಾ ನಿಧನದ ನಂತರ ಶಶಿಕಲಾ ಈಗ ಅಪರಾಧಿಯಾಗಿರುವುದು ಆಶ್ಚರ್ಯ.

ಬೆಲ್ಲೆ: ಇನ್ನು ಮುಂದೆ ಫೆಬ್ರವರಿ 14ರ ದಿನವನ್ನು ಪ್ರೇಮಿಗಳ ದಿನ ಎಂದು ನೆನಪಿಸಿಕೊಳ್ಳುವ ಬದಲು, ಶಶಿಕಲಾ ಅಪರಾಧಿ ದಿನ ಎಂದು ನೆನಪಿಸಿಕೊಳ್ಳುತ್ತೇನೆ.

ವಿಘ್ನೇಶ್ವರನ್: ಈ ಪ್ರಕರಣದಲ್ಲಿ ಜಯಲಲಿತಾ ಸಹ ಅಪರಾಧಿಯಾಗಿದ್ದಾರೆ. ಅವರು ಸತ್ತಿದ್ದಾರೆ ಎಂಬ ಮಾತ್ರಕ್ಕೆ ಅವರು ಭ್ರಷ್ಟರಾಗಿರಲಿಲ್ಲ ಎಂದು ತಿಳಿಯಬಾರದು ಎಂಬ ಅಂಶ ಜಯಾರ ಎಲ್ಲ ನಿಷ್ಠಾವಂತರು ಅರಿಯಬೇಕು.

Leave a Reply