ಹಿಟ್ಲರ್ ಮನಸೂರೆಗೊಳಿಸಿದ್ದ ಸಿನಿಮಾ ತಾರೆ ಮರಿಕಾ ರೊಕ್ ಸೋವಿಯತ್ ರಷ್ಯಾದ ಗೂಢಚಾರಿ! ದಾಖಲೆಗಳಿಂದ ಬೆಳಕಿಗೆ ಬಂದ ರೋಚಕ ಅಂಶ

ಡಿಜಿಟಲ್ ಕನ್ನಡ ಟೀಮ್:

ಒಂದು ಕಾಲದಲ್ಲಿ ಖ್ಯಾತ ಸರ್ವಾಧಿಕಾರಿ ಜರ್ಮನಿನ ಹಿಟ್ಲರ್ ಅವರ ಮನ ಗೆದ್ದಿದ್ದ ಜರ್ಮನಿಯ ಸಿನಿಮಾ ನಟಿ ಮರಿಕಾ ರೊಕ್, ಸೋವಿಯತ್ ರಷ್ಯಾದ ಪರವಾಗಿ ಗೂಢಚಾರ ಕೆಲಸ ಮಾಡುತ್ತಿದ್ದಳು ಎಂಬ ಅಚ್ಚರಿಯ ಅಂಶ ಈಗ ಬೆಳಕಿಗೆ ಬಂದಿದೆ.

ಕಳೆದ ಐವತ್ತು ದಶಕ್ಕೂ ಹೆಚ್ಚುಕಾಲ ರಹಸ್ಯವಾಗಿದ್ದ ಗುಪ್ತಚರ ದಾಖಲೆಗಳು ಈಗ ಬಹಿರಂಗಗೊಂಡಿವೆ. ಆ ದಾಖಲೆಗಳ ಪ್ರಕಾರ ಸೋವಿಯತ್ ರಷ್ಯಾದ ಗೂಢಚಾರಿಯಾಗಿದ್ದ ಮರಿಕಾ ರೋಕ್, ಮಹತ್ವದ ದಾಖಲೆಗಳನ್ನು ಪಡೆದು ರಷ್ಯಾಗೆ ರವಾನಿಸಲೆಂದೇ ಹಿಟ್ಲರ್ ನ ಬಲಗೈನಂತಿದ್ದ ನಾಜಿಯ ಮುಖ್ಯಸ್ಥ ಗೊಬೆಲ್ಸ್ ಜತೆ ಸಖ್ಯ ಬೆಳೆಸಿಕೊಂಡಿದ್ದಳು.

ಈಜಿಪ್ಟ್ ನಲ್ಲಿ ಹಂಗೇರಿಯ ದಂಪತಿಗೆ ಜನಿಸಿದ ಮರಿಕಾ ರೊಕ್, 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಮರಿಕಾ ರೋಕ್ ಆರಂಭದಲ್ಲಿ ನೃತ್ಯ ಪ್ರದರ್ಶಕಿಯಾಗಿದ್ದರು. ನಾಜಿಗಳ ಆಳ್ವಿಕೆ ಕಾಲದಲ್ಲಿ ಹಾಲಿವುಡ್ ಲ್ಲಿ ರಿಟಾ ಹೈವರ್ತ್ ಹಾಗೂ ಜಿಂಜರ್ ರೋಜರ್ ರಂತೆ ತಮ್ಮಲ್ಲಿಯೂ ಖ್ಯಾತ ಸಿನಿಮಾ ನಟಿ ಬೇಕು ಎಂದು ನಾಯಕರು ನಿರ್ಧರಿಸಿದ್ದರಿಂದ ಮರಿಕಾ ಅವರಿಗೆ ಸಿನಿಮಾ ನಟಿಯಾಗಿಿ ಅವಕಾಶ ಸಿಕ್ಕಿ ಖ್ಯಾತ ತಾರೆಯಾದರು. ರೊಕ್ ಎಷ್ಟು ಜನಪ್ರಿಯತೆ ಪಡೆದಿದ್ದರೆಂದರೆ ಅವರ ಕಲೆಗೆ ಸರ್ವಾಧಿಕಾರಿ ಹಿಟ್ಲರ್ ಸಹ ಮನಸೋತಿದ್ದ. ಹಿಟ್ಲರ್ ಅಭಿಮಾನದಿಂದ ತಮ್ಮ ನೆಚ್ಚಿನ ನಟಿಗೆ ನೀಡಿದ್ದ ಹೂಗುಚ್ಚ ಹಾಗೂ ಅದಕ್ಕೆ ಪ್ರತಿಯಾಗಿ ಮರಿಕಾ ರೊಕ್ ನೀಡಿದ್ದ ಧನ್ಯವಾದ ಪತ್ರವನ್ನು ಈಗಲೂ ಬರ್ಲಿನ್ ನ ಸಿನಿಮಾ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ.

ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದ ರೊಕ್ ಕ್ರಮೇಣ, ಹಿಟ್ಲರ್ ನ ಬಲಗೈ ಬಂಟನಂತಿದ್ದ ಗೊಬೆಲ್ಲೊ ಜತೆ ಸಂಬಂಧ ಬೆಳಸಿಕೊಂಡಳು. ಲಭ್ಯವಿವರುವ ದಾಖಲೆಗಳ ಪ್ರಕಾರ ರೊಕ್, 1940ರಿಂದಲೇ ರಷ್ಯಾದ ಪರ ಗೂಢಚಾರಿಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದ್ದಳು. ಸುಮಾರು ದಶಕಗಳಿಗೂ ಹೆಚ್ಚು ಕಾಲ ರಷ್ಯಾ ಪರ ಗೂಢಚರ್ಯ ಕೆಲಸ ಮಾಡಿದ್ದ ರೋಕ್ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅನೇಕ ಮಹತ್ವದ ಮಾಹಿತಿಗಳನ್ನು ರಷ್ಯಾಕ್ಕೆ ರವಾನಿಸಿದ್ದರು ಎನ್ನಲಾಗಿದೆ. ಆದರೆ ರೊಕ್ ರಷ್ಯಾಕ್ಕೆ ಯಾವ ಯಾವ ಮಾಹಿತಿಗಳನ್ನು ರವಾನೆ ಮಾಡಿದ್ದರು ಎಂಬುದು ಮಾತ್ರ ತಿಳಿದಿಲ್ಲ.

ಮತ್ತೊಂದೆಡೆ ಜರ್ಮನ್ ಪರ ಗುಪ್ತಚಾರಿಯಾಗಿದ್ದ ಗೆಹ್ಲಾನ್, ರಷ್ಯಾ ಪರ ಗುಪ್ತಚಾರಿಯಾಗಿ ರೊಕ್ ಕಾರ್ಯನಿರ್ವಹಿಸುತ್ತಿರುವ ಬಗ್ಗೆ 1951ರಲ್ಲಿ ಅನುಮಾನ ವ್ಯಕ್ತಪಡಿಸಿದ್ದರು. ಈ ಅನುಮಾನ ವ್ಯಕ್ತವಾಗುತ್ತಿದ್ದಂತೆ ಅದೇ ವರ್ಷ ಸಿನಿಮಾ ವೃತ್ತಿ ಜೀವನವನ್ನು ಬಿಟ್ಟು ಬಟ್ಟೆ ಮಳಿಗೆ ಇಡುವ ನಿರ್ಧಾರವನ್ನು ರೊಕ್ ಪ್ರಕಟಿಸಿದ್ದರು. ಆ ಮೂಲಕ ಜರ್ಮನಿಯ ಗುಪ್ತಚರ ಇಲಾಖೆಗೆ ತನ್ನ ಮೇಲೆ ಅನುಮಾನ ಬಾರದಂತೆ ಪಾರಾಗುವಲ್ಲಿ ಯಶಸ್ವಿಯಾಗಿದ್ದರು. ಸಿನಿಮಾ ನಿರ್ದೇಶಕರಾಗಿದ್ದ ರೊಕ್ ಪತಿ ಜಾರ್ಜ್ ಜಾಕೊಬ್ ರನ್ನು ಸಹ ಸೋವಿಯತ್ ನ ಗೂಡಚಾರಿಯಾಗಿ ನೇಮಿಸಲಾಗಿತ್ತು ಎಂಬ ಅಂಶವೂ ಬೆಳಕಿಗೆ ಬಂದಿದೆ.

2004ರಲ್ಲಿ ರೊಕ್ (90) ವಿಧಿವಶರಾದರು. ರೊಕ್ ಅವರು ಸತ್ತು 13 ವರ್ಷಗಳ ನಂತರ ಅವರು ರಷ್ಯಾದ ಗೂಢಚಾರಿಯಾಗಿ ಕಾರ್ಯನಿರ್ವಹಿಸಿದ್ದು ಬಹಿರಂಗವಾಗಿದೆ. ಗೂಢಚರ್ಯದಲ್ಲಿ ಮಹಿಳೆಯರು ಮಹತ್ವದ ಪಾತ್ರ ನಿರ್ವಹಿಸಿರುವುದು ಹೊಸತೇನಲ್ಲ. ಈ ಬಗ್ಗೆ ಇತಿಹಾಸದ ಪುಟಗಳಲ್ಲಿ ಅನೇಕ ಉದಾಹರಣೆಗಳು ನಮಗೆ ಕಾಣ ಸಿಗುತ್ತವೆ. ಆ ಮೂಲಕ ಒಂದು ಹೆಣ್ಣು ಯಾವ ರೀತಿಯಲ್ಲಿ ಪ್ರಭಾವ ಬೀರಬಲ್ಲಳು ಎಂಬುದಕ್ಕೆ ಮತ್ತೊಂದು ಉದಾಹರಣೆ ಮರಿಕಾ ರೊಕ್.

Leave a Reply