ಭೂಮಿಯಂತೆ ಇವೆ ಇನ್ನು 7 ಗ್ರಹಗಳು, ಇವನ್ನು ಪತ್ತೆ ಹಚ್ಚಿದ ನಾಸಾ ವಿಜ್ಞಾನಿಗಳು ಹೇಳುತ್ತಿರುವುದೇನು?

ಟ್ರಾಪಿಸ್ಟ್-1 ನಕ್ಷತ್ರದ ಸುತ್ತ ಭೂಮಿಯನ್ನು ಹೋಲುವ ಏಳು ಗ್ರಹಗಳ ಕಾಲ್ಪನಿಕ ಚಿತ್ರ. (ಚಿತ್ರಕೃಪೆ- ನಾಸಾ ಟ್ವಿಟರ್ ಖಾತೆ)

ಡಿಜಿಟಲ್ ಕನ್ನಡ ಟೀಮ್:

ಅಂತರಿಕ್ಷದಲ್ಲಿ ಭೂಮಿಯಂತಹ ಬೇರೆ ಗ್ರಹಗಳು ಇವೆ ಎಂಬ ವಾದಕ್ಕೆ ಈಗ ಮತ್ತಷ್ಟು ಪುಷ್ಠಿ ಸಿಕ್ಕಿವೆ. ಬೇರೊಂದು ನಕ್ಷತ್ರಗಳ ಬಳಿ ಭೂಮಿಯಂತೆ ಹೋಲುವ 7 ಗ್ರಹಗಳನ್ನು ನಮ್ಮ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಜತೆಗೆ ಆ ಗ್ರಹಗಳಲ್ಲಿ ಜೀವಿಗಳು ವಾಸಿಸುತ್ತಿರುವ ಬಗ್ಗೆಯೂ ಶಂಕೆ ವ್ಯಕ್ತಪಡಿಸಿದ್ದಾರೆ.

ಹೌದು, ಬುಧವಾರ ನಾಸಾ ಹಾಗೂ ಬೆಲ್ಜಿಯಂನ ಸಂಶೋಧನಾ ತಂಡ ಏಳು ಹೊಸ ಗ್ರಹಗಳನ್ನು ಪತ್ತೆ ಹಚ್ಚಿರುವುದಾಗಿ ಘೋಷಿಸಿವೆ. ಈ ಗ್ರಹಗಳು 40 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವುದಾಗಿ ಮಾಹಿತಿ ನೀಡಿವೆ. ಈ ಗ್ರಹಗಳು ಟ್ರಾಪಿಸ್ಟ್-1 ಎಂಬ ಕಿರಿಯದಾದ ನಕ್ಷತ್ರದ ಸುತ್ತ ಸುತ್ತುತ್ತಿವೆ. ಇವು ಗುರು ಗ್ರಹದ ಗಾತ್ರದಷ್ಟಿವೆ ಎಂದು ಹೇಳಲಾಗಿದೆ. ಈ ಏಳು ಗ್ರಹಗಳ ಪೈಕಿ 3 ಗ್ರಹಗಳು ವಾಸಿಸಲು ಯೋಗ್ಯವಾಗಿದ್ದು ನೀರು ಹಾಗೂ ಜೀವಿಗಳು ಅಸ್ತಿತ್ವದಲ್ಲಿರುವ ಬಗ್ಗೆ ಅಂದಾಜಿಸಲಾಗಿದೆ. ಸದ್ಯಕ್ಕೆ ಭೂಮಿಯ ರೀತಿಯ ಗ್ರಹಗಳು ಇರುವಿಕೆ ಬಗ್ಗೆ ಮಾತ್ರ ಮಾಹಿತಿ ಸಿಕ್ಕಿದ್ದು, ಈ ಗ್ರಹಗಳಲ್ಲಿ ಜೀವಿಗಳು ಇರುವಿಕೆ ಬಗ್ಗೆ ಖಚಿತಪಡಿಸಿಕೊಳ್ಳಲು ಅಧ್ಯಯನ ನಡೆಸಬೇಕು.

ಈ ಏಳು ಗ್ರಹಗಳು ನಕ್ಷತ್ರದ ಸಮೀಪದಲ್ಲೇ ಇದ್ದು, ಇದನ್ನು ಹೀಗೆ ಅಂದಾಜಿಸಬಹುದು. ಟ್ರಾಪಿಸ್ಟ್-1 ನಕ್ಷತ್ರವನ್ನು ನಮ್ಮ ಸೂರ್ಯ ಎಂದು ಪರಿಗಣಿಸಿದರೆ ಈ ಏಳು ಗ್ರಹಗಳು ಸೂರ್ಯನಿಗೆ ಹತ್ತಿರ ಗ್ರಹವಾಗಿರುವ ಬುಧ ಗ್ರಹದ ಕಕ್ಷೆಯಷ್ಟು ದೂರದಲ್ಲಿ ಇವೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಈ ಟ್ರೈಪಿಸ್ಟ್ ನಕ್ಷತ್ರ ಸಾಕಷ್ಟು ಮಂದತೆಯ ನಕ್ಷತ್ರವಾಗಿದ್ದು ನಮ್ಮ ಸೂರ್ಯನಿಗಿಂತ 200 ಪಟ್ಟು ಕಡಿಮೆ ಪ್ರಕಾಶಮಾನ ಹೊಂದಿದೆ.

Leave a Reply