ತನ್ನ ರಾಜ್ಯದಲ್ಲಿ ಕಮ್ಯುನಿಷ್ಟ್ ಕಗ್ಗೊಲೆ ನಿಯಂತ್ರಿಸಲಾಗದೆ ಮಂಗಳೂರಲ್ಲಿ ಸೌಹಾರ್ದ ಭಾಷಣಕ್ಕೆ ಬಂದ ಮುಖ್ಯಮಂತ್ರಿ ಪಿಣರಾಯಿ ವಿರುದ್ಧ ಬಂದ್ ಆಚರಣೆ

ಡಿಜಿಟಲ್ ಕನ್ನಡ ಟೀಮ್:

ಮಂಗಳೂರಿನ ನೆಹರೂ ಮೈದಾನದಲ್ಲಿ ಸಿಪಿಎಂ ಸಮಾವೇಶ ‘ಕರಾವಳಿ ಸೌಹಾರ್ದ ಸಮಾವೇಶ’ ದಲ್ಲಿ ಭಾಗವಹಿಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮಿಸಿದ್ದಕ್ಕೆ ಸಂಘಪರಿವಾರದ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಶನಿವಾರ ಜಿಲ್ಲೆಯಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಪರಿಣಾಮ ಸೆಕ್ಷನ್ 144 ಜಾರಿಯಾಗಿದ್ದಲ್ಲದೆ, ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು.

ಕೇರಳದಲ್ಲಿ ಬಿಜೆಪಿ, ಆರೆಸ್ಸೆಸ್ ಮುಖಂಡರ ಹತ್ಯೆ ನಿರಂತರವಾಗಿ ನಡೆಯುತ್ತಿದ್ದು ಇದರ ಹಿಂದೆ ಸಿಪಿಎಂ ಕೈವಾಡವಿದೆ ಎಂಬ ಆರೋಪ ಮಾಡಿ ಅವರ ಭೇಟಿಯನ್ನು ವಿರೋಧಿಸಲಾಯಿತು. ಕೇರಳದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿರುವ ಸಂದರ್ಭದಲ್ಲಿ ವಿಜಯನ್ ಮಂಗಳೂರಿಗೆ ಬಂದು ಸೌಹಾರ್ದತೆಯ ಬಗ್ಗೆ ಬೋಧನೆ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಲಾಗಿದೆ. ಈ ಪ್ರತಿಭಟನೆ ವೇಳೆ ಕೆಲವೆಡೆ ಕಲ್ಲು ತೂರಾಟದಂತಹ ಅಹಿತಕರ ಘಟನೆಗಳು ನಡೆದಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.

ಕೇರಳದಲ್ಲಿ ಕಮ್ಯುನಿಷ್ಟರ ಹಿಂಸಾಚಾರದ ಕುರಿತು ಬಿಜೆಪಿಯ ಸದಾನಂದ ಮಾಸ್ಟರ್ ಅವರು ಈ ಹಿಂದೆ ಮಾಡಿದ್ದ ಭಾಷಣದ ವರದಿ ಇಲ್ಲಿ ನೋಡಬಹುದು.

Leave a Reply