ಲಿಂಗ ಸಮಾನತೆ ಅಮಿತಾಬ್ ಬಚ್ಚನ್ ಮಾದರಿ, ಆಮೀರ್ ಸಹ ತೊಡಗಿಸಿಕೊಳ್ಳುತ್ತಿರುವ ಬ್ರ್ಯಾಂಡ್ ಇದು

ಡಿಜಿಟಲ್ ಕನ್ನಡ ಟೀಮ್:

ಲಿಂಗ ಸಮಾನತೆ ಮೂಲಕ ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಸ್ಥಾನಮಾನ, ಅವಕಾಶ ಹಾಗೂ ಪ್ರಾಮುಖ್ಯತೆ ನೀಡುವ ವಿಚಾರವಾಗಿ ನಾವು ಸಾಕಷ್ಟು ಚರ್ಚೆಗಳನ್ನು ನೋಡಿದ್ದೇವೆ. ಈಗ ಲಿಂಗ ಸಮಾನತೆ ಬಗ್ಗೆ ಧ್ವನಿ ಎತ್ತಿರುವ ಸರದಿ ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಅವರದು.

ಟ್ವಿಟರ್ ನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿರುವ ಅಮಿತಾಬ್, ‘ನಾನು ಸತ್ತ ನಂತರ ಬಿಟ್ಟು ಹೋಗುವ ಆಸ್ತಿಯನ್ನು ನನ್ನ ಮಗಳು ಹಾಗೂ ಮಗನಿಗೆ ಸಮಾನವಾಗಿ ಹಂಚಿಕೆಯಾಗಬೇಕು! ಲಿಂಗ ಸಮಾನತೆ, ನಾವೆಲ್ಲರು ಸಮಾನರು’ ಎಂದು ಘೋಷಣೆ ಮಾಡುವ ಫೋಟೊವೊಂದನ್ನು ಟ್ಪೀ ಮಾಡಿದ್ದಾರೆ. ಕಳೆದ ವರ್ಷ ತಮ್ಮ ಇಬ್ಬರು ಮೊಮ್ಮಕ್ಕಳಿಗೆ ಪತ್ರ ಬರೆದು ತಾವು ಹೆಣ್ಣಾಗಿದ್ದರೂ ಸಹ ತಮ್ಮ ಕನಸಿನಂತೆ ಜೀವನವನ್ನು ಆನಂದಿಸುವಂತೆ ಕಿವಿಮಾತು ಹೇಳಿದ್ದ ಬಚ್ಚನ್, ಈಗ ಲಿಂಗ ಸಮಾನತೆ ಬಗ್ಗೆ ಈ ರೀತಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲಿಂಗ ಸಮಾನತೆ ಬಗ್ಗೆ ಕೇವಲ ಬಿಗ್ ಬಿ ಮಾತ್ರವಲ್ಲ, ಬಾಲಿವುಡ್ ನ ಮತ್ತೊಬ್ಬ ಖ್ಯಾತ ನಟ ಆಮೀರ್ ಖಾನ್ ಸಹ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ಚಿತ್ರ ದಂಗಲ್ ನಲ್ಲೂ ಹೆಣ್ಣು ಮಕ್ಕಳ ಸಾಧನೆ ಕುರಿತಾಗಿದ್ದು, ಸ್ತ್ರೀ ಸಮಾನತೆಯ ಬ್ರ್ಯಾಂಡಿಂಗ್ ನಲ್ಲಿ ಮುಂಚುಣಿಯಲ್ಲಿದ್ದಾರೆ. ಈಗ ಸ್ಟಾರ್ ವಾಹಿನಿಯಲ್ಲಿ ಹೊಸ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿರುವ ಆಮೀರ್ ಖಾನ್, ಈ ಕಾರ್ಯಕ್ರಮದಲ್ಲೂ ಹೆಣ್ಣುಮಕ್ಕಳ ಸಮಾನತೆ, ಸ್ವಾತಂತ್ರ, ಅವರ ಪ್ರಗತಿಯ ವಿಷಯವನ್ನು ಸಾರಲು ಮುಂದಾಗಿದ್ದಾರೆ.

ಆಮಿರ್ ಖಾನ್ ಅವರ ಈ ನೂತನ ಕಾರ್ಯಕ್ರಮ ‘ನಯೀ ಸೋಚ್’ ಜಾಹೀರಾತು ಹೀಗಿದೆ ನೋಡಿ…

 

Leave a Reply