ಸ್ಥಳೀಯರ ಅಡಚಣೆ ನಡುವೆ ಉಗ್ರರ ವಿರುದ್ಧ ಭಾರತೀಯ ಸೇನೆ ಕಾರ್ಯಾಚರಣೆ, ಅನಂತರಾಮು ಅವರಿಗೆ ಶಿವರಾಮ ಕಾರಂತ ಪ್ರಶಸ್ತಿ, ಅಖಿಲೇಶ್ ಪ್ರಶ್ನಿಸಿದ ಉ.ಪ್ರ ರಾಜ್ಯಪಾಲರು, ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ಕರಣ್ ಜೋಹರ್ ಅಪ್ಪ!

ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ವಾರಣಾಸಿಯಲ್ಲಿ ರೋಡ್ ಶೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ. (ಚಿತ್ರಕೃಪೆ: ಹಿಂದೂಸ್ಥಾನ್ ಟೈಮ್ಸ್)

ಡಿಜಿಟಲ್ ಕನ್ನಡ ಟೀಮ್:

ಉಗ್ರರ ವಿರುದ್ಧ ಕಾರ್ಯಾಚರಣೆ

ನಿನ್ನೆ ಸಂಜೆ 6 ಗಂಟೆಯಿಂದ ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್ ಪ್ರದೇಶದಲ್ಲಿ ಅಡಗಿ ಕುಳಿತಿದ್ದ ಇಬ್ಬರು ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಭಾರತೀಯ ಸೇನೆ ಭಾನುವಾರ ಅಂತ್ಯಗೊಳಿಸಿದೆ. ಗುಪ್ತಚರ ಇಲಾಖೆ ನೀಡಿದ ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆಗೆ ಮುಂದಾದ ಸೇನೆ, ಸ್ಥಳೀಯರ ಅಡಚಣೆ ನಡುವೆಯೂ ತಮ್ಮ ಗುರಿ ಮುಟ್ಟಿದೆ. ಈ ಕಾರ್ಯಾಚರಣೆ ವೇಳೆ ಸ್ಥಳೀಯರಿಂದ ಕಲ್ಲುತೂರಾಟ ಎದುರಿಸಿದ ಸೇನೆ, ಪರಿಸ್ಥಿತಿ ನಿಯಂತ್ರಿಸಲು ಈ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತು. ಜತೆಗೆ ಕೆಲ ಹೊತ್ತು ಮೊಬೈಲ್ ಹಾಗೂ ಇಂಟರ್ ನೆಟ್ ಸಂಪರ್ಕ ಸ್ಥಗಿತಗೊಳಿಸಿ ಕಾರ್ಯಾಚರಣೆ ನಡೆಸಲಾಯಿತು. ಸದ್ಯ ಬಂದಿರುವ ಮಾಹಿತಿ ಪ್ರಕಾರ ಈ ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ್ದು, ಇಬ್ಬರ ಪೈಕಿ ಒಬ್ಬನನ್ನು ಬುರ್ಹಾನ್ ವಾನಿಯ ಆಪ್ತ ಸಬ್ಜರ್ ಭಟ್ ಎಂದು ಹೇಳಲಾಗುತ್ತಿದೆ. ಸುದೀರ್ಘ 15 ಗಂಟೆಗಳ ಕಾರ್ಯಾಚರಣೆಯಲ್ಲಿ ಭಾರತದ ಯೋಧ ಹುತಾತ್ಮರಾಗಿದ್ದಾರೆ.

t_r_anantharamu

ಅನಂತರಾಮು ಅವರಿಗೆ ಶಿವರಾಮ್ ಕಾಂರತ ಪ್ರಶಸ್ತಿ

ವಿಜ್ಞಾನ ಲೇಖಕ, ಡಿಜಿಟಲ್ ಕನ್ನಡ ಅಂಕಣಕಾರರಾಗಿರುವ ಟಿ.ಆರ್.ಅನಂತರಾಮು ಅವರಿಗೆ ಪ್ರತಿಷ್ಠಿತ ಡಾ.ಶಿವರಾಮ ಕಾರಂತ ಪ್ರಶಸ್ತಿ ದೊರೆತಿದೆ. ಶಿವಮೊಗ್ಗದ ಕರ್ನಾಟಕ ಸಂಘ ಪ್ರತಿ ವರ್ಷ ಈ ಪ್ರಶಸ್ತಿ ನೀಡುತ್ತಿದ್ದು ವಿಜ್ಞಾನ ಸಾಹಿತ್ಯಕ್ಕೆ ಅನಂತರಾಮು ಅವರ ಸೇವೆಯನ್ನು ಪರಿಗಣಿಸಿ ಈ ಬಾರಿ ಅವರಿಗೆ ಪುರಸ್ಕರಿಸುತ್ತಿದೆ. ಈ ಪ್ರಶಸ್ತಿಯು ₹ 25 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.

ಅಖಿಲೇಶ್ ಯಾವರ್ ಪ್ರಶ್ನಿಸಿದ ರಾಜ್ಯಪಾಲರು

ಕಳೆದ ತಿಂಗಳು ಅತ್ಯಾಚಾರ ಆರೋಪ ಹೊತ್ತ ಸಚಿವ ಗಾಯತ್ರಿ ಪ್ರಜಾಪತಿ ಅವರನ್ನು ಸಂಪುಟದಲ್ಲೇ ಮುಂದುವರಿಸಿರುವ ಬಗ್ಗೆ ಉತ್ತರ ಪ್ರದೇಶ ರಾಜ್ಯಪಾಲರಾದ ರಾಮ್ ನಾಯಕ್ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ಅಖಿಲೇಶ್ ಅವರಿಗೆ ರಾಜ್ಯಪಾಲರು ಪತ್ರ ಬರೆದಿದ್ದು, ‘ಗಾಯತ್ರಿ ಪ್ರಜಾಪತಿ ಅವರ ವಿರುದ್ಧ ಅತ್ಯಾಚಾರ ಪ್ರಕರಣದಲ್ಲಿ ದೂರು ನೀಡಿ, ಎಫ್ಐಆರ್ ದಾಖಲಾಗಿದೆ. ಜತೆಗೆ ಜಾಮೀನುರಹಿತ ವಾರೆಂಟ್ ಸಹ ಹೊರಡಿಸಲಾಗಿದೆ. ಈ ಪರಿಸ್ಥಿತಿಯಲ್ಲೂ ಅವರನ್ನು ಸಂಪುಟದಲ್ಲಿ ಮುಂದುವರಿಸಿರುವುದು ಏಕೆ. ಅವರು ಸಂಪುಟದಲ್ಲೇ ಮುಂದುವರಿದರೆ ಸಂವಿಧಾನಾತ್ಮ ನೈತಿಕತೆಗೆ ಹಾಗೂ ಗೌರವಕ್ಕೆ ಧಕ್ಕೆಯಾಗಲಿದೆ. ಅವರನ್ನು ಸಚಿವರಾಗಿ ಮುಂದುವರಿಸಿರುವುದಕ್ಕೆ ಸೂಕ್ತ ವಿವರಣೆ ನೀಡಿ’ ಎಂದು ಸೂಚನೆ ಕೊಟ್ಟಿದ್ದಾರೆ.

ಮದುವೆಯಾಗದೇ ಅವಳಿ ಮಕ್ಕಳಿಗೆ ತಂದೆ ಆದ ಕರಣ ಜೋಹರ್

ಬಾಡಿಗೆ ತಾಯ್ತನದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಬಾಲಿವುಡ್ ಖ್ಯಾತ ಚಿತ್ರ ನಿರ್ದೇಶಕ ಕರಣ್ ಜೋಹರ್ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳಿಗೆ ತಂದೆಯಾಗಿದ್ದಾರೆ. ಅವಿವಾಹಿತನಾಗಿರುವ 44 ವರ್ಷದ ಕರಣ್ ಜೋಹರ್ ಈಗ ಒಂದು ಗಂಡು ಮಗು ಹಾಗೂ ಒಂದು ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಈ ಮಕ್ಕಳಿಗೆ ಕರಣ್ ಯಶ್ ಹಾಗೂ ರೋಹಿ ಎಂದು ಹೆಸರನ್ನು ಇಟ್ಟಿದ್ದಾರೆ.

 

Leave a Reply