ಡಿಜಿಟಲ್ ಕನ್ನಡ ಟೀಮ್:
ಪಂಚ ರಾಜ್ಯ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಟ್ವಿಟರ್ ನಲ್ಲಿ ಚರ್ಚೆ ತೀವ್ರತೆ ಪಡೆದುಕೊಂಡಿದೆ. ಇದ ಜತೆಗೆ ಹಾಸ್ಯಾಸ್ಪದ ಟ್ವೀಟ್ ಗಳು ಹಾಗೂ ವಿಭಿನ್ನ ಆಯಾಮದ ಟ್ವೀಟ್ ಗಳು ಗಮನ ಸೆಳೆಯುತ್ತಿದ್ದು, ಆ ಪೈಕಿ ನೀವು ನೋಡಿ ಆನಂದಿಸಬಹುದಾದ ಕೆಲವು ಟ್ವೀಟ್ ಗಳು ಹೀಗಿವೆ…
ಸುಧಾಂಶು ಪಾಂಡೆ: ಕುಟುಂಬ ರಾಜಕಾರಣದ ಎಲ್ಲ ಪಕ್ಷಗಳು ಸೋತಿವೆ. ಪ್ರಜಾಪ್ರಭುತ್ವ 5 ರಾಜ್ಯಗಳಲ್ಲಿ ಗೆದ್ದರೆ, ಕುಟುಂಬ ರಾಜಕಾರಣದ ವ್ಯವಹಾರ ಶೂನ್ಯ ಸಂಪಾದನೆ.
ಇಶ್ಕರಣ್ ಎಸ್. ಭಂಡಾರಿ: ಪ್ರಧಾನಿ ಮೋದಿ ಅವರು ರಾಜ್ಯ ವಿಧಾನಸಭೆ ಚುನಾವಣೆ ಸೇರಿದಂತೆ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ತಮ್ಮ ಟ್ವಿಟರ್ ಅಕೌಂಟ್ ಜವಾಬ್ದಾರಿಯನ್ನೂ ಹೊಂದಿಲ್ಲ. ಅದನ್ನು ಅವರ ಕಚೇರಿ ನಿಭಾಯಿಸುತ್ತದೆ.
ಪರೇಶ್ ರಾವಲ್ ಫ್ಯಾನ್: ತ್ರಿಶತಕ ಭಾರಸಿದ ಭಾರತೀಯರು… ಚೆನ್ನೈನಲ್ಲಿ ಸೆಹ್ವಾಗ್, ಮುಲ್ತಾನ್ ನಲ್ಲಿ ಸೆಹ್ವಾಗ್, ಚೆನ್ನೈನಲ್ಲಿ ಕರುಣ್ ನಾಯರ್ ಹಾಗೂ ಉತ್ತರ ಪ್ರದೇಶದಲ್ಲಿ ಮೋದಿ.
ವಿರೇಂದ್ರ ಸೆಹ್ವಾಗ್: ಜನರು ಚುನಾವಣೆಯಲ್ಲಿ ತಮ್ಮ ಮತವನ್ನು ಚಲಾಯಿಸಿದರೇ ಹೊರತು ಜಾತಿಯನ್ನು ಚಲಾಯಿಸಲಿಲ್ಲ. ಉತ್ತರ ಪ್ರದೇಶ ಈಗ ನಿಜಕ್ಕೂ ಜಾತಿ ವ್ಯವಸ್ಥೆಯಿಂದ ಹೊರಬರುತ್ತಿದೆ.
ಅರ್ನಾಬ್ ಗೋಸ್ವಾಮಿ (ಫ್ಯಾನ್ ಖಾತೆ): ಲಾಭ ನಷ್ಟದ ಅಂಕಿ ಅಂಶಕ್ಕಿಂತ ನೋಟು ಅಮಾನ್ಯೀಕರಣ ಜನರ ಮನಸ್ಸನ್ನು ಗೆದ್ದಿದೆ. ಈ ಸಮರದಲ್ಲಿ ಮೋದಿ ಗೆದ್ದಿದ್ದಾರೆ.
ರಾ_ಬೀಸ್: ಪಂಜಾಬ್ ನಲ್ಲಿ ಕ್ಯಾಪ್ಟನ್ ಅರ್ಮಿಂದರ್ ಸಿಂಗ್ ಗೆಲುವಿನ ಪ್ರತಿಕ್ರಿಯೆ: ‘ಪಂಜಾಬಿಗೆ ಆಗಮಿಸಿ ಭಾಷಣ ಮಾಡದೇ ಇದ್ದದಕ್ಕೆ ರಾಹುಲ್ ಗಾಂಧಿ ಅವರಿಗೆ ಧನ್ಯವಾದ.’
ಶ್ರೀ ಬಂಡಿವಾಡೇಕರ್: ಮಾಧ್ಯಮಗಳಿಗೆ ಈ ವಿಷ್ಯ ಸ್ಪಷ್ಟವಾಗಬೇಕು. ನೋಟು ಅಮಾನ್ಯದಿಂದ ಸಮಸ್ಯೆಯಾಗಿರುವುದು ನಿಮಗೆ ಹೊರತು ಜನ ಸಾಮಾನ್ಯರಿಗಲ್ಲ. ದೇಶದ ಅತ್ಯಂತ ಹಿಂದುಳಿದ ರಾಜ್ಯ ಈ ನಿರ್ಧಾರವನ್ನು ಬೆಂಬಲಿಸಿದೆ.
ಪಿಎಚ್ಡಿ ಇನ್ ಬಕ್***: ವಿರಾಟ್ ಕೊಹ್ಲಿ ರನ್ ಹೊಡೆದ ರೀತಿಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯ ಸಾಧಿಸುತ್ತಿದೆ.
ಸರ್ ರವೀಂದ್ರ ಜಡೇಜಾ: 5 ರಾಜ್ಯಗಳ ಫಲಿತಾಂಶ- ದಿನಾಂಕ 11/03/2017. ಎಲ್ಲವನ್ನು ಕೂಡಿದರೆ… 05+11+03+20+17= 56. ಇಂದು 56 ಇಂಚು ಎದೆಯ ಮೋದಿಯ ದಿನವೇ ಸರಿ…
ನಿಖಿಲ್ ಸಪ್ರೆ: ಸದ್ಯ ಪಂಜಾಬಿನಲ್ಲಿ ಕಾಂಗ್ರೆಸ್ ಗೆದ್ದಿತು! ನಮಗೆ ಎಎಪಿ ಮತ್ತೊಂದು ರಾಜ್ಯವನ್ನು ಹಾಳು ಮಾಡುವುದನ್ನು ನೋಡಲಾಗದಿತ್ತು..
ಖುಷಿ ಸಿಂಗ್: ಮೋದಿ ಭಕ್ತರನ್ನು ರಾಹುಲ್ ಗಾಂಧಿ ಅಭಿಮಾನಿಗಳನ್ನು ಒಟ್ಟಿಗೆ ಸೇರಿಸುವ ಸಾಮರ್ಥ್ಯ ಇರುವುದು ಕೇವಲ ಎಎಪಿಗೆ ಮಾತ್ರ. ಇದು ಪಂಜಾಬಿನ ಕಾಂಗ್ರೆಸ್ ಗೆಲುವಿನ ಸಂಭ್ರಮದಲ್ಲಿ ಗೊತ್ತಾಗುತ್ತಿದೆ.