ಉತ್ತರ ಪ್ರದೇಶ- ಉತ್ತರಾಖಂಡದಲ್ಲಿ ಕಮಲದ ಕಂಪು, ಪಂಜಾಬಿನಲ್ಲಿ ಕಾಂಗ್ರೆಸ್ ಮೇಲುಗೈ, ಗೋವಾ- ಮಣಿಪುರದಲ್ಲಿ ದಲ್ಲಿ ತೀವ್ರ ಸ್ಪರ್ಧೆ

ಡಿಜಿಟಲ್ ಕನ್ನಡ ಟೀಮ್:

ದೇಶದ ರಾಜಕೀಯ ಹೃದಯಭಾಗ ಎಂದೇ ಬಿಂಬಿತವಾಗಿರುವ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಹೊಸ ಇತಿಹಾಸವನ್ನು ಬರೆದಿದೆ. ಚುನಾವಣಾ ಸಮೀಕ್ಷೆಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿತ್ತು. ಆದರೆ ಫಲಿತಾಂಶದಲ್ಲಿ ನಿರೀಕ್ಷೆಗೂ ಮೀರಿದ ಭರ್ಜರಿ ಜಯದತ್ತ ಬಿಜೆಪಿ ದಾಪುಗಾಲು ಹಾಕುತ್ತಿದೆ.

ಇನ್ನು ಪಂಜಾಬಿನಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಅಧಿಕಾರಕ್ಕೇರಲು ಸಜ್ಜಾಗಿದೆ. ಆ ಮೂಲಕ ಕ್ಯಾಪ್ಟನ್ ಅಮ್ರಿಂದರ್ ಸಿಂಗ್ ತಮ್ಮ ಹುಟ್ಟುಹಬ್ಬದಂದು ಮತದಾರರಿಂದ ಭರ್ಜರಿ ಉಡುಗೊರೆಯನ್ನು ಪಡೆಯುತ್ತಿದ್ದಾರೆ. ಆ ಮೂಲಕ ಆಮ್ ಆದ್ಮಿ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಉಳಿದಂತೆ ಗೋವಾದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟರೆ, ಉತ್ತರಾಖಂಡದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸುವತ್ತ ಸಾಗಿದೆ. ಮಣಿಪುರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದು, ಕಾಂಗ್ರೆಸ್ ಮುನ್ನಡೆಯಲ್ಲಿದೆ.

ಬೆಳಗ್ಗೆ 10.30ರ ವರೆಗಿನ ಮತ ಏಣಿಕೆಯ ಪ್ರಕಾರ ಯಾವ ಯಾವ ರಾಜ್ಯಗಳಲ್ಲಿ ಯಾರು ಎಷ್ಟು ಮುನ್ನಡೆ ಪಡೆದಿದೆ ಎಂಬುದು ಹೀಗಿದೆ…

ಉತ್ತರ ಪ್ರದೇಶ  399/400

ಬಿಜೆಪಿ   285

ಎಸ್ಪಿ+ಕಾಂಗ್ರೆಸ್  79

ಬಿಎಸ್ಪಿ  19

ಇತರೆ   17

ಉತ್ತರಾಖಂಡ    70/70

ಬಿಜೆಪಿ   55

ಕಾಂಗ್ರೆಸ್         19

ಬಿಎಸ್ಪಿ  01

ಇತರೆ   05

ಪಂಜಾಬ್        117/117

ಅಕಾಲಿ+ಬಿಜೆಪಿ   26

ಕಾಂಗ್ರೆಸ್         64

ಎಎಪಿ   25

ಇತರೆ   02

ಗೋವಾ 20/40

ಬಿಜೆಪಿ   08

ಕಾಂಗ್ರೆಸ್         07

ಎಎಪಿ   00

ಇತರೆ   05

ಮಣಿಪುರ         28/60

ಕಾಂಗ್ರೆಸ್         10

ಬಿಜೆಪಿ   11

ಎನ್ಪಿಎಫ್         02

ಇತರೆ    05

Leave a Reply