ಮಾಮ್ ಮೂಲಕ ಅಭಿಮಾನಿಗಳ ಮುಂದೆ ಮತ್ತೆ ಬರ್ತಿದ್ದಾರೆ ಶ್ರೀದೇವಿ!

ಡಿಜಿಟಲ್ ಕನ್ನಡ ಟೀಮ್:

2012ರಲ್ಲಿ ಇಂಗ್ಲಿಷ್ ವಿಂಗ್ಲಿಷ್ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಎರಡನೇ ಇನಿಂಗ್ಸ್ ಅನ್ನು ಭರ್ಜರಿಯಾಗಿ ಆರಂಭಿಸಿದ್ದ ಖ್ಯಾತ ನಟಿ ಶ್ರೀದೇವಿ, ಈಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಅದೂ ತಮ್ಮ ಬಹು ನಿರೀಕ್ಷೆಯ ‘ಮಾಮ್’ ಚಿತ್ರದ ಮೂಲಕ.

ಹೌದು, ಶ್ರೀದೇವಿ ಅವರ ಅಭಿನಯದ ಮುಂದಿನ ಚಿತ್ರ ಮಾಮ್ ನ ಮೊದಲ ಲುಕ್ ಬಿಡುಗಡೆಯಾಗಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ. ಹೊಸ ನಿರ್ದೇಶಕ ರವಿ ಉದಯ್ ಶ್ರೀದೇವಿ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸದ್ಯ ಬಿಡುಗಡೆಯಾಗಿ ಕುತೂಹಲ ಕೆರಳಿಸಿರುವ ಸಿನಿಮಾ ಪೋಸ್ಟರ್ ನಲ್ಲಿ ಶ್ರೀದೇವಿ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಗೊತ್ತಾಗುತ್ತಿದೆ. ಜತೆಗೆ ಹಲವು ಭಾಷೆಯಲ್ಲಿ ಅಮ್ಮಾ ಎಂದು ಬರೆಯಲಾಗಿದೆ. ಕೆಂಪು ಮತ್ತು ಬಿಳಿ ಬಣ್ಣದಲ್ಲಿ ಚಿತ್ರದ ಹೆಸರು ಬರೆಯಲಾಗಿದ್ದು, ಒಂದು ತಾಯಿಯ ಶಾಂತಿ ಹಾಗೂ ಸಮಸ್ಯೆಗಳನ್ನು ಬಿಂಬಿಸುವಂತಿದೆ.

sridevi-tweet

ಇಂಗ್ಲಿಷ್ ವಿಂಗ್ಲಿಷ್ ಚಿತ್ರದಲ್ಲಿ ಮನೋಜ್ಞ ಅಭಿನಯದ ಮೂಲಕ ಸಖತ್ ಸೌಂಡ್ ಮಾಡಿದ್ದ ಶ್ರೀದೇವಿ ಆನಂತರ ಮೂರು ವರ್ಷಗಳ ಬಳಿಕ ಪುಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಎರಡು ವರ್ಷಗಳ ನಂತರ ಮಾಮ್ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದು ನಿಲ್ಲಲಿದ್ದಾರೆ. ಬೋನಿ ಕಪೂರ್ ನಿರ್ಮಾಣದ ಈ ಚಿತ್ರ ಇದೇ ವರ್ಷ ಜುಲೈ 14 ರಂದು ಬಿಡುಗಡೆಯಾಗಲಿದೆ.

Leave a Reply