ಜಾತಿ ಲೆಕ್ಕಾಚಾರಗಳಿಗೆ ಸಿದ್ದರಾಮಯ್ಯ ಬಜೆಟ್ ತುಡಿದಿರುವ ಬಗೆಯೇನು?

Chief Minister Siddaramaiah presenting 2017-2018 Budget presentation at Assembly in Bengaluru on Wednesday. Ministers Pramod Madwaraj, H.Anjaneya, MLA Dinesh Gundu Rao and others were present on the occasion. 15-03-2017.

ಡಿಜಿಟಲ್ ಕನ್ನಡ ಟೀಮ್:

ಅಹಿಂದ ರಾಜಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬ್ರಾಂಡ್. ಹೀಗಾಗಿ, ಚುನಾವಣಾ ವರ್ಷ ಎದುರಿಗಿರುವಾಗ ಅವರು ಹೆಚ್ಚಾಗಿ ನೆಚ್ಚಿಕೊಂಡಿರುವ ವರ್ಗಗಳಿಗೆ ಏನೆಲ್ಲ ಕೊಡುಗೆ ನೀಡಿದ್ದಾರೆಂಬುದು ಗಮನಿಸಬೇಕಾದ ಸಂಗತಿಯೇ.

– ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿರುವ ಸಣ್ಣಪುಟ್ಟ ಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚನೆ ಘೋಷಣೆ.

– ಜೇನುಕುರುಬ, ಕೊರಗ, ಸೋಲಿಗ, ಕಾಡುಕುರುಬ, ಎರವ, ಗೌಡಲ, ಹಸಲೂರು, ಇರುಳಿಗ, ಸಿದ್ದಿ, ಮಲೆಕುಡಿಯ, ಹಕ್ಕಿಪಿಕ್ಕಿ, ತೋಡ, ಮೇದ, ಇತ್ಯಾದಿ ಆದಿವಾಸಿ ಸಮುದಾಯ ಅಭಿವೃದ್ಧಿಗೆ ಮತ್ತು ಸ್ವಯಂ ಉದ್ಯೋಗ ಕಲ್ಪಿಸಲು 200 ಕೋಟಿ ರೂ. ಅನುದಾನ.

– ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆರ್ಥಿಕ ಅಭಿವೃದ್ಧಿಗಾಗಿ 40 ಸಾವಿರ ರೂ. ಘಟಕ ವೆಚ್ಚದಲ್ಲಿ ನೇರ ಸಾಲ ಯೋಜನೆಯಡಿ 15 ಸಾವಿರ ರೂ. ಸಹಾಯಧನ, ಶೇಕಡ 4 ರ ಬಡ್ಡಿ ದರದಲ್ಲಿ 25 ಸಾವಿರ ರೂ ಸಾಲವನ್ನು ಎಮ್ಮೆ-ಹಸು, ಕುರಿ-ಮೇಕೆ, ಇವುಗಳನ್ನು ವಿತರಿಸಲು 300 ಕೋಟಿ ರೂ. ತೆಗೆದಿಟ್ಟಿದ್ದಾರೆ.

ಇದೇ ವರ್ಗಕ್ಕೆ ಸೇರಿದ ಎರಡು ಲಕ್ಷ ಬಿಪಿಎಲ್ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲು ನೂರು ಕೋಟಿ ರೂ. ನೀಡಿದ್ದಾರೆ.

– ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಮೂಲ ಸೌಲಭ್ಯ ಒದಗಿಸಲು 800 ಕೋಟಿ ರೂ. 500 ಫಲಾನುಭವಿಗಳಿಗೆ ಟ್ಯಾಕ್ಸಿ ಖರೀದಿಸಲು ತಲಾ ಮೂರು ಲಕ್ಷ ರೂ. ಸಹಾಯಧನ.

–  ಮೊದಲ ಪ್ರಯತ್ನದಲ್ಲೇ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹಧನದಲ್ಲಿ ಹೆಚ್ಚಳ. 200 ರೂ. ಬದಲಾಗಿ ಒಂದು ಸಾವಿರ, 300 ರೂ. ಪಡೆಯುತ್ತಿದ್ದವರಿಗೆ 1500 ರೂ. 400 ರೂ. ರಿಂದ 2000  ರೂ., 500 ರೂ.ನಿಂದ 3000 ರೂ.ಗೆ ಹೆಚ್ಚಳ.

– ಹಾಸ್ಟೆಲ್ ವಿದ್ಯಾರ್ಥಿಗಳ ಪುಸ್ತಕ ಮತ್ತು ಲೇಖನಾ ಸಾಮಗ್ರಿಗಳು, ಕ್ಷೌರ ಹಾಗೂ ಸಮವಸ್ತ್ರ ವೆಚ್ಚವನ್ನು 200 ರೂ.ನಿಂದ 400 ರೂ.ಗೆ, 150 ರಿಂದ 300 ರೂ.ಗೆ, ಹಾಗೂ 499 ರಿಂದ 1000 ರೂ.ಗಳಿಗೆ ಹೆಚ್ಚಿಸಲಾಗಿದೆ.

– ಸರ್ಕಾರಿ ವಸತಿ ಹಾಗೂ ಆಶ್ರಮ ಶಾಲೆಗಳ ಆಹಾರ ಭತ್ಯೆಯನ್ನು ಪ್ರತಿ ವಿದ್ಯಾರ್ಥಿಗೆ ಮಾಸಿಕ ನೂರು ರೂ. ಹೆಚ್ಚಿಸಲಾಗಿದೆ.

– ವಾಹನ ಚಾಲನಾ ಪರವಾನಿಗೆಯನ್ನು ಹೊಂದಿರುವ ಒಂದು ಸಾವಿರ ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಕರಿಗೆ ಟೂರಿಸ್ಟ್ ಟ್ಯಾಕ್ಸಿ ಖರೀದಿಸಲು ಮೂರು ಲಕ್ಷ ರೂ.ಗಳವರೆಗೆ ಇಲ್ಲವೆ ಶೇಕಡ 50 ರಷ್ಟು ಇವುಗಳಲ್ಲಿ ಯಾವುದು ಕಡಿಮೆಯೂ ಅಷ್ಟು ಸಹಾಯಧನ.

– ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರೂ. ಆರ್ಥಿಕ ನೆರವು.

– ಸಾರಾಯಿ ಮಾರಾಟ ನಿಷೇಧದಿಂದ ಉದ್ಯೋಗ ಕಳೆದುಕೊಂಡಿರುವ ಸಾರಾಯಿ ವೆಂಡರ್, ಮೂರ್ತೇದಾರ್, ಈಡಿಗ ಇತ್ಯಾದಿ ಸಮುದಾಯಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು. – ಉಪ್ಪಾರ ಮತ್ತು ಇದರ ಉಪಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ.

– ಭೇಸ್ತ, ಕಬ್ಬಲಿಗ, ಕೋಲಿ, ಗಂಗಾಮತ, ಮೋಗವೀರ ಮತ್ತು ಇವುಗಳ ಉಪಜಾತಿಗಳ ಸಮಗ್ರ ಅಭಿವೃದ್ಧಿಗೆ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪನೆ.

– ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ ಮೂರು ಕೋಟಿ ರೂ. 100 ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಸಂಗ ವೇತನ ಮಂಜೂರು.

Leave a Reply