ಬಡವರಿಗೆಲ್ಲ ಭಾಗ್ಯಗಳ ಮಳೆ ಹರಿಸಿದ್ದೇವೆನ್ನುವ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಅಳಲಿಗೆ ಮಿಡಿಯದೇ?

ಡಿಜಿಟಲ್ ಕನ್ನಡ ಟೀಮ್:

ಸಹಾಯ ಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಮೂರು ದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಡೆಸುತ್ತಿರುವ ಪ್ರತಿಭಟನೆ ನಿಧಾನಕ್ಕೆ ಸಾರ್ವಜನಿಕರ ಗಮನವನ್ನು ಸೆಳೆದುಕೊಳ್ಳುತ್ತಿದೆ.

ನಿನ್ನೆ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಜತೆ ಮುಖ್ಯಮಂತ್ರಿಗಳು ನಡೆಸಿದ ಮಾತುಕತೆ ವಿಫಲವಾಗಿತ್ತು. ಹಗಲಿನಲ್ಲಿ ಬಿರು ಬೇಸಿಗೆಯ ಬಿಸಿಲಲ್ಲಿ ರಸ್ತೆಯ ಮಧ್ಯೆ ಪ್ರತಿಭಟನೆ ಹಾಗೂ ರಾತ್ರಿ ರಸ್ತೆಯಲ್ಲೇ ಮಲಗುವ ಮೂಲಕ ಈ ಮಹಿಳೆಯರು ತಮ್ಮ ಬೇಡಿಕೆ ಈಡೇರುವವರೆಗೂ ನಮ್ಮ ಹೆಜ್ಜೆ ಹಿಂದಿಡುವುದಿಲ್ಲ ಎಂದು ದೃಢ ನಿರ್ಧಾರಕ್ಕೆ ಬಂದಿದ್ದಾರೆ. ಇವರ ಈ ಪ್ರತಿಭಟನೆ ಈಗ ಜನರ ಮನಕಲುಕುತ್ತಿದೆ. ಹಲವರು ಅಸ್ವಸ್ಥಗೊಂಡರೂ ಪ್ರತಿಭಟನಾ ಸ್ಥಳದಿಂದ ತೆರಳಲು ಒಪ್ಪುತ್ತಿಲ್ಲ. ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಚರ್ಚೆಯಾಗುತ್ತಿದ್ದು, ಹಲವರು ಈ ಮಹಿಳೆಯರಿಗೆ ನೀರು, ಬಿಸ್ಕೆಟ್, ತಂಪುಪಾನೀಯಗಳನ್ನು ನೀಡುತ್ತಾ ಇತರರಿಗೂ ಈ ಬಗ್ಗೆ ಉತ್ತೇಜಿಸುತ್ತಾ ಈ ಮಹಿಳೆಯರ ಪ್ರತಿಭಟನೆಗೆ ಸಾಥ್ ನೀಡುವಂತೆ ಚರ್ಚೆಯಾಗುತ್ತಿದೆ.

ಇನ್ನು ರಾಜ್ಯದ ಜನರಿಗೆ ಹಲವಾರು ಭಾಗ್ಯಗಳನ್ನು ಕರುಣಿಸುವ ಹಾಗೂ ಮಾಂಸದಂಗಡಿಗಳಿಗೆ ಲಕ್ಷಾತಂರ ಸಹಾಯಧನ ನೀಡುವ ರಾಜ್ಯ ಸರ್ಕಾರಕ್ಕೆ ಈ ಮಹಿಳೆಯರ ಸಹಾಯ ಧನ ಹೆಚ್ಚಳಕ್ಕೆ ಮಾತ್ರ ಸಾಧ್ಯವಾಗುತ್ತಿಲ್ಲಾ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಸೋಮವಾರದಿಂದ ಆರಂಭವಾಗಿರುವ ಈ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಧರಣಿ ಬುಧವಾರವೂ ಮುಂದುವರಿದಿದ್ದು, ಇವರ ಪ್ರತಿಭಟನೆಯ ಪರಿಸ್ಥಿತಿಯನ್ನು ಈ ಚಿತ್ರಗಳು ವಿವರಿಸುತ್ತವೆ…

anganawadi-6

mar_0123-min

mar_0100-min

anganwadi-6

anganwadi

Leave a Reply