ದಕ್ಷ ಅಧಿಕಾರಿ ಚಂದ್ರಕಲಾರಿಗೆ ಸ್ವಚ್ಛ ಭಾರತದ ಜವಾಬ್ದಾರಿ ಕೊಟ್ಟ ಮೋದಿ

ಡಿಜಿಟಲ್ ಕನ್ನಡ ಟೀಮ್:

ಭಾರತದ ದಕ್ಷ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿ ಹೆಸರು ಮಾಡಿರುವ ಮೀರತ್ ನ ಬಿ.ಚಂದ್ರಕಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಕನಸಿನ ಸ್ವಚ್ಛ ಭಾರತ ಯೋಜನೆಯ ತಂಡಕ್ಕೆ ಸೇರಿಸಿಕೊಂಡಿದ್ದಾರೆ.

2008ರ ಉತ್ತರ ಪ್ರದೇಶ ವಿಭಾಗದಿಂದ ಐಎಎಸ್ ಆಗಿರುವ ಚಂದ್ರಕಲಾ ಅವರು ತಮ್ಮ ದಕ್ಷ ಆಡಳಿತದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದ್ದಾರೆ. 2014ರಲ್ಲಿ ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿ ವಿರುದ್ಧ ಸರ್ಕಾರಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದು, ಬುಲ್ಲಂದಶರ್, ಬಿಜ್ನೋರ್ ಹಾಗೂ ಮೀರತ್ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ‘ಕ್ಲೀನ್ ಇಂಡಿಯಾ’ ಎಂಬ ಅಭಿಯಾನವನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಇವರ ಪರಿಶ್ರಮದ ಫಲವಾಗಿ ಬಿಜ್ನೇರ್ ಜಿಲ್ಲೆ ಬಯಲು ಶೌಚ ಮುಕ್ತ ಜಿಲ್ಲೆ ಎಂದು ಕೇಂದ್ರದಿಂದ ಮಾನ್ಯತೆ ಪಡೆದಿದೆ. ಇದು ಇವರ ದಕ್ಷ ಆಡಳಿತದ ಉದಾಹರಣೆಗಳು. ಇವರ ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಈಗ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉತ್ತಮ ಪ್ರೋತ್ಸಾಹ ಸಿಕ್ಕಿದೆ.

ಮೋದಿ ಅವರು ಚಂದ್ರಕಲಾ ಅವರನ್ನು ಸ್ವಚ್ಛಭಾರತ ಅಭಿಯಾನದ ನಿರ್ದೇಶಕಿಯನ್ನಾಗಿ ನೇಮಿಸುವುದರ ಜತೆಗೆ ಕುಡಿಯುವ ನೀರು ಹಾಗೂ ಚರಂಡಿ ಸಚಿವಾಲಯದ ಉಪಕಾರ್ಯದರ್ಶಿ ಸ್ಥಾನಕ್ಕೆ ಬಡ್ತಿ ನೀಡಿದ್ದಾರೆ.

Leave a Reply