ನಮ್ಮ ಕ್ಯಾಂಟೀನ್ ಈಗ ಇಂದಿರಾ ಕ್ಯಾಂಟೀನ್ ಆಗೋದು ಪಕ್ಕಾ

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರಿನ ಪ್ರತಿ ವಾರ್ಡುಗಳಲ್ಲೂ ಆರಂಭವಾಗಲಿರುವ ‘ನಮ್ಮ ಕ್ಯಾಂಟೀನ್’ ಅನ್ನು ಶೀಘ್ರದಲ್ಲೇ ‘ಇಂದಿರಾ ಕ್ಯಾಂಟೀನ್’ ಆಗಲಿದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಉತ್ತರಿಸುವ ಸಂದರ್ಭದಲ್ಲಿ ಈ ವಿಷಯ ತಿಳಿಸಿದ ಅವರು, ಹೇಳಿದಿಷ್ಟು…

‘ನಗರದ ನೂರಾ ತೊಂಬಂತ್ತೆಂಟು ವಾರ್ಡುಗಳಲ್ಲೂ ತಲಾ ಒಂದರಂತೆ ಸ್ಥಾಪಿಸಲು ನಿರ್ಧರಿಸಲಾಗಿದ್ದ ನಮ್ಮ ಕ್ಯಾಂಟೀನ್ ಗೆ ಇಂದಿರಾ ಕ್ಯಾಂಟೀನ್ ಎಂದು ಹೆಸರಿಡುವಂತೆ ನಮ್ಮ ಪಕ್ಷದ ಶಾಸಕಾಂಗ ಸಭೆಯಲ್ಲಿ ಪ್ರಸ್ತಾಪವಾಗಿದೆ. ಹೀಗಾಗಿ ನಮ್ಮ ಕ್ಯಾಂಟೀನ್ ಸದ್ಯದಲ್ಲೇ ಇಂದಿರಾ ಕ್ಯಾಂಟೀನ್ ಆಗಿ ಪರಿವರ್ತನೆಯಾಗಲಿದೆ. ಆ ಮೂಲಕ ರಾಜಧಾನಿಗೆ ಬಂದು ಹೋಗುವವರು ಸೇರಿದಂತೆ ಎಲ್ಲ ಬಡವರಿಗೆ ಅನುಕೂಲವಾಗಲಿದೆ. ಪ್ರಸ್ತುತ ಪ್ರತಿನಿತ್ಯ ಬೆಂಗಳೂರಿಗೆ 20 ಲಕ್ಷದಷ್ಟು ಜನ ಬಂದು ಹೋಗುತ್ತಾರೆ. ಅವರಿಗೆ ರಿಯಾಯ್ತಿ ದರದಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟ ಒದಗಿಸುವುದು ನಮ್ಮ ಉದ್ದೇಶ.’

Leave a Reply