ನಾಗರಿಕರನ್ನೊಳಗೊಂಡ ಪೊಲೀಸ್ ಗಸ್ತು ಯೋಜನೆ

ಡಿಜಿಟಲ್ ಕನ್ನಡ ಟೀಮ್:

ಜನಸ್ನೇಹಿಯಾಗುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಇಲಾಖೆಯ ‘ಗಸ್ತು ವ್ಯವಸ್ಥೆ’ ಯನ್ನು `ಸುಧಾರಿತ ಗಸ್ತು ವ್ಯವಸ್ಥೆ’ಯಾಗಿ ಮರು ರೂಪಿಸಲಾಗಿದೆ.

ಪ್ರತಿ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಮತ್ತು ಮುಖ್ಯ ಕಾನ್ಸ್ಟೆಬಲ್ ಗಳ ಒಟ್ಟು ಸಂಖ್ಯೆಗೆ ಸರಿಸಮವಾಗಿ ಠಾಣಾ ವ್ಯಾಪ್ತಿ ವಿಭಜಿಸಿ, ಪ್ರತಿ ಪ್ರದೇಶವನ್ನು `ಬೀಟ್’ ಎಂದು ಪರಿಗಣಿಸಲಾಗಿದೆ. ಆಯಾ ಠಾಣೆಯ ಕಾನ್ಸ್ಟೆಬಲ್ ಅಥವಾ ಮುಖ್ಯ ಕಾನ್ಸ್ಟೆಬಲ್ ಗೆ ಬೀಟ್‍ನ ಹೊಣೆಗಾರಿಕೆ ನೀಡಲಾಗಿದ್ದು, ಬೀಟ್‍ನ ಎಲ್ಲಾ ಪೊಲೀಸ್ ಕರ್ತವ್ಯಾಧಿಕಾರಿಗಳನ್ನು ಅವರಿಗೇ ನೀಡಲಾಗಿದೆ.

ಬೀಟ್ ವ್ಯಾಪ್ತಿಯ ಗ್ರಾಮಗಳು ಅಥವಾ ಪ್ರದೇಶಗಳಲ್ಲಿ ಎಲ್ಲಾ ಧರ್ಮ, ಜಾತಿಯ ಸೂಕ್ತ  ವಯೋಮಾನದ ಸ್ತ್ರೀ-ಪುರುಷರನ್ನು `ನಾಗರಿಕ ಸದಸ್ಯ’ರನ್ನಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.

ಬೀಟ್‍ನ ಸಿಬ್ಬಂದಿಗಳು ನಾಗರಿಕ ಸದಸ್ಯರೊಡನೆ ಸತತ ಸಂಪರ್ಕದಲ್ಲಿದ್ದು, ಬೀಟ್ ಪ್ರದೇಶಗಳ ಆಗುಹೋಗುಗಳ ಬಗ್ಗೆ ಮಾಹಿತಿ ಪಡೆದು ಕಾರ್ಯೋನ್ಮುಖರಾಗುವ ಅವಕಾಶ ಮಾಡಿಕೊಡಲಾಗಿದೆ.

Leave a Reply