ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತಾಳ ರೋಡೀಸ್ ರಿಸಲ್ಟ್ ಏನಾಯ್ತು?

ಡಿಜಿಟಲ್ ಕನ್ನಡ ಟೀಮ್:

ಆರ್ಯ !

ಕಿರಿಕ್ ಪಾರ್ಟಿ ಸಿನಿಮಾ ನೋಡಿದವರಾರೂ ಈ ಪಾತ್ರ ಮರೆತಿರಲ್ಲ. ಪ್ರತಿಯೊಂದು ಕಾಲೇಜಲ್ಲಿರಬಹುದಾದ ಟಾಮ್ ಬಾಯಿಶ್ ಹುಡ್ಗಿಯಾಗಿ ಮನಸ್ಸು ಕದ್ದವರು ಸಂಯುಕ್ತಾ ಹೆಗ್ಡೆ.

ಸಿನಿಮಾ ಹಿಟ್ ಆಗುತ್ತಿದ್ದಂತೆಯೇ ಆಫರ್’ಗಳ ಸುರಿಮಳೆಯಾಯಿತು. ಆದರೆ ಸಂಯುಕ್ತ ಸ್ವಲ್ಪ ಡಿಫರೆಂಟು.

ಮೂಲತಃ ಡಾನ್ಸರ್ ಆಗಿರುವ ಈಕೆಗೆ ಟ್ರಾವೆಲಿಂಗ್ ಅಂದ್ರೆ ಪ್ರಾಣ. ಈ ಮಧ್ಯೆ ಯಾವುದಾದರೊಂದು ಸಿನಿಮಾ ಒಪ್ಪಿಕೊಂಡು ಕನ್ನಡದ ಪ್ರೇಕ್ಷಕನನ್ನು ಖುಷಿಪಡಿಸುತ್ತಾರೆ ಅಂದುಕೊಂಡರೆ ಸಂಯುಕ್ತಾ ಮಾತ್ರ ಎಂಟಿವಿಯ ರೋಡೀಸ್ ರಿಯಾಲಿಟಿ ಶೋ ಕಡೆಗೆ ಮುಖ ಮಾಡಿದ್ದರು. ಅದು ಅವರ ಹತ್ತುವರುಷಗಳ ಕನಸಾಗಿತ್ತಂತೆ.

ರೋಡೀಸ್ ಮುಗೀತು…ರಿಸಲ್ಟ್ ಹೇಳಂಗಿಲ್ಲ

ರೋಡೀಸ್ ರಿಯಾಲಿಟಿ ಷೋನ ಇಂಡಿಯನ್ ಹೊಸ ವರ್ಷನ್  ಒಂದು ತಿಂಗಳು ಪೂರೈಸಿದೆ. ಇಂದು ಸಂಯುಕ್ತಾ ರೋಡೀಸ್ ನಿಂದ ಹೊರ ಬಂದಿದ್ದಾರೆ. ಹಾಗಂತ ಎಲಿಮಿನೇಟ್ ಆಗಿದ್ದಾರೆ ಅಂದುಕೊಳ್ಳಬೇಡಿ. ರೋಡೀಸ್ ಶೂಟಿಂಗ್ ಮುಗಿದಿದೆ. ಫೈನಲ್ ಶೂಟಿಂಗ್ ಕೂಡ ಮುಗಿದುಹೋಗಿದೆ. ಏನಾಯಿತು ಅಂತ ಕೇಳಿದರೆ ಏನಾಗಿದೆ  ಅಂತ ನಿಜ ಹೇಳಲು ಟಿವಿ ಕಾಂಟ್ರಾಕ್ಟ್ ಚಿನಕುರಳಿಯಂಥಾ ಸಂಯುಕ್ತಾ ಬಾಯಿಗೆ ಬೀಗ ಹಾಕಿದೆ. ಹಾಗಾಗಿ ಟಿವಿಯಲ್ಲಿ ಟೆಲಿಕಾಸ್ಟ್ ಆಗುವವರೆಗೂ ಸಂಯುಕ್ತಾ ರಿಸಲ್ಟ್ ಏನು ಅಂತ ಹೇಳಲ್ಲ.

ರಿಸಲ್ಟ್ ಏನೇ ಬರಲಿ ಅಮೇರಿಕ ಮೂಲದ ರಿಯಾಲಿಟಿ  ಶೋ  ರೋಡೀಸ್ ನಲ್ಲಿ ಕಡೆಯವರೆಗೆ ಇರುವುದೇ ಒಂದು ಸಾಹಸ-ಸಾಧನೆ.

Leave a Reply