ಕಾವೇರಿ ನೀರು: ತಮಿಳುನಾಡು ಕೋರಿಕೆಗೆ ರಾಜ್ಯದ ನಕಾರ

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಿಗೆ ನೀರು ಬಿಡುವಂತೆ ಕೋರಿಕೊಳ್ಳುವುದಕ್ಕೆ ಆ ರಾಜ್ಯದ ನಿಯೋಗವಿಂದು ಕರ್ನಾಟಕಕ್ಕೆ ಭೇಟಿ ನೀಡಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟ ಪಡಿಸಿದೆ.

ತಮಿಳುನಾಡಿನ ಲೋಕೋಪಯೋಗಿ ಇಲಾಖೆಯ ಪ್ರದಾನ ಕಾರ್ಯದರ್ಶಿ ಎಸ್.ಕೆ. ಪ್ರಭಾಕರ್, ಅಲ್ಲಿನ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಶಿವದಾಸ್ ಮೀನ, ಪೌರಾಡಳಿತ ಮತ್ತು ನೀರು ಸರಬರಾಜು ವ್ಯವಸ್ಥೆ ಕಾರ್ಯದರ್ಶಿ ಪಣೀಂದ್ರ ರೆಡ್ಡಿ ಹಾಗೂ ಕಾವೇರಿ ತಾಂತ್ರಿಕ ಘಟಕದ ಅಧ್ಯಕ್ಷ ಆರ್. ಸುಬ್ರಮಣ್ಯನ್ ಇಂದು ಮಧ್ಯಾಹ್ನ ವಿಧಾನಸೌಧದಲ್ಲಿ ರಾಜ್ಯದ ಮುಖ್ಯಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳ ತಂಡವನ್ನು ಭೇಟಿ ಮಾಡಿ ಮೂರು ಟಿಎಂಸಿ ನೀರು ಬಿಡುವಂತೆ ವಿನಂತಿಸಿಕೊಂಡಿತು.

ಕರ್ನಾಟಕ ಸರ್ಕಾರದ ಅಧಿಕಾರಿಗಳು ತಮಿಳುನಾಡು ಪರಿಸ್ಥಿತಿಯ ಬಗ್ಗೆ ಅನುಕಂಪ ವ್ಯಕ್ತಪಡಿಸಿ, ‘ನಮ್ಮ ಸ್ಥಿತಿಯೂ ನಿಮಗಿಂತ ಭಿನ್ನವಾಗಿಲ್ಲ. ಕಳೆದ ಮೂರು ವರ್ಷಗಳಿಂದ ಕರ್ನಾಟಕ ಮಳೆ ಇಲ್ಲದೆ, ಬರ ಪರಿಸ್ಥಿತಿ ಎದುರಿಸಿದೆ, ಸತತವಾಗಿ 150ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆಮಾಡಿದ್ದೇವೆ.’ ಎಂಬಿತ್ಯಾದಿ ಅಂಶಗಳನ್ನು ವಿವರಿಸಿದರು.

Leave a Reply