ಲಾರಿ ಮುಷ್ಕರ: ಬೀದಿಗಿಳಿಯದ ವಾಹನಗಳೆಷ್ಟು, ಪರಿಣಾಮವೇನು?

ಡಿಜಿಟಲ್ ಕನ್ನಡ ಟೀಮ್

ವಿಮಾ ಪ್ರೀಮಿಯಂ ದರ ಹೆಚ್ಚಳ ಹಾಗೂ ರಾಜ್ಯ ಹೆದ್ದಾರಿಗಳಿಗೆ ಟೋಲ್ ವಿಧಿಸಿರುವುದನ್ನು ವಿರೋಧಿಸಿ ತಮಿಳುನಾಡು, ಪಾಂಡಿಚೇರಿ, ಆಂಧ್ರ ಪ್ರದೇಶ ಸೇರಿದಂತೆ ದಕ್ಷಿಣ ಭಾರತ ರಾಜ್ಯಗಳ ಲಾರಿ ಮಾಲೀಕರ ಸಂಘಗಳು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆಕೊಟ್ಟ ಹಿನ್ನೆಲೆಯಲ್ಲಿ ಸರಕು ಸಾಗಾಣಿಕೆಯಲ್ಲಿ ವ್ಯತ್ಯಯವಾಗಿದೆ.

ಕರ್ನಾಟಕ ರಾಜ್ಯದ 7 ಲಕ್ಷ ವಾಹನಗಳು ಸೇರಿ ದಕ್ಷಿಣ ಭಾರತದ ರಾಜ್ಯಗಳ 26 ಲಕ್ಷ ಸರಕು-ಸಾಗಾಣಿಕೆ ವಾಹನಗಳು ರಸ್ತೆಗಿಳಿಯಲಿಲ್ಲ.

‘ವಿಮಾ ಪ್ರೀಮಿಯಂ ಮೊತ್ತವನ್ನು ದಿಢೀರ್ ಎಂದು ಒಂದೂವರೆ ಪಟ್ಟು ಹೆಚ್ಚಳ ಮಾಡಿರುವುದರಿಂದ ಲಾರಿ ಮಾಲೀಕರಿಗೆ ತೀವ್ರ ಅನ್ಯಾಯವಾಗುತ್ತಿದೆ. ಹೊಸ ನೀತಿಯ ಪ್ರಕಾರ, 20 ಸಾವಿರವಿದ್ದ ವಿಮೆ ಪ್ರೀಮಿಯಂ ಅನ್ನು 50 ಸಾವಿರ ಪಾವತಿಸಬೇಕಿದೆ. ಖಾಸಗಿ ವಿಮಾ ಕಂಪೆನಿಗಳ ಲಾಭಕ್ಕೋಸ್ಕರ ಲಾರಿ ಮಾಲೀಕರನ್ನು ಸುಲಿಗೆ ಮಾಡುವ ಕ್ರಮ ಇದಾಗಿದೆ. ಕೇಂದ್ರ ಸರ್ಕಾರ ಕೂಡಲೇ ಇದನ್ನು   ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಮುಷ್ಕರ ಮುಂದುವರೆಯಲಿದೆ’ ಎಂದಿದ್ದಾರೆ ದಕ್ಷಿಣ ಭಾರತ ಲಾರಿ ಮಾಲೀಕರ ಚಾಲಕರ ಸಂಘಗಳ ಒಕ್ಕೂಟದ ಮುಖ್ಯಸ್ಥ ಷಣ್ಮುಗಪ್ಪ.

Leave a Reply