ಉಪಚುನಾವಣೆ ಬಗ್ಗೆ ಎಸ್.ಎಂ ಕೃಷ್ಣ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಯು ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಕ್ಕಾಗಲಿ ಅಥವಾ ಯಾವುದೇ ರಾಜಕೀಯ ಪಕ್ಷಕ್ಕಾಗಲಿ ದಿಕ್ಸೂಚಿಯಾಗುವುದಿಲ್ಲ ಎಂಬುದು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಭಿಪ್ರಾಯ.

ಉಪಚುನಾವಣೆಯ ಪ್ರಚಾರಕ್ಕಾಗಿ ನಂಜನಗೂಡಿಗೆ ತೆರಳುವಾಗ ಮಾತನಾಡಿದ ಕೃಷ್ಣ ಅವರು, ‘ಯಾವುದೇ ಉಪಚುನಾವಣೆ ಸರ್ಕಾರಕ್ಕೆ ದಿಕ್ಸೂಚಿಯಾಗುವುದಿಲ್ಲ. ಇದೊಂದು ಸಾಮಾನ್ಯ ಪ್ರಕ್ರಿಯೆ. ಸರ್ಕಾರದ ಸಾಧನೆಗಳಿಗೆ ಜನರ ಸ್ಪಂದನೆ ಹೇಗಿದೆ ಎಂಬುದನ್ನು ಅರಿಯಲು ಸಹಾಯವಾಗುತ್ತದೆ. ಉಪಚುನಾವಣೆಗಳಲ್ಲಿ ಸೋತಿರುವಾಗಲೂ ಮಹಾಚುನಾವಣೆಗಳಲ್ಲಿ ಗೆದ್ದಿರುವ ಸಾಕಷ್ಟು ನಿದರ್ಶನಗಳಿವೆ. ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಚುನಾವಣೆ 2018ರ ವಿಧಾನಸಭೆ ಚುನಾವಣೆಗೆ ಮತದಾರನ ನಾಡಿ ಮಿಡಿತ ಅರಿಯಲು ಸಹಾಯವಾಗುತ್ತದೆ. ನಾನು ಯಾವುದೇ ಸ್ಥಾನಮಾನ ಇಟ್ಟುಕೊಂಡು ಬಿಜೆಪಿ ಸೇರಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮೆಚ್ಚಿ ಸೇರ್ಪಡೆಯಾಗಿದ್ದೇನೆ. ಇಂದು ಬಿಜೆಪಿ ಶಕ್ತಿಶಾಲಿ ರಾಷ್ಟ್ರೀಯ ಪಕ್ಷವಾಗಿದೆ. ಇಂದು ನಂಜನಗೂಡಿನಲ್ಲಿ, ನಾಳೆ ಗುಂಡ್ಲುಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತೇವೆ. ಪಕ್ಷದ ಮುಖಂಡರು ಎಲ್ಲೆಲ್ಲಿ ಪ್ರಚಾರ ನಡೆಸಬೇಕೆಂದು ಸೂಚಿಸುತ್ತಾರೊ ಅಂತಹ ಕಡೆ ಪ್ರಚಾರ ಮಾಡುತ್ತೇನೆ.’

Leave a Reply