ದಲೈ ಲಾಮಾ ಅರುಣಾಚಲ ಭೇಟಿಗೆ ಚೀನಾ ಆಕ್ಷೇಪ, ಭಾರತದ ಖಡಕ್ ಪ್ರತಿಕ್ರಿಯೆ

ಡಿಜಿಟಲ್ ಕನ್ನಡ ಟೀಮ್:

ಬೌದ್ಧ ಗುರು ದಲೈ ಲಾಮಾ ಇಂದು ಅರುಣಾಚಲಪ್ರದೇಶದ ತವಾಂಗ್ ಪ್ರದೇಶಕ್ಕೆ ಭೇಟಿ ನೀಡಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದ ಪರಿಣಾಮ ತವಾಂಗ್ ಬೌದ್ಧ ಕೇಂದ್ರಕ್ಕೆ ಅವರ ಭೇಟಿ ವಿಳಂಬವಾಗಿದೆ.

ಇದೇನೂ ಲಾಮಾ ಪ್ರಥಮ ಭೇಟಿಯೇನಲ್ಲ. ಆದರೆ ಪ್ರತಿಬಾರಿ ತವಾಂಗ್ ಗೆ ಭೇಟಿ ನೀಡುವಾಗಲೂ ಚೀನಾ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತದೆ. ಈ ಬಾರಿಯೂ ಅಪಸ್ವರ ಬಂದಿದ್ದಕ್ಕೆ ಪ್ರತಿಯಾಗಿ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಕಿರಿಣ್ ರಿಜಿಜು ಖಡಕ್ ಉತ್ತರ ಕೊಟ್ಟಿದ್ದಾರೆ.

‘ಭಾರತದ ಅಭಿನ್ನ ಅಂಗವಾಗಿರುವ ತವಾಂಗಿಗೆ ದಲೈ ಲಾಮಾ ಭೇಟಿ ನಿಯಂತ್ರಿಸುವುದು ಸಾಧ್ಯವಿಲ್ಲ. ಭಾರತದ ಆಂತರಿಕ ವ್ಯವಹಾರಗಳ ಬಗ್ಗೆ ಚೀನಾ ಮಾತನಾಡುವ ಅಗತ್ಯ ಇಲ್ಲ. ಅಲ್ಲದೇ ಇದೊಂದು ಧಾರ್ಮಿಕ ಭೇಟಿಯಾಗಿದ್ದು, ರಾಜಕೀಯವಾಗಿ ಚರ್ಚಿಸುವ ಅಗತ್ಯವೂ ಇಲ್ಲ’ ಎಂದಿದ್ದಾರೆ.

ದಲೈ ಲಾಮಾ ಸುದ್ದಿಯಲ್ಲಿರುವಷ್ಟು ದಿನವೂ ತಾನು ಆಕ್ರಮಿಸಿರುವ ಟಿಬೆಟ್ ಸ್ವಾತಂತ್ರ್ಯಕ್ಕೆ ಧ್ವನಿಗಳೇಳುತ್ತಲೇ ಇರುತ್ತವೆ ಎಂಬುದು ಚೀನಾದ ಆತಂಕ.

Leave a Reply