ಬಿಜೆಪಿ ನಾಯಕ ಶಿವಪ್ಪಗೆ ಹೃದಯಾಘಾತ, ಆರೋಗ್ಯ ವಿಚಾರಿಸಲು ಬಾರದ ಪಕ್ಷದ ನಾಯಕರ ಬಗ್ಗೆ ಬೇಸರ

334

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿಯ ಹಿರಿಯ ಮುಖಂಡ ಬಿಬಿ ಶಿವಪ್ಪ ಹೃದಯಘಾತಕ್ಕೆ ಒಳಗಾಗಿದ್ದಾರೆ. ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬಿಜೆಪಿಯನ್ನು ಕಟ್ಟಿ ಬೆಳೆಸಿದ ನನಗೆ ಆರೋಗ್ಯ ಹದಗೆಟ್ಟಿರುವ ಸಂದರ್ಭದಲ್ಲಿ ಪಕ್ಷದ ಯಾವೊಬ್ಬ ನಾಯಕರು ತಮ್ಮ ಯೋಗಕ್ಷೇಮ ವಿಚಾರಿಸಲು ಬಂದಿಲ್ಲ ಎಂದು ಆಪ್ತರೊಂದಿಗೆ ಅಳಲು ತೊಡಿಕೊಂಡಿದ್ದಾರೆ. ಬೇರೆ ಪಕ್ಷಗಳಲ್ಲಿನ ಸ್ನೇಹಿತರು, ಹಿತೈಶಿಗಳು ಆಸ್ಪತ್ರೆಗೆ ಬಂದು ತಮ್ಮ ಆರೋಗ್ಯ ಹೇಗಿದೆ ಎಂದು ವಿಚಾರಿಸುತ್ತಿದ್ದಾರೆ. ಶೀಘ್ರ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ. ಅವರಿಗೆ ನಾನು ಋಣಿಯಾಗಿರುತ್ತೇನೆ. ಆದರೆ ನಮ್ಮ ಪಕ್ಷದ ನಾಯಕರು ನನ್ನ ಕಷ್ಟ ಕಾಲದಲ್ಲಿ ನನ್ನ ಬಳಿ ಇಲ್ಲ ಎಂದು ಹೇಳಿಕೊಂಡಿರುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ.

Leave a Reply