ಶ್ರೀರಾಮನವಮಿ, ಐಪಿಎಲ್ ಟಿಕೆಟ್ ಮಾರಾಟ, ಜಾನಪದ ಕ್ರೀಡಾ ಉತ್ಸವ… ನೀವು ನೋಡಬೇಕಿರುವ ಇಂದಿನ ಸುದ್ದಿ ಚಿತ್ರಪಟಗಳು…

ಡಿಜಿಟಲ್ ಕನ್ನಡ ಟೀಮ್:

ಶ್ರೀರಾಮನವಮಿ ಹಬ್ಬವನ್ನು ಬೆಂಗಳೂರಿನ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ಬಿರು ಬೇಸಿಗೆಯಲ್ಲಿ ಪಾನಕ, ನೀರು ಮಜ್ಜಿಗೆ, ಹೆಸರು ಬೇಳೆ ಕೊಸಂಬರಿಗಳನ್ನು ಜನರಿಗೆ ಹಂಚಲಾಯಿತು. ಇವುಗಳ ಜತೆಗೆ ದೇವಸ್ಥಾನಗಳಲ್ಲಿ ಪೂಜೆ, ಮೆಜೆಸ್ಟಿಕ್ ನಲ್ಲಿ ಬೀದಿ ನಾಟಕ ಗಮನಸೆಳೆದವು. ಅವುಗಳ ಚಿತ್ರಗಳು ಹೀಗಿವೆ…

ಇಂದಿನಿಂದ ದೇಸಿ ಟಿ20 ಕ್ರಿಕೆಟ್ ಹಬ್ಬ ಐಪಿಎಲ್ ಆರಂಭವಾಗುತ್ತಿದೆ. ಬೆಂಗಳೂರಿನಲ್ಲಿ ಆರ್ ಸಿಬಿ ತಂಡ ಏಪ್ರಿಲ್ 8ರಂದು ಚಿನ್ನಸ್ವಾಮಿ ಕ್ರೀಡಾಂಗದಲ್ಲಿ ತಮ್ಮ ಮೊದಲ ತವರಿನ ಪಂದ್ಯವನ್ನು ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಬುಧವಾರ ಟಿಕೆಟ್ ಮಾರಾಟ ಮಾಡಲಾಗಿದ್ದು, ಅಭಿಮಾನಿಗಳು ಸಾಲುಗಟ್ಟಿ ಟಿಕೆಟ್ ಖರೀದಿಸಿದ ದೃಶ್ಯ ಹೀಗಿದೆ…

ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಇಂದು ಜಾನಪದ ಕ್ರೀಡಾ ಉತ್ಸವ ‘ಅವಲಕ್ಕಿ ಪವಲಕ್ಕಿ’ ಆಯೋಜಿಸಲಾಗಿತ್ತು. ಗ್ರಾಮೀಣ ಕ್ರೀಡೆಗಳಾದ ಅಳಗುಳಿ ಮನೆ, ಚಿನ್ನಿದಾಂಡು ಸೇರಿದಂತೆ ಇತರೆ ಕ್ರೀಡೆಗಳನ್ನು ಆಡಿಸಲಾಯಿತು.

ಮಾಜಿ ಉಪಪ್ರಧಾನಿ ಜಗ ಜೀವನ್ ರಾಮ್ ಅವರ 110ನೇ ಜನ್ಮದಿನದ ಅಂಗವಾಗಿ ವಿಧಾನಸೌಧದಲ್ಲಿ ಅವರ ಭಾವಚಿತ್ರಕ್ಕೆ ಸಚಿವರಾದ ಎಚ್.ಸಿ ಆಂಜನೇಯ, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಪುಷ್ಪ ನಮನ ಸಲ್ಲಿಸಿದರು…

Leave a Reply