ಹಿರಿಯ ಗಾಂಧಿವಾದಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ (93) ನಿಧನ

ಡಿಜಿಟಲ್ ಕನ್ನಡ ಟೀಮ್:

ಮೂತ್ರಪಿಂಡ ವೈಫಲ್ಯ ಮತ್ತು ಹೃದ್ರೋಗ ಸಮಸ್ಯೆಯಿಂದಾಗಿ ಕಳೆದ ಕೆಲವು ದಿನಗಳಿಂದ ನಗರದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದರು. ಪುತ್ರಿ ಮತ್ತು ಅಪಾರಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.

ಕುಮಾರಪಾರ್ಕ್‍ನ ಗಾಂಧಿಭವನದಲ್ಲಿ ಶ್ರೀನಿವಾಸಯ್ಯ ಅವರಿಗೆ ಸರ್ಕಾರಿ ಗೌರವ ಸಲ್ಲಿಸಿದ ನಂತರ ಅವರ ಅನಿಸಿಕೆಯಂತೆ ದೇಹವನ್ನು ರಾಮಯ್ಯ ಆಸ್ಪತ್ರೆಗೆ ನೀಡಲಾಯಿತು.

ಡಾ.ಹೊ.ಶ್ರೀನಿವಾಸಯ್ಯ ಅವರು ಮಹಾತ್ಮಗಾಂಧಿಯವರನ್ನು ಭೇಟಿ ಮಾಡಿ ಅವರ ಪ್ರಭಾವಕ್ಕೊಳಗಾಗದವರು. ವಿದ್ಯಾರ್ಥಿ ದೆಸೆಯಲ್ಲಿಯೇ ಖಾದಿ ಧರಿಸುತ್ತಿದ್ದವರು. 80 ವರ್ಷಗಳ ಹಿಂದೆ ಎಂಜಿನಿಯರಿಂಗ್ ಪದವಿ ಪಡೆದು ಭಾರತ್ ಎಲೆಕ್ಟ್ರಾನಿಕ್ಸ್‍ನಲ್ಲಿ ಮೆಕಾನಿಕ್ ಎಂಜಿನಿಯರ್ ಆಗಿದ್ದರು.

ರೈಲ್ವೆ ಕೋಚ್ ನಿರ್ಮಾಣದಲ್ಲಿ ಸಾಧನೆ ಮಾಡಿ ಜರ್ಮನಿಯಲ್ಲಿ ತರಬೇತಿ ಪಡೆದಿದ್ದರು. ಸುಮಾರು 80 ಪುಸ್ತಕಗಳನ್ನು ಬರೆದಿರುವ ಹೊ.ಶ್ರೀನಿವಾಸಯ್ಯ ಅವರ ‘ನಾ ಕಂಡ ಜರ್ಮನಿ’ ಎಂಬುದು ಪಠ್ಯವಾಗಿತ್ತು.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚೌದರಿ ಕೊಪ್ಪಲಿನಲ್ಲಿ ಜನಿಸಿದ ಹೊಶ್ರೀಗೆ ತಮ್ಮ ಊರಿನ ಬಗ್ಗೆ ಇನ್ನಿಲ್ಲದ  ಪ್ರೇಮ, ಅಭಿಮಾನ.  ಕಳೆದ ನಾಲ್ಕು ದಶಕಗಳಿಂದ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾಗಿ, ಗಾಂಧಿಭವನದ ಏಳಿಗೆಗೆ ತನ್ನನ್ನು ತಾನು ಸಮರ್ಪಿಸಿಕೊಂಡು ಕರ್ನಾಟಕ ಗಾಂಧಿ ಎಂದೇ ಖ್ಯಾತರಾಗಿದ್ದರು.

ಕಾವೇರಿ ನ್ಯಾಯಮಂಡಳಿ ನ್ಯಾಯಾಧೀಶರ ತಿಕ್ಕಾಟದ ವಿರುದ್ಧ ಸುಪ್ರೀಂ ಕೋರ್ಟ್‍ಗೆ ಅರ್ಜಿ ಹಾಕಿ ರಾಜ್ಯದ ಹಿತ ಕಾಪಾಡಲು ಮುಂದಾಗಿದ್ದರು.

Leave a Reply