ಹಿಂದಿಯಲ್ಲಿ ಜನಮನಗೆದ್ದ ಚಿತ್ರಗಳಿಗೇ ಪ್ರಶಸ್ತಿ ಬಂತು, ಕನ್ನಡದಲ್ಲೇಕೆ ಜನರಿಗಿಲ್ಲ ಪ್ರಶಸ್ತಿ ಗೆದ್ದಿರುವ ಚಿತ್ರಗಳ ಗುರುತು?

ಭಾನುಮತಿ ಬಿ. ಸಿ.

64 ನೇ ಚಲನಚಿತ್ರ ರಾಷ್ಟ್ರ ಪ್ರಶಸ್ತಿಗಳು  ಪ್ರಕಟವಾಗಿವೆ. ಇತ್ತೀಚೆಗೆ  ರಾಜಕೀಯವಾಗಿ ಸಂಚಲನ ಮೂಡಿಸಿರುವ ಉತ್ತರಪ್ರದೇಶ “ಸಿನಿಮಾ ಸ್ನೇಹಿ” ರಾಜ್ಯ ಹೆಗ್ಗಳಿಕೆಗೆ ಪಾತ್ರವಾಗಿದೆ .ಕನ್ನಡ ನಾಡಿಗೆ ಆ ಭಾಗ್ಯ ವೆಂದು ಬರುವುದೋ ? ಇರಲಿ. ಕನ್ನಡದ  ಪಾಲಿಗೆ  ಅತೀವ ಸಂತಸ ಅಲ್ಲದಿದ್ದರೂ ಕರ್ನಾಟಕದ ಮಟ್ಟಿಗೆ  ಸಣ್ಣ ಸಮಾಧಾನ ಸಿಕ್ಕಿದೆ. ತುಳುವಿನ ಮದಿಪು ,ಕೊಂಕಣಿಯ ಕೆ ಸೆರಾ ಸೆರಾ ಪ್ರಶಸ್ತಿ ಬಾಚಿಕೊಂಡಿವೆ. ಅಲ್ಲಮ ಅತ್ಯುತ್ತಮ ಚಲನ ಚಿತ್ರ ಪ್ರಶಸ್ತಿ ಹೊತ್ತು ತರುತ್ತಾನೆಂಬ ನಿರೀಕ್ಷೆ ಸುಳ್ಳಾಗಿದೆ . ಆದರೂ ಚಿತ್ರದ ಹಾಡುಗಳು- ಹಿನ್ನೆಲೆ ಸಂಗೀತಕ್ಕೆ ಬಾಪು ಪದ್ಮನಾಭ ,ಅತ್ಯುತ್ತಮ ಪ್ರಸಾದನಕ್ಕೆ ಹಿರಿಯ ಕಲಾವಿದ ರಾಮಕೃಷ್ಣ ಪ್ರಶಸ್ತಿ ಬಂದಿರುವುದು ಅಲ್ಪತೃಪ್ತಿ .

ಕಳೆದ ಬಾರಿ ರಾಜ್ಯ ಪ್ರಶಸ್ತಿ ಪಡೆದ ಹಜ್ ಚಿತ್ರದ ನಿರ್ದೇಶಕ ನಿಖಿಲ್ ಮಂಜು ಈ ಬಾರಿ “Reservation” ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯನ್ನೇ ಗೆದ್ದು ತಂದಿದ್ದಾರೆ.  ಆದ್ರೆ ಹಜ್ ಚಿತ್ರವಾಗಲಿ,  “Reservation” ಆಗಲಿ ಎಷ್ಟು ಜನರನ್ನ ತಲುಪಿದೆ ? ಅನ್ನುವುದು ಕಾಡುತ್ತಿರುವ ಪ್ರಶ್ನೆ. ಪ್ರಶಸ್ತಿ ಬಂದರೆ ಸಾಕೆ ? ಸಿನಿಮಾ ಜನರನ್ನು ತಲುಪುವುದು ಬೇಡವೇ ?

ಇರಲಿ , ಒಮ್ಮೆ ಬಾಲಿವುಡ್ ಕಡೆಗೆ ಕಣ್ಣಾಯಿಸಿದರೆ ನಮ್ಮ ನೆಲೆಯ ಅರಿವಾದೀತು.

ನೀರ್ಜಾ -ಈ ಬಾರಿಯ ಅತ್ಯುತ್ತಮ ಹಿಂದಿ ಚಲಚಿತ್ರ . ಅನೇಕ ದಾಖಲೆಗಳನ್ನು ತನ್ನದಾಗಿಸಿಕೊಂಡ ಹೆಗ್ಗಳಿಗೆ ಅದರದ್ದು. ನೈಜ ಕಥೆ ಆಧರಿಸಿ ಪ್ರೇಕ್ಷಕರನ್ನು ಕ್ಷಣಕ್ಷಣಕ್ಕೂ ಅವರಿಸಿಕೊಳ್ಳುವಂತೆ ಉಸಿರು ಬಿಗಿ ಹಿಡಿಯುವಂತೆ,  ಅದೂ ಮಹಿಳೆ ನಾಯಕಿಯಾಗಿ ಹಿಡಿದಿಡುವುದು ಸುಲಭದ ಮಾತಲ್ಲ. ನಿರ್ದೇಶಕ ಸಮರ್ಥನಿದ್ದರೆ ಮಾತ್ರ ಇದು ಸಾಧ್ಯವಾಗುವಂತಹದ್ದು.

ಬೆರಳೆಣಿಕೆಯಷ್ಟು ಮಂದಿ ಹೊಸರೀತಿಯ ಪ್ರಯತ್ನದಲ್ಲಿದ್ದರೂ ರಾಷ್ಟ್ರಮಟ್ಟ ತಲುಪಿಲ್ಲ. ಮೂರ್ನಾಲು ಮಂದಿಗೇ ಮತ್ತೆ ಮತ್ತೆ ಪ್ರಶಸ್ತಿಗಳು . ಬಂದರೂ ಜನ ನೋಡಿ ಅರ್ಥಮಾಡಿಕೊಳ್ಳಲಾಗದ ಚಿತ್ರಗಳು.  ಕನ್ನಡದಲ್ಲಿ ನಿರ್ಜಾ ರೀತಿಯ  ಪ್ರಯತ್ನಗಳು ಯಾವ ಕಾಲಕ್ಕೋ? ನಮ್ಮಲ್ಲಿ ಸೃಜನಶೀಲತೆ, ಬದ್ಧತೆ , ಗೆದ್ದೇ ತೀರುವ ಛಲದ ಕೊರತೆ ಎದ್ದು ನಿಂತಿದೆ. ಮನರಂಜಿಸುತ್ತಲೇ ಸಾಮಾನ್ಯನನ್ನು ಅಸಾಮಾನ್ಯ ಚಿಂತನೆಯ ಕಡೆಗೆ ಕರೆದೊಯ್ಯುವ ,ಅದರ ರುಚಿ ಹತ್ತಿಸುವ  ತಾಕತ್ತು ಸದ್ಯಕ್ಕಂತೂ ಯಾರಲ್ಲೂ ಕಂಡಿಲ್ಲ. ಪ್ರೇಕ್ಷಕರನ್ನು ಪ್ರಬುದ್ಧರಾಗಿಸುವ ಇಚ್ಚಾಶಕ್ತಿ ಯಾವಕಾಲಕ್ಕೆ ಬರುವುದೋ?  ನಮ್ಮ ಮಾರ್ಕೆಟ್ ಚಿಕ್ಕದು ಎನ್ನುವ ಕಾರಣ ಅವರಿಗಿರುವ ಚಿಂತನೆಯ ಪರಿಧಿಯಷ್ಟೇ ಸಣ್ಣದು.

ಪಿಂಕ್ -ಸಾಮಾಜಿಕ ಪಿಡುಗನ್ನ ಆಧರಿಸಿದ ಅತ್ತ್ಯತ್ತಮ ಚಿತ್ರ ಪಟ್ಟಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.ಹೆಣ್ಣು ‘ ಇಲ್ಲ ಅಂದ್ರೆ ಇಲ್ಲ’ ಅಂತ ಅರ್ಥ ಅಷ್ಟೆ . ಪೂರ್ವಗ್ರಹ ಪೀಡಿತರಾದ  ಗಂಡು-ಹೆಣ್ಣು ಮನಸ್ಸುಗಳಿಗೂ “ಹೌದು” ನೀವು ಹೇಳುತ್ತಿರುವುದರಲ್ಲಿ ಅರ್ಥವಿದೆ ಅನ್ನಿಸಿದ ಚಿತ್ರ.

ಈ ಎರಡು ಚಿತ್ರಗಳನ್ನ ಅಕಸ್ಮಾತ್ ನೋಡಿಲ್ಲದಿದ್ದರೆ ಮಿಸ್ ಮಾಡದೆ ನೋಡಿಬಿಡಿ. ಕೇವಲ ಪ್ರಶಸ್ತಿಯ ಗೌರವ,ಹಣಕ್ಕಾಗಿ ಸಿನಿಮಾ ಮಾಡದೆ ಜನರ ಮನಸ್ಸಿನಲ್ಲಿ ಉಳಿಯುವ,ಪ್ರೇರೇಪಿಸುವ ,ರಂಜಿಸುವ ಸಿನಿಮಾಕ್ಕೆ ಇವು ಮಾದರಿ.

ಉಳಿದ ಚಿತ್ರಗಳ ಪಟ್ಟಿ ಇಲ್ಲಿದೆ .

 ಅತ್ಯುತ್ತಮ ಪರಿಸರ ಚಿತ್ರ -The Tiger Who Crossed the Line

ಅತ್ಯುತ್ತಮ ನಟ -ಅಕ್ಷಯ್ ಕುಮಾರ್ (ರುಸ್ತುಮ್ )

ಅತ್ಯುತ್ತಮ ಶೈಕ್ಷಣಿಕ ಚಿತ್ರ – The Waterfalls

ಅತ್ಯುತ್ತಮ ಆತ್ಮಕಥಾನಕ ಚಿತ್ರ -Zikr Uss Parivash Ka

ಅತ್ಯುತ್ತಮ ಸಿನಿಮಾ ಪುಸ್ತಕ -Lata Mangeshkar (ಜೀವನಗಾಥೆ )

ಅತ್ಯುತ್ತಮ ಅನಿಮೇಟೆಡ್ ಚಿತ್ರ -Hum Chitra Banate Hain

ಅತ್ಯುತ್ತಮ ತಮಿಳು ಚಿತ್ರ -ಜೋಕರ್

ಅತ್ಯುತ್ತಮ ಗುಜರಾತಿ ಚಿತ್ರ -Wrong Side Raju

ಅತ್ಯುತ್ತಮ ಮರಾಠಿ ಚಿತ್ರ -Dashakriya

ಅತ್ಯುತ್ತಮ ಬಂಗಾಳಿ ಚಿತ್ರ – Bisarjan

ಅತ್ಯುತ್ತಮ ಮಕ್ಕಳ ಚಿತ್ರ -Dhanak, Hindi

ಅತ್ಯುತ್ತಮ ಹಿನ್ನೆಲೆ ಗಾಯಕಿ -Iman Chakraborty

ಅತ್ಯುತ್ತಮ ಹಿನ್ನೆಲೆ ಗಾಯಕ -Sunder Iyer

ಅತ್ಯುತ್ತಮ ಮಲೆಯಾಳಂ ಚಿತ್ರ -Maheshinite Pratikaram

Leave a Reply