ಜಿಯೋ ಗ್ರಾಹಕರೇ… ಇನ್ನು ಪಡೆದಿಲ್ವಾ ‘ಸಮ್ಮರ್ ಸರ್ಪ್ರೈಸ್’ ಆಫರ್? ತಡ ಮಾಡಿದ್ರೆ ಕೈತಪ್ಪೋದು ಖಚಿತ

ಡಿಜಿಟಲ್ ಕನ್ನಡ ಟೀಮ್:

ಮುಂದಿನ ಮೂರು ತಿಂಗಳ ಕಾಲ ರಿಲಾಯನ್ಸ್ ಜಿಯೋ ನೀಡುವ ‘ಸಮ್ಮರ್ ಸರ್ಪ್ರೈಸ್’ ಆಫರ್ ಅನ್ನು ಆನಂದಿಸುವ ತವಕದಲ್ಲಿದ್ದ ಹಲವು ಗ್ರಾಹಕರಿಗೆ ಈಗ ಶಾಕಿಂಗ್ ಸುದ್ದಿ ಬಂದಿದೆ. ಅದೇನೆಂದರೆ, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಈ ಆಫರ್ ಅನ್ನು ಕೈಬಿಡುವಂತೆ ಜಿಯೋ ಕಂಪನಿಗೆ ಸೂಚನೆ ನೀಡಿದ್ದು, ಜಿಯೋ ಸದ್ಯದಲ್ಲೇ ಈ ಆಫರ್ ಅನ್ನು ನಿಲ್ಲಿಸಲಿದೆ.

ಈಗಾಗಲೇ ₹ 99 ಕೊಟ್ಟು ಪ್ರೈಮ್ ಸದಸ್ಯತ್ವ ಪಡೆದು, ₹ 303 ಪಾವತಿಸಿ ಈ ಸಮ್ಮರ್ ಸರ್ಪ್ರೈಸ್ ಆಫರ್ ಪಡೆದಿರುವ ಗ್ರಾಹಕರಿಗೆ ಮುಂದಿನ ಮೂರು ತಿಂಗಳ ಕಾಲ ಉಚಿತ ಸೇವೆ ಲಭ್ಯವಾಗಲಿದೆ. ಹೀಗಾಗಿ ನೀವು ಇನ್ನು ಈ ಆಫರ್ ಪಡೆದಿಲ್ಲವಾದರೆ ಕೂಡಲೇ ಪಡೆದುಕೊಳ್ಳುವುದು ಉತ್ತಮ. ಇಲ್ಲವಾದರೆ ಪ್ರತಿ ತಿಂಗಳು ಶುಲ್ಕ ಪಾವತಿಸಿ ಸೇವೆ ಪಡೆಯಬೇಕಿದೆ.

ಕಳೆದ ವರ್ಷ ಅಕ್ಟೋಬರ್ ನಲ್ಲಿ ತನ್ನ ಸೇವೆ ಆರಂಭಿಸಿದ್ದ ರಿಲಾಯನ್ಸ್ ಜಿಯೋ ಸತತವಾಗಿ ಆರು ತಿಂಗಳ ಕಾಲ ಗ್ರಾಹಕರಿಗೆ ಉಚಿತ ಸೇವೆ ನೀಡಿತ್ತು. ನಂತರ ತನ್ನ ಪ್ರೈಮ್ ಸದಸ್ಯತ್ವ ಪಡೆಯುವಂತೆ ತಿಳಿಸಿತ್ತು. ಹೀಗೆ ಪ್ರೈಮ್ ಸದಸ್ಯತ್ವ ಪಡೆದ ನಂತರ ಗ್ರಾಹಕರಿಗೆ ಜಿಯೋ ಕಂಪನಿ ₹ 303 ಗೆ ಮೂರು ತಿಂಗಳ ಕಾಲ ಅನಿರ್ದಿಷ್ಟ ಸೇವೆಯನ್ನು ನೀಡಲು ಈ ಸಮ್ಮರ್ ಸರ್ಪ್ರೈಸ್ ಆಫರ್ ಅನ್ನು ಘೋಷಿಸಿತ್ತು.

ಟ್ರಾಯ್ ಸೂಚನೆ ಮೇರೆಗೆ ಜಿಯೋ ಸದ್ಯದಲ್ಲೇ ಈ ಆಫರ್ ಅನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಈ ಸಮ್ಮರ್ ಸರ್ಪ್ರೈಸ್ ಆಫರ್ ಅನ್ನು ನಿಲ್ಲಿಸಿದ್ದರೂ, ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆಯಲು ನೀಡಿರುವ ಏಪ್ರಿಲ್ 15ರ ಗಡುವನ್ನು ಮುಂದುವರಿಸಲಾಗಿದೆ.

Leave a Reply