ತನ್ನ ಮಗಳಿಗೆ ಹೊಸ ಬಟ್ಟೆ ಕೊಡಿಸಲು 2 ವರ್ಷಗಳ ಕಾಲ ಹಣ ಕೂಡಿಟ್ಟ ತಂದೆ! ನಿಮ್ಮ ಮನಕಲಕಲಿದೆ ಈ ಕಥೆ

ಡಿಜಿಟಲ್ ಕನ್ನಡ ಟೀಮ್:

ಬಡತನವಿರಲಿ, ಸಿರಿತನವಿರಲಿ… ತನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬುದು ಪ್ರತಿಯೊಬ್ಬ ತಂದೆಯ ಕನಸು. ಸಿರಿವಂತರು ತಮ್ಮ ಮಕ್ಕಳು ಬಯಸಿದ್ದನೆಲ್ಲಾ ಕ್ಷಣಾರ್ಧದಲ್ಲಿ ಅವರ ಮುಂದೆ ತಂದಿಡುತ್ತಾರೆ. ಆದರೆ ಬಡವ ತನ್ನ ಇಷ್ಟ ಕಷ್ಟಗಳನ್ನು ಲೆಕ್ಕಿಸದೇ ತಡವಾದರೂ ಸರಿಯೇ ತನ್ನ ಮಕ್ಕಳ ಆಸೆಯನ್ನು ಈಡೇರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಾನೆ. ಈಗ ನಾವು ಇಂತದೇ ಬಡವನೊಬ್ಬ ತನ್ನ ಮಗಳಿಗೆ ಒಂದು ಹೊಸ ಬಟ್ಟೆಯನ್ನು ಕೊಡಿಸಲು ಸತತ 2 ವರ್ಷಗಳ ಕಾಲ ಹಣ ಕೂಡಿಟ್ಟ ಕಥೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಹೌದು, ಇತ್ತೀಚೆಗೆ ಛಾಯಾಗ್ರಾಹಕ ಜಿಎಂಬಿ ಆಕಾಶ್ ಎಂಬುವವರು ಉದ್ಯಾನವನದಲ್ಲಿ ತನ್ನ ಕ್ಯಾಮೆರಾ ಕಣ್ಣುಗಳಿಂದ ಫೋಟೊ ಕ್ಲಿಕ್ಕಿಸುವಾಗ ಅಪ್ಪ ಮಗಳ ಸಂಭ್ರಮದ ಕ್ಷಣವನ್ನು ಸೆರೆ ಹಿಡಿಯುತ್ತಾರೆ. ಅಷ್ಟೇ ಅಲ್ಲದೆ ಆತನ ಹಿನ್ನೆಲೆಯನ್ನು ಅವನ ಬಾಯಿಂದಲೇ ತಿಳಿದು, ಈ ಫೋಟೊ ಹಾಗೂ ಕಥೆಯನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಿತ್ತಾರೆ. ನಂತರ ಆ ಪೋಸ್ಟ್ ವೈರಲ್ ಆಗಿದೆ.

ಪಾರ್ಕ್ ನಲ್ಲಿ ತನ್ನ ಮಗಳನ್ನು ಸಂತೋಷದಿಂದ ಆಟವಾಡಿಸುತ್ತಿದ್ದ ವ್ಯಕ್ತಿ ಹೆಸರು ಎಂ.ಡಿ ಕವ್ಸಾರ್ ಹುಸೇನ್… ವೃತ್ತಿಯಲ್ಲಿ ಈತ ಬಿಕ್ಷುಕ. ಹತ್ತು ವರ್ಷದ ಹಿಂದೆ ಸಂಭವಿಸಿದ ಅಪಘಾತದಿಂತ ಈತ ತನ್ನ ಬಲಗೈ ಕಳೆದುಕೊಂಡ. ಕುಟುಂಬದ ಜವಾಬ್ದಾರಿ ಈತನ ಮೇಲೆ ಬಿದ್ದಿದ್ದು, ಕೆಲಸ ಸಿಗದ ಪರಿಣಾಮ ಬೀದಿಯಲ್ಲಿ ಬಿಕ್ಷೆ ಬೇಡುತ್ತಾ ತನ್ನ ಸಂಸಾರ ನಡೆಸುತ್ತಾದ್ದಾನೆ. ತನ್ನ ಮಗಳಿಗೆ ಒಂದು ಹೊಸ ಬಟ್ಟೆಯನ್ನು ಕೊಡಿಸಲು ಈತ ಕಳೆದ ಎರಡು ವರ್ಷಗಳಿಂದ ಪ್ರತಿ ನಿತ್ಯ ತನಗೆ ಸಿಕ್ಕ ಹಣದಲ್ಲಿ ಒಂದೊಂದು ರೂಪಾಯಿಯನ್ನು ಕೂಡಿಟ್ಟು ಕಡೆಗೂ ತನ್ನ ಮಗಳಿಗೆ ಹೊಸ ಬಟ್ಟೆ ಕೊಡಿಸಿದ್ದಾನೆ. ಈ ವ್ಯಕ್ತಿ ತನ್ನ ಬಗ್ಗೆ ಹೇಳಿಕೊಂಡ ಮನಕಲಕುವ ಕಥೆ ಹೀಗಿದೆ…

‘ಎರಡು ವರ್ಷಗಳ ಕಾಲ ಕೂಡಿಟ್ಟ ಹಣದಲ್ಲಿ ನಿನ್ನೆಯಷ್ಟೇ ನನ್ನ ಮಗಳಿಗೆ ಒಂದು ಹೊಸ ಬಟ್ಟೆಯನ್ನು ಕೊಡಿಸಿದೆ. ಬಟ್ಟೆ ಕೊಳ್ಳಲು ಅಂಗಡಿಗೆ ತೆರಳಿದಾಗ ನಾನು ಕೊಟ್ಟ ಮುದುಡಿದ ನೋಟುಗಳನ್ನು ಕಂಡ ಅಂಗಡಿ ಮಾಲೀಕ, ನೀನು ಬಿಕ್ಷುಕನೇ ಎಂದು ಕೇಳಿ ನನ್ನನ್ನು ಅಂಗಡಿಯಿಂದ ಹೊರದಬ್ಬಿದ. ಆಗ ಗಾಬರಿಗೊಂಡ ಮಗಳು ಅಳುತ್ತಾ ನನ್ನ ಕೈ ಹಿಡಿದು ನನಗೆ ಯಾವುದೇ ಬಟ್ಟೆ ಬೇಡ ಎಂದು ಅಂಗಡಿಯಿಂದ ನನ್ನನ್ನು ಹೊರಗೆ ಕರೆದುಕೊಂಡು ಬಂದಳು. ನಂತರ ನನ್ನ ಒಂದು ಕೈನಲ್ಲಿ ಆಕೆಯ ಕಣ್ಣೀರು ಒರೆಸಿದೆ.

ಹತ್ತು ವರ್ಷಗಳ ಹಿಂದೆ ನಡೆದ ಅಪಘಾತದಿಂದ ನನಗೆ ಈ ಪರಿಸ್ಥಿತಿ ಎದುರಾಗುತ್ತದೆ, ಬೇರೆಯವರ ಮುಂದೆ ಬಿಕ್ಷೆ ಬೇಡಿ ಜೀವನ ನಡೆಸುವ ಸ್ಥಿತಿ ತಲುಪುತ್ತೇನೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ನನ್ನ ಒಂದು ಕೈ ಇಲ್ಲದಿರುವುದನ್ನು ನೋಡಿ ನನ್ನ ಚಿಕ್ಕ ಮಗ, ಅಪ್ಪಾ ನಿನ್ನ ಇನ್ನೊಂದು ಕೈ ಅನ್ನು ಎಲ್ಲಿ ಬಿಟ್ಟು ಬಂದಿದ್ದೀಯಾ ಎಂದು ಕೇಳುತ್ತಾನೆ. ಒಂದೇ ಕೈಯಲ್ಲಿ ಎಲ್ಲ ಕೆಲಸಗಳನ್ನು ಮಾಡಿಕೊಳ್ಳುವುದು ಎಷ್ಟು ಕಷ್ಟ ಎಂಬುದನ್ನು ಅರಿತಿರುವ ನನ್ನ ಮಗಳು ಸುಮಯ್ಯಾ ನಿತ್ಯ ನನಗೆ ಊಟ ಮಾಡಿಸುತ್ತಾಳೆ.

ನನ್ನ ಮಗಳು ಎರಡು ವರ್ಷಗಳ ನಂತರ ಇಂದು ಹೊಸ ಬಟ್ಟೆ ತೊಟ್ಟಿದ್ದಾಳೆ. ಅದಕ್ಕಾಗಿಯೇ ಆಕೆಯ ಜತೆ ಆಟವಾಡಲು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ. ನನಗೆ ಇಂದು ಸಂಪಾದನೆಯಾಗದೇ ಇರಬಹುದು. ಆದರೂ ಪರವಾಗಿಲ್ಲ ನಾನು ನನ್ನ ಮಗಳ ಜತೆ ಆನಂದದಿಂದ ಸುತ್ತಾಡುತ್ತೇನೆ. ಈಕೆ ಹೊಸ ಬಟ್ಟೆ ತೊಟ್ಟು ಖುಷಿಯಿಂದ ಆಟವಾಡುವುದನ್ನು ಸೆರೆ ಹಿಡಿಯಲು ಹೆಂಡತಿಗೆ ತಿಳಿಯದಂತೆ ಪಕ್ಕದ ಮನೆಯವರಿಂದ ಮೊಬೈಲ್ ಫೋನ್ ಪಡೆದುಕೊಂಡು ಬಂದಿದ್ದೇನೆ. ನನ್ನ ಬಳಿ ನನ್ನ ಮಗಳ ಯಾವುದೇ ಫೋಟೊ ಇಲ್ಲ. ಮುಂದೊಂದು ದಿನ ನಾನು ಮೊಬೈಲ್ ಫೋನ್ ತೆಗೆದುಕೊಂಡಾಗ ನನ್ನ ಮಗಳ ಸಾಕಷ್ಟು ಫೊಟೊಗಳನ್ನು ಹಿಡಿಯುತ್ತೇನೆ. ಈ ದಿನವನ್ನು ಆಕೆ ದೀರ್ಘಕಾಲ ಸ್ಮರಿಸುವಂತಾಗಬೇಕು ಎಂಬುದು ನನ್ನ ಆಸೆ.

ಮಕ್ಕಳಿಗೆ ಶಿಕ್ಷಣ ಕೊಡಿಸುವುದು ದೊಡ್ಡ ಸವಾಲಾಗಿದ್ದರೂ ಅವರನ್ನು ಓದಿಸುತ್ತಿದ್ದೇನೆ. ಸಾಕಷ್ಟು ಬಾರಿ ಪರೀಕ್ಷೆ ಶುಲ್ಕವನ್ನು ಪಾವತಿಸಲು ನನ್ನಿಂದ ಸಾಧ್ಯವಾಗದೇ ಅವರು ಪರೀಕ್ಷೆಯನ್ನು ಬರೆಯಲು ಸಾಧ್ಯವಾಗಿಲ್ಲ. ನಮ್ಮ ಜೀವನದ ಪ್ರತಿದಿನವೂ ದೊಡ್ಡ ಪರೀಕ್ಷೆಯಾಗಿರುವಾಗ ಅವರು ಆ ಪರೀಕ್ಷೆಯನ್ನು ಬರೆಯುವುದಾದರೂ ಹೇಗೆ?

ಹಲವು ಬಾರಿ ನಾನು ಬಿಕ್ಷೆ ಬೇಡಲು ಹೋದರೆ ನನ್ನ ಜತೆ ಮಗಳು ಬರುತ್ತಾಳೆ. ಆಕೆಯನ್ನು ಒಂದು ಟ್ರಾಫಿಕ್ ಸಿಗ್ನಲ್ ಬಳಿ ಕೂರಿಸಿ, ಸ್ವಲ್ಪ ದೂರ ಹೋಗಿ ನಾನು ಅಲ್ಲಿ ಬಿಕ್ಷೆ ಬೇಡುತ್ತಾನೆ. ದೂರದಿಂದಲೇ ನನ್ನ ಮಗಳನ್ನು ನೋಡಿಕೊಳ್ಳುತ್ತಿರುತ್ತೇನೆ. ಬಿಕ್ಷೆ ಬೇಡುವಾಗ ರಸ್ತೆಯಲ್ಲಿ ಸಾಗುವ ದೊಡ್ಡ ಕಾರು ವಾಹನಗಳು ಎಲ್ಲಿ ನನಗೆ ಡಿಕ್ಕಿ ಹೊಡೆದು ಮತ್ತೆ ಅಪಘಾತ ಮಾಡಿಬಿಡುತ್ತವೆ ಎಂಬ ಆತಂಕ ಆಕೆಯದು. ಕೆಲವೊಮ್ಮೆ ಮಳೆ ಬಂದರೆ ಇಬ್ಬರು ನೆನೆಯುತ್ತಾ ನಮ್ಮ ಕನಸುಗಳನ್ನು ಹಂಚಿಕೊಳ್ಳುತ್ತೇವೆ. ಒಂದೊಂದು ದಿನ ನನಗೆ ಹಣ ಸಿಗುವುದಿಲ್ಲ ಆಗ ಬರಿಗೈಯಲ್ಲಿ ಮನೆಗೆ ಹಿಂತಿರುಗುತ್ತೇನೆ. ಬೇರೊಬ್ಬರ ಮುಂದೆ ಕೈ ಚಾಚುವಾಗ ನನ್ನ ಮಗಳು ನೋಡಿದರೆ ನನಗೆ ನಾಚಿಕೆಯಾಗುತ್ತದೆ. ಆಗ ಆಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗುವುದಿಲ್ಲ. ಆದರೆ ಇಂದು ಅವೆಲ್ಲವನ್ನು ಮರೆತು ಸಂತೋಷವಾಗಿದ್ದೇವೆ. ಈ ದಿನವನ್ನು ಆಕೆ ಸಂಪೂರ್ಣವಾಗಿ ಆನಂದಿಸುತ್ತಿದ್ದಾಳೆ. ಇವತ್ತಿನ ಮಟ್ಟಿಗೆ ಈ ಅಪ್ಪ ಬಿಕ್ಷುಕನಲ್ಲ. ನಾನೇ ರಾಜ, ಅವಳೇ ರಾಜಕುಮಾರಿ…’

(ಚಿತ್ರಕೃಪೆ:ಜಿಎಂಬಿ ಆಕಾಶ್)

14 COMMENTS

 1. Is it real story then great really she was a princess like having father…. God bless both of u dreams come true….

 2. ನಿಜವಾಗಲೂ ನಮ್ಮ ಜೀನದಲ್ಲಿ ಕಾಣದ ಎಷ್ಟೋ ನಿಜ ಕತೆಗಳು ಹೀಗೆ ನಮ್ಮ ಮುಂದೆ ಕಾಣಿಸಿಕೊಳ್ಳತ್ತವೆ ಆದರೂ ನಮ್ಮ ಕಣ್ಣ ತೆರೆಯುವದೇ ಇಲ್ಲ ೀ ತಂದೆಗೆ ನನ್ನ ನೂರು ಸಲಾಮುಗಳು

 3. ನನ್ನ ಹೆಸರು ಸತೀಶ್ ನಾನು ಒಂದು ಸಣ್ಣ ಟ್ರಂಸ್ಪೋರ್ಟ್ ಕಂಪನಿ ನೆಡೆಸುತ್ತಿದೆನೆ ಕೆಲವೊಂದು ಸಲ ನನ್ನ ಹತ್ತಿರ ಹಣ ಇರುವುದಿಲ್ಲ ಆಗ ನನ್ನ ಪರಿಸ್ಥಿತಿ ಅರಿತ ನನ್ನ ಮಗಳು ಲಾವಣ್ಯ , ತನುಶ್ರೀ ,ನನ್ನ ಪತ್ನಿ ಲಲಿತ ಇದೆ ರೀತಿ ಸಹಕಾರ ಮಡಿ ನನ್ನನ್ನು ಪ್ರೀತಿಯಿಂದ ಸಮಾಧಾನ ಮಾಡುತ್ತಾರೆ ನಿಜವಾಗಿಯೂ ಹೆಣ್ಣು ಮಗಳನ್ನು ಪಡೆದ ತಂದೆ ತಾಯಿ ಧನ್ಯರು
  ಈ ತಂದೆ ಮಗಳಿಗೆ ನನ್ನ ಸಲಾಂ

 4. ನಿಜಕ್ಕೂ ಅದ್ಭುತ. ಇ ತಂದೆ ಮಗಳ ಸಂಬಂಧ. ಇದೇ ನಿಜವಾದ ಪ್ರೀತಿ. ಐ ಲವ್ ಯೂ ಅಪ್ಪ

 5. ಮನಕುಲುಕುವ ಜೀವನದ ಕಥೆ, ವ್ಯಥೆ… ಜೀವನವೆ೦ದರೆ ಹಾಗೇ ಏನೋ, ಒ೦ದು ಅಕಸ್ಮಾತ್ ತಿರುವು ದಿಕ್ಕನ್ನೇ ಬದಲಿಸುತ್ತದೆ. ನಾವೇನೋ ಅ೦ದುಕೊಳ್ಳುತ್ತೇವೆ, ಆದರೆ ಬದುಕು ನಿರ್ಧಾಕ್ಷಿಣ್ಯವಾಗಿ ಭಿಕ್ಷಾಟನೆಗೆ ತಳ್ಳುವಾಗ ಅವನು ನಿಸ್ಸಹಾಯಕ. ಒಬ್ಬ ಕೋಟ್ಯಾಧಿಪತಿ ತನ್ನ ಮಗಳಿಗೆ ಕೊಡುವ ದುಭಾರಿ ಉಡುಗೊರೆಗಿ೦ತ ಈ ತ೦ದೆಯ ಪ್ರೀತಿಯ ಮೌಲ್ಯ ಬೆಲೆಕಟ್ಟಲಾರದ್ದು. ಮು೦ದೊ೦ದು ದಿನ ಇನ್ನೊ೦ದು ಅನಿರೀಕ್ಷಿತ ತಿರುವು ಈ ಕುಟು೦ಬದ ದಿಕ್ಕನ್ನೇ ಬದಲಿಸಿ ಶುಭವಾಗಲಿ ಎ೦ದು ಹಾರೈಸಿ ಭಗವ೦ತನಲ್ಲಿ ಪ್ರಾರ್ಥಿಸೋಣ.

 6. Edhna keli namge sakath bejaragtide avr nijwaglu anubhavisthiroru avrge heg agbeda…paapa dhewru heegella kasta kodbardhu…..

 7. nijavagiyu idondu manakulukuva Kathe. Park, road side Galalli inthaha bada janarugala mukhavannu nodiddu hechu.But ondu dinavadru avara jothe mathadoke agilla.Avarolagiro sadness gothagodu namagoo antha sthithi baruvaga.Ondu mathide ‘badavanagi huttodu thappalla adre badavanagi sayodu thappu ‘…
  ee article nijakku bahala sundaravagi barediddare. Idaralli jeeva ide, obba samanya vyakthiya novu-nalivu ide. …….?

Leave a Reply