ವಿರಾಟ್ ಕೊಹ್ಲಿ ಬಾಯಲ್ಲಿ ಕನ್ನಡ ಮಾತನಾಡಿಸುತ್ತಲೇ ಆರ್ ಸಿಬಿ ಆಟಗಾರರಿಗೆ ಮಿ.ನ್ಯಾಗ್ಸ್ ಮೋಸ ಮಾಡಿದ್ದು ಹೇಗೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಮಿಸ್ಟರ್ ನ್ಯಾಗ್ಸ್… ಈ ಹೆಸರು ಆರ್ ಸಿಬಿ ಅಭಿಮಾನಿಗಳಿಗೆ ಚಿರಪರಿಚಿತ. ಅಷ್ಟೇ ಅಲ್ಲ ಹಾಟ್ ಫೇವರೆಟ್ ಕೂಡ ಹೌದು. ಕಳೆದ ಎರಡು ಐಪಿಎಲ್ ಆವೃತ್ತಿಗಳಿಂದಲೂ ಮೈದಾನದ ಹೊರಗೆ ಆರ್ ಸಿಬಿ ಅಭಿಮಾನಿಗಳನ್ನು ರಂಜಿಸುತ್ತಲೇ ಬಂದಿರುವ ಮಿಸ್ಟರ್ ನ್ಯಾಗ್ಸ್ ಈ ಬಾರಿಯೂ ತಮ್ಮ ಕಾಯಕದಲ್ಲಿ ಮುಂದುವರಿದಿದ್ದಾರೆ.

ಈ ಹಿಂದೆ ಎಬಿ ಡಿವಿಲಿಯರ್ಸ್ ಬಾಯಲ್ಲಿ ಡಾ.ರಾಜ್ ಕುಮಾರ್ ಅವರ ಶಂಕರ್ ಗುರು ಚಿತ್ರದ ಖ್ಯಾತ ಹಾಡು ‘ಲವ್ ಮಿ ಆರ್ ಹೇಟ್ ಮೀ…’ ಹಾಡನ್ನು ಹಾಡಿಸಿ ಕನ್ನಡಿಗರ ಮನ ಗೆದ್ದಿದ್ದ ನ್ಯಾಗ್ಸ್, ಈಗ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಯನ್ನು ಕನ್ನಡದಲ್ಲಿ ಮಾತನಾಡಿಸಿರುವುದು ವಿಶೇಷ.

ಪ್ರತಿ ವರ್ಷದಂತೆ ಈ ವರ್ಷವೂ ಆರ್ ಸಿಬಿ ಇನ್ ಸೈಡರ್ ನಲ್ಲಿ ತಮ್ಮ ಹಾಸ್ಯದ ಮೂಲಕ ಅಭಿಮಾನಿಗಳನ್ನು ರಂಜಿಸಲಿರುವ ನ್ಯಾಗ್ಸ್, ಈ ಬಾರಿ ಆರ್ ಸಿಬಿ ಆಟಗಾರರನ್ನು ಯಾಮಾರಿಸುವ ಮೂಲಕ ವಿರಾಟ್ ಕೊಹ್ಲಿಯಿಂದ ನಾಯಕತ್ವ ಪಟ್ಟವನ್ನು ಕಿತ್ತುಕೊಳ್ಳಲು ಹೇಗೆ ರಣತಂತ್ರ ರೂಪಿಸಿದ್ದಾರೆ ಎಂಬುದು ನೀವೇ ನೋಡಿ ಆನಂದಿಸಿ…

Leave a Reply