ಮಹಿಳೆಯರ ಮೇಲಿನ ದಾಳಿ ತಡೆಯಲು ಬರ್ತಿದೆ ‘ಪಿಂಕ್ ಹೊಯ್ಸಳ’!

ಡಿಜಿಟಲ್ ಕನ್ನಡ ಟೀಮ್:

ಸರಗಳ್ಳತನ ಸೇರಿದಂತೆ ಮಹಿಳೆಯರ ಮೇಲೆ ನಡೆಯುವ ದಾಳಿಗಳನ್ನು ತಡೆಯಲು ಹಾಗೂ ದಾಳಿಗೊಳಗಾದವರ ನೆರವಿಗಾಗಿ ‘ಪಿಂಕ್ ಹೊಯ್ಸಳ’ ಸೇವೆಯನ್ನು ಆರಂಭಿಸಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಚಾಲನೆ ನೀಡಿದರು.

ವಿಧಾನಸೌಧದ ಮುಂದೆ 51 ಪಿಂಕ್ ಹೊಯ್ಸಳ ವಾಹನಗಳ ಸೇವೆಗೆ ಚಾಲನೆ ನೀಡಿದ ಮುಖ್ಯಮಂತ್ರಿಗಳು, ‘ಮಹಿಳೆಯರ ರಕ್ಷಣೆಯ ವಿಷಯದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು’ ಎಂದು ಬಣ್ಣಿಸಿದರು. ಈ ವೇಳೆ ಅವರು ಹೇಳಿದ ಮಾತುಗಳು ಹೀಗಿವೆ…

‘ದುಷ್ಕರ್ಮಿಗಳಿಂದ ಹಾವಳಿಗೆ ಗುರಿಯಾದ ಕೂಡಲೇ ಮಹಿಳೆಯರು ತಮ್ಮ ಮೊಬೈಲ್ ನಲ್ಲಿ ಸುರಕ್ಷಾ ಎಂಬ ಆ್ಯಪ್ ಬಳಸಿ ಸಂದೇಶ ಕಳುಹಿಸಿದರೆ, ಆ ಪ್ರದೇಶದಲ್ಲಿರುವ ಪಿಂಕ್ ಹೊಯ್ಸಳ ನೆರವಿಗೆ ಧಾವಿಸಲಿದೆ. ಮಹಿಳೆಯರಿಗೆ ರಕ್ಷಣೆ ನೀವುದರ ಜತೆಗೆ ತೊಂದರೆ ಕೊಡುವವರಿಗೆ ತಕ್ಕ ಪಾಠ ಕಲಿಸಲಿದೆ.’

ಇದೇ ವೇಳೆ ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ದುಡ್ಡಿನ ಹೊಳೆ ಹರಿಸಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ತಾವೇನು ಮಾಡಿದ್ದಾರೋ ಅದನ್ನು ಇನ್ನೊಬ್ಬರು ಮಾಡಿದ್ದಾರೆ ಎನ್ನುತ್ತಾರೆ ಯಡಿಯೂರಪ್ಪನವರು. ಅವರ ಮಾತಿಗೆ ಅಷ್ಟೊಂದು ಗೌರವ ಕೊಡುವ ಅಗತ್ಯ ಇಲ್ಲ’ ಎಂದರು.

Leave a Reply