ಹೆಬ್ಬುಲಿ-2 ಬರುತ್ತಾ? ಸುದೀಪ್ ಟ್ವೀಟಿಸಿದ್ದೇನು?

ಎರಡು ಮೂರು ದಿನಗಳಿಂದ ಸುದೀಪ್ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿದ್ದವು. ಕೆಂಪೇಗೌಡ ಭಾಗ 2 ಸಿನಿಮಾ ಬರತ್ತಂತೆ, ಅದನ್ನು ಸುದೀಪ್ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದು ಒಂದು ಸುದ್ದಿ. ಆ ಸುದ್ದಿ ಸಿಂಗಂ 2 ಸಿನಿಮಾ ಬಂದಾಗಲೂ ಹರಿದಾಡುತ್ತಿತ್ತು. ಸಿಂಗಂ 1 ಇಲ್ಲಿ ಕೆಂಪೇಗೌಡ ಆಗಿತ್ತು. ಅದೇ ಥರ ಸಿಂಗಂ 2 ಸಿನಿಮಾ ಬಂದಾಗ ಕೆಂಪೇಗೌಡ 2 ಸಿನಿಮಾ ಬರುತ್ತದೆ ಅನ್ನೋ ಕುತೂಹಲ ಸಹಜವಾಗಿತ್ತು. ಆದರೆ ಈಗ ಆ ಸುದ್ದಿ ಹರಿದಾಡಿದ್ದರ ಔಚಿತ್ಯ ಏನು ಅಂತ ಗೊತ್ತಾಗಿರಲಿಲ್ಲ.
ಅದೆಲ್ಲಾ ಆದ ತಕ್ಷಣವೇ ಕೆಂಪೇಗೌಡ ಭಾಗ 2 ಅಲ್ಲ, ಅದಕ್ಕೆ ಬದಲಾಗಿ ಕಿಚ್ಚ ಹೆಬ್ಬುಲಿ ಭಾಗ2 ಸಿನಿಮಾ ನಿರ್ದೇಶಿಸುತ್ತಾರೆ ಅನ್ನುವ ಸುದ್ದಿ ಹರಿದಾಡತೊಡಗಿತು. ಆ ಸುದ್ದಿ ದಟ್ಟವಾಗಿ ಹಬ್ಬಿದಾಗ ಒಂದಷ್ಟು ಮಂದಿ ಇದೇನಿದು ಅಂತ ಮೂಗಿನ ಮೇಲೆ ಬೆರಳಿಟ್ಟಿದ್ದರು. ಹೇಳಿಕೇಳಿ ಹೆಬ್ಬುಲಿ ಸಿನಿಮಾದ ನಿರ್ದೇಶಕ ಕೃಷ್ಣ. ಆದರೆ ಹೆಬ್ಬುಲಿ ಭಾಗ2 ಸುದೀಪ್ ನಿರ್ದೇಶಿಸುವುದು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಕುತೂಹಲಕ್ಕೆ ಎಡೆ ಮಾಡಿತ್ತು. ಅಲ್ಲದೇ ಸುದೀಪ್ ಗೆಲುವಿನ ಮಾಯೆಗೆ ಸಿಲುಕಿಕೊಂಡರೆ ಅನ್ನೋ ಅನುಮಾನ ಕೆಲವರಲ್ಲಿ ಹುಟ್ಟಿದ್ದು ಸುಳ್ಳಲ್ಲ.
ಆದರೆ ಸುದೀಪ್ ಅವನ್ನೆಲ್ಲಾ ಪಕ್ಕಕ್ಕೆ ಸರಿಸಿ ತಾವೊಬ್ಬ ವಿಭಿನ್ನ ವ್ಯಕ್ತಿ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಇವತ್ತು ತಾನು ಹೆಬ್ಬುಲಿ ಭಾಗ2 ಸಿನಿಮಾ ನಿರ್ದೇಶಿಸುತ್ತೇನೆ ಅನ್ನೋ ಸುದ್ದಿ ಹಬ್ಬಿತ್ತು. ಅದು ಸುಳ್ಳು. ಹೆಬ್ಬುಲಿ ಕೃಷ್ಣ ಅವರ ಮಗು. ಎಂದು ಟ್ವೀಟ್ ಮಾಡಿದ್ದರು. ಆ ಮೂಲಕ ತಾನು ಹೆಬ್ಬುಲಿ ಭಾಗ2 ಸಿನಿಮಾ ನಿರ್ದೇಶಿಸುತ್ತಿಲ್ಲರ ಅನ್ನುವುದನ್ನು ಸ್ಪಷ್ಟಪಡಿಸಿದ್ದರು.
ಅಂದಹಾಗೆ ಸುದೀಪ್ ಹೆಬ್ಬುಲಿ ಸಿನಿಮಾದ ನಿರ್ಮಾಪಕ ಉಮಾಪತಿಯವರಿಗೆ ಇನ್ನೊಂದು ಸಿನಿಮಾ ನಿರ್ದೇಶಿಸಿ ಕೊಡಲಿದ್ದಾರಂತೆ.

Leave a Reply