ಆರ್ ಸಿಬಿಗೆ ಗಾಯದ ಮೇಲೆ ಬರೆ! ಇಂದಿನ ಪಂದ್ಯದಲ್ಲಿ ಡಿವಿಲಿಯರ್ಸ್ ಆಡಲ್ಲ…

ಡಿಜಿಟಲ್ ಕನ್ನಡ ಟೀಮ್:

ಸತತ ಸೋಲುಗಳಿಂದ ತೀವ್ರ ಒತ್ತಡಕ್ಕೆ ಸಿಲುಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಣೆ ಬರಹವೇ ಸರಿ ಇದ್ದಂತಿಲ್ಲ. ಈಗಾಗಲೇ ತಂಡದಲ್ಲಿ ಸಮತೋಲನ ಕಾಯ್ದುಕೊಳ್ಳಲು ಪರದಾಡುತ್ತಿರುವ ಆರ್ ಸಿಬಿ ತಂಡಕ್ಕೆ ಇಂದು ನಡೆಯಲಿರುವ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಅವಲಭ್ಯರಾಗಿದ್ದಾರೆ.

ಈ ಬಗ್ಗೆ ಸ್ವತಃ ಡಿವಿಯಲಿಯರ್ಸ್ ಅವರೇ ತಮ್ಮ ಟ್ವೀಟರ್ ನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು, ಅದು ಹೀಗಿದೆ… ‘ಗಾಯದ ಸಮಸ್ಯೆಯಿಂದಾಗಿ ಇಂದು ನಡೆಯಲಿರುವ ಪಂದ್ಯಕ್ಕೆ ಅಲಭ್ಯವಾಗುತ್ತಿರುವುದು ತೀವ್ರ ಬೇಸರ ತಂದಿದೆ. ವಿರಾಟ್ ಕೊಹ್ಲಿ ಹಾಗೂ ಅವರ ತಂಡಕ್ಕೆ ಶುಭವಾಗಲಿ. ಈ ಪಂದ್ಯವನ್ನು ಎದುರುನೋಡೋಣ’

ಈ ಆವೃತ್ತಿಯಲ್ಲಿ ಕ್ರಿಸ್ ಗೇಲ್, ಶೇನ್ ವಾಟ್ಸನ್ ಅವರು ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಡಿವಿಲಿಯರ್ಸ್ ತಂಡದ ಪ್ರಮುಖ ಆಟಗಾರನಾಗಿದ್ದರು. ಈ ಪಂದ್ಯದಲ್ಲಿ ಎಬಿಡಿ ಅನುಪಸ್ಥಿತಿ ಆರ್ ಸಿಬಿ ತಂಡಕ್ಕೆ ದೊಡ್ಡ ನಷ್ಟವೇ ಆಗಿದ್ದು, ಈ ಹೊಡೆತದಿಂದ ತಂಡ ಚೇತರಿಸಿಕೊಂಡು ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕು.

Leave a Reply