ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದ ಶಾಹಿದ್ ಅಫ್ರೀದಿಗೆ ಕೊಹ್ಲಿ ಕೊಟ್ಟ ಉಡುಗೊರೆ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಕೊನೆಗೂ ಪಾಕಿಸ್ತಾನ ಆಟಗಾರ ಶಾಹೀದ್ ಅಫ್ರೀದಿ ಈ ಬಾರಿ ನಿಜವಾಗಿಯೂ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. ಈ ಹಿಂದೆ ಅನೇಕ ಬಾರಿ ವಿದಾಯ ಹೇಳಿ ನಂತರ ನಿರ್ಧಾರ ಬದಲಿಸಿದ್ದರು ಶಾಹೀದ್ ಅಫ್ರೀದಿ. ಆದರೆ ಈ ಬಾರಿ ವೆಸ್ಟ್ ಇಂಡೀಸ್ ಪ್ರವಾಸ ಮಾಡುತ್ತಿರುವ ಪಾಕಿಸ್ತಾನ ತಂಡದಲ್ಲಿ ಅಫ್ರೀದಿಗೆ ಸ್ಥಾನವಿಲ್ಲ. ಅದರೊಂದಿಗೆ ಅಫ್ರೀದಿ ನಿವೃತ್ತಿ ಖಚಿತವಾಗಿದೆ. ನಿವೃತ್ತಿ ಪಡೆದ ಬೆನ್ನಲ್ಲೇ ಅಫ್ರೀದಿಗೆ ಈಗ ಟೀಂ ಇಂಡಿಯಾ ಕಡೆಯಿಂದ ಗೌರವಪೂರ್ಣವಾಗಿ ನಾಯಕ ವಿರಾಟ್ ಕೊಹ್ಲಿ ಒಂದು ಉಡುಗೊರೆಯನ್ನು ಕೊಟ್ಟಿದ್ದಾರೆ.

ವಿರಾಟ್ ಕೊಹ್ಲಿ ಅವರ ಟೀಂ ಇಂಡಿಯಾ ಜೆರ್ಸಿಯ ಮೇಲೆ ‘ಪ್ರತಿಬಾರಿಯೂ ನಾವು ನಿಮ್ಮ ವಿರುದ್ಧ ಆಡಲು ಉತ್ಸುಕರಾಗಿದ್ದೆವು…’ ಎಂಬ ಸಂದೇಶದೊಂದಿಗೆ ತಂಡದ ಆಟಗಾರರೆಲ್ಲರೂ ಹಸ್ತಾಕ್ಷರಗಳನ್ನು ಹಾಕಿ ಅಫ್ರೀದಿ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಟೀಂ ಇಂಡಿಯಾ ಕೊಟ್ಟ ಈ ಉಡುಗೊರೆಯನ್ನು ಕರಾಚಿ ಮೂಲದ ಕ್ರೀಡಾ ವರದಿಗಾರ ಫೈಜಾನ್ ಲಖಾನಿ ತಮ್ಮ ಟ್ವೀಟರ್ ನಲ್ಲಿ ಹಾಕಿದ್ದು, ಅದು ಹೀಗಿದೆ…

ಸುಮಾರು 2 ದಶಕಕ್ಕೂ ಹೆಚ್ಚು ಕಾಲ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದ ಅಫ್ರೀದಿ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದಾರೆ. ಭಾರತ ಆಟಗಾರರೊಂದಿಗೆ ಉತ್ತಮ ಸ್ನೇಹ ಹೊಂದಿರುವ ಅಫ್ರೀದಿಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಟೀಂ ಇಂಡಿಯಾ ಇತರೆ ಆಟಗಾರರು ಶುಭಕೋರುತ್ತಾ ಈ ಉಡಗೊರೆ ನೀಡಿದ್ದಾರೆ.

Leave a Reply