ಬಿಜೆಪಿಯಲ್ಲಿ ಮುಗಿಯದ ಅಸಮಾಧಾನದ ಧಾರಾವಾಹಿ: ಈಶ್ವರಪ್ಪನವರಿಂದ ಅಶಿಸ್ತಿನ ಆರೋಪ

ಡಿಜಿಟಲ್ ಕನ್ನಡ ಟೀಮ್:

ಶಿಸ್ತಿನ ಪಕ್ಷ ಎಂದು ಹೆಸರಾಗಿರುವ ಬಿಜೆಪಿಯಲ್ಲೂ ಕಾಂಗ್ರೆಸ್‍ನಂತೆ ಅಶಿಸ್ತು ಇದೆ ಎಂದಿದ್ದಾರೆ ಕೆ.ಎಸ್.ಈಶ್ವರಪ್ಪ.

ರಾಜ್ಯ ಬಿಜೆಪಿಯಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯವನ್ನು ಫೆಬ್ರವರಿ 10ರೊಳಗೆ ಶಮನ ಮಾಡಲು ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಾಲ್ವರು ಸದಸ್ಯರ ಸಮಿತಿ ನೇಮಕ ಮಾಡಿದ್ದರೂ ಇದುವರೆಗೆ ಸಮಿತಿ ಒಂದೂ ಸಭೆ ನಡೆಸದೇ ಇರುವುದು ಅಶಿಸ್ತು ತೋರಿಸುತ್ತದೆ ಎಂಬುದವರ ವಾದ.

ಬಿಜೆಪಿ ಶಿಸ್ತಿನ ಪಕ್ಷ. ಬಿ.ಎಸ್.ಯಡಿಯೂರಪ್ಪ ಅವರು ಮುಂದಿನ ಮುಖ್ಯಮಂತ್ರಿ ಎಂದು ರಾಷ್ಟ್ರೀಯ ನಾಯಕರು ಘೋಷಿಸಿದ ಬಳಿಕ ಎಲ್ಲರೂ ಒಟ್ಟಾಗಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆ ಸ್ಥಾನಕ್ಕೆ ಬೇರೆ ಹೆಸರನ್ನು ಮನಸ್ಸಿನಲ್ಲಿ ಅಂದುಕೊಳ್ಳುವುದೂ ಅಶಿಸ್ತು ಎನ್ನುವ ಅಭಿಪ್ರಾಯ ನಮ್ಮ ಪಕ್ಷದವರದ್ದು. ಆದರೆ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಪಕ್ಷದಲ್ಲಿ ಅಶಿಸ್ತು ಮೂಡಿದೆ. ಇದು ಬೇಸರದ ಸಂಗತಿ.

ಈ ಕಾರಣದಿಂದಾಗಿಯೇ ಬಿಜೆಪಿಯ ನಿಷ್ಠಾವಂತ ಮುಖಂಡರು ಬುಧವಾರ ತುಮಕೂರಿನಲ್ಲಿ ಸಭೆ ನಡೆಸಿ ಪಕ್ಷ ಉಳಿಸಲು ಏ. 27ರಂದು ಬೆಂಗಳೂರಿನಲ್ಲಿ ಕಾರ್ಯಕರ್ತರ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಈ ಸಭೆಯಲ್ಲಿ ಎಲ್ಲಾ ಜಿಲ್ಲೆಗಳ ಸುಮಾರು ಒಂದು ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ ಎಂದಿದ್ದಾರೆ.

1 COMMENT

  1. These discredited so called leaders including the state president unfit for Modiji’s dream,it is high time to clean and infuse young blood

Leave a Reply