ಡ್ವೈನ್ ಬ್ರಾವೊ ಹಾಡಿನಲ್ಲಿ ಕೊಹ್ಲಿ- ಧೋನಿ..! ಏನಿದು ಹೊಸ ಸುದ್ದಿ?

ಡಿಜಿಟಲ್ ಕನ್ನಡ ಟೀಮ್:

ಕಳೆದ ವರ್ಷ ಟಿ20 ವಿಶ್ವಕಪ್ ವೇಳೆ ‘ಚಾಂಪಿಯನ್’ ಎಂಬ ಹಾಡಿನ ಮೂಲಕ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೈನ್ ಬ್ರಾವೊ ಭಾರತೀಯ ಅಭಿಮಾನಿಗಳ ಮನಸು ಗೆದ್ದಿದ್ದು ನಿಮ್ಮಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ ಈಗ ಇವರಿಂದ ಮತ್ತೊಂದು ಕುತೂಹಲಕಾರಿ ಸುದ್ದಿ ಹೊರ ಬಂದಿದೆ. ಅದೇನೆಂದರೆ, ಬಾವ್ರೊ ಅವರು ಮತ್ತೊಂದು ಹಾಡು ಮಾಡುತ್ತಿದ್ದಾರೆ. ಈ ಹಾಡಿನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಕೊಹ್ಲಿ ಹೆಸರೂ ಕೇಳಿಬಂದಿರುವುದು ವಿಶೇಷ!

ಹೌದು, ಬ್ರಾವೊ ಅವರು ಕೊಹ್ಲಿ ಹಾಗೂ ಧೋನಿ ಅವರ ಕುರಿತಾಗಿ ಹಾಡು ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡುತ್ತಿರುವುದು ನಿನ್ನೆಯಿಂದ. ಗುಜರಾತ್ ಲಯನ್ಸ್ ತಂಡದ ಟ್ವಿಟರ್ ಖಾತೆಯಲ್ಲಿ ಪ್ರಕಟವಾದ ಬ್ರಾವೊ ಸಹೋದರರ ಮಾತುಕತೆ ವೇಳೆ ಡ್ವೈನ್ ಬ್ರಾವೊ ಈ ಹಾಡಿನ ಸಾಲನ್ನು ಹೇಳಿದ್ದು, ಇದರಲ್ಲಿ ಕೊಹ್ಲಿ ಹಾಗೂ ಧೋನಿ ಅವರ ಹೆಸರು ಕೇಳಿ ಬಂದಿದೆ. ಹೀಗಾಗಿ ಸಹಜವಾಗಿಯೇ ಭಾರತೀಯ ಅಭಿಮಾನಿಗಳಲ್ಲಿ ಬ್ರಾವೊ ಕುತೂಹಲ ಮೂಡಿಸಿದ್ದಾರೆ.

https://twitter.com/TheGujaratLions/status/855321635229900801?ref_src=twsrc%5Etfw&ref_url=http%3A%2F%2Fwww.indiatimes.com%2Fsports%2Fafter-his-hit-number-champion-dwayne-bravo-s-next-song-may-well-be-about-virat-kohli-and-ms-dhoni-276153.html

ಬ್ರಾವೊ ಅವರು ಹೇಳಿದ ಹಾಡಿನ ಆ ಒಂದು ಸಾಲು ಹೀಗಿದೆ… “We go over to India, India, India. I call up a boy named Kohli, Kohli Kohli. We tell him to WhatsApp Dhoni.”

Leave a Reply